ಶಿವಣ್ಣನ ಬಗ್ಗೆ ಮ್ಯಾಕ್ಸ್‌ವೆಲ್ ಹೇಳಿದ್ದೇನು ಗೊತ್ತಾ!?

Date:

ಗ್ಲೆನ್ ಮ್ಯಾಕ್ಸ್ ವೆಲ್ ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿ ಉತ್ತಮ ಪ್ರದರ್ಶನವನ್ನು ನೀಡಿದರು. ಕಳೆದ ಮೂರ್ನಾಲ್ಕು ಐಪಿಎಲ್ ಆವೃತ್ತಿಗಳಿಂದ ಮಂಕಾಗಿದ್ದ ಗ್ಲೆನ್ ಮ್ಯಾಕ್ಸ್ ವೆಲ್ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ದೊಡ್ಡದಾಗಿ ಕಮ್ ಬ್ಯಾಕ್ ಮಾಡಿದ್ದಾರೆ.

 

ಟೀಕಾಕಾರರಿಗೆಲ್ಲಾ ತಮ್ಮ ಬ್ಯಾಟ್ ಮೂಲಕ ಉತ್ತರ ನೀಡಿದ ಗ್ಲೆನ್ ಮ್ಯಾಕ್ಸ್ ವೆಲ್ ಅವರನ್ನು ಡ್ಯಾನಿಶ್ ಸೇಠ್ ಇತ್ತೀಚೆಗಷ್ಟೇ ಸಂದರ್ಶನವನ್ನು ಮಾಡಿದ್ದಾರೆ. ಹೌದು ಆರ್ ಸಿಬಿ ಇನ್ ಸೈಡರ್ ಸಂದರ್ಶನದಲ್ಲಿ ಗ್ಲೆನ್ ಮ್ಯಾಕ್ಸ್ ವೆಲ್ ಅವರಿಗೆ ಡ್ಯಾನಿಶ್ ಸೇಠ್ ಕೆಲವೊಂದಿಷ್ಟು ಪ್ರಶ್ನೆಗಳನ್ನು ಹಾಕಿ ಚಿಟ್ ಚಾಟ್ ನಡೆಸಿದರು. ಇದೇ ಸಂದರ್ಶನದಲ್ಲಿ ಡ್ಯಾನಿಶ್ ಸೇಠ್ ಗ್ಲೆನ್ ಮ್ಯಾಕ್ಸ್ ವೆಲ್ ಅವರ ಬಾಯಲ್ಲಿ ಕನ್ನಡದ ಹಾಡೊಂದನ್ನು ಹಾಡಿದರು.

 

 

ಶಿವರಾಜ್ ಕುಮಾರ್ ಅಭಿನಯದ ಜೋಗಿ ಚಿತ್ರದ ಹೊಡಿಮಗ ಹೊಡಿಮಗ ಹಾಡನ್ನು ಡ್ಯಾನಿಶ್ ಸೇಠ್ ಗ್ಲೆನ್ ಮ್ಯಾಕ್ಸ್ ವೆಲ್ ಅವರ ಬಾಯಿಂದ ಹಾಡಿಸಿದರು. ಕನ್ನಡ ಬರದಿದ್ದರೂ ಡ್ಯಾನಿಶ್ ಸೇಠ್ ಹೇಳಿಕೊಟ್ಟದ್ದನ್ನು ಕೇಳಿಸಿಕೊಂಡು ಮ್ಯಾಕ್ಸ್ ವೆಲ್ ಹೊಡಿಮಗ ಹಾಡನ್ನು ಚೆನ್ನಾಗಿಯೇ ಹಾಡಿದರು. ಹಾಡನ್ನು ಹಾಡಿ ಮುಗಿಸಿದ ನಂತರ ಈ ಹಾಡು ಯಾವ ನಟನದ್ದು ಗೊತ್ತಾ ಎಂದು ಡ್ಯಾನಿಶ್ ಸೇಠ್ ಕೇಳಿದಾಗ ‘ಹೌದು ಗೊತ್ತು ಇದು ನಮ್ಮ ಶಿವಣ್ಣ ಅಭಿನಯದ ಹಾಡು’ ಎಂದು ಗ್ಲೆನ್ ಮ್ಯಾಕ್ಸ್ ವೆಲ್ ಉತ್ತರಿಸುವುದರ ಮೂಲಕ ಎಲ್ಲರೂ ಆಶ್ಚರ್ಯಕ್ಕೊಳಗಾಗುವಂತೆ ಮಾಡಿದ್ದಾರೆ.

 

 

Share post:

Subscribe

spot_imgspot_img

Popular

More like this
Related

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್ ಬಾಗಲಕೋಟೆ: ಮುಖ್ಯಮಂತ್ರಿ...

ಸಾಲುಸಾಲು ರಜೆ ಮುಗಿಸಿ ಬೆಂಗಳೂರಿಗೆ ಸಿಟಿ ಮಂದಿ ವಾಪಸ್: ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ದಟ್ಟಣೆ

ಸಾಲುಸಾಲು ರಜೆ ಮುಗಿಸಿ ಬೆಂಗಳೂರಿಗೆ ಸಿಟಿ ಮಂದಿ ವಾಪಸ್: ಮೆಜೆಸ್ಟಿಕ್ ಮೆಟ್ರೋ...

ಸಿದ್ದರಾಮಯ್ಯ ಪುತ್ರ ಯತೀಂದ್ರ ಹೇಳಿಕೆ ವಿಚಾರ: ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೇ ಏನು..?

ಸಿದ್ದರಾಮಯ್ಯ ಪುತ್ರ ಯತೀಂದ್ರ ಹೇಳಿಕೆ ವಿಚಾರ: ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೇ...

ಸೈಕ್ಲೋನ್ ಪ್ರಭಾವ: IMD ಯಿಂದ ಆರೆಂಜ್ ಅಲರ್ಟ್: ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ

ಸೈಕ್ಲೋನ್ ಪ್ರಭಾವ: IMD ಯಿಂದ ಆರೆಂಜ್ ಅಲರ್ಟ್: ಹಲವು ಜಿಲ್ಲೆಗಳಲ್ಲಿ ಭಾರೀ...