ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಬಗ್ಗೆ ಇರುವ ಎಲ್ಲಾ ಅಡೆತಡೆಗಳು ಮುಂದಿನ 10-15 ದಿನಗಳಲ್ಲಿ ನಿವಾರಣೆ ಆಗಲಿದೆ ಮತ್ತು ಡಿಸೆಂಬರ್ ಮೊದಲ ವಾರದಲ್ಲಿ ಸರ್ಕಾರ ರಚನೆಯಾಗುವ ಸಾಧ್ಯತೆ ಇದೆ. ನಾಳೆ ಸ್ಪಷ್ಟ ಚಿತ್ರಣ ತಿಳಿದುಬರಲಿದೆ ಎಂದು ರಾವುತ್ ತಿಳಿಸಿದರು.
ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಶಿವಸೇನೆ ಜತೆಗಿನ ಮೈತ್ರಿಗೆ ಒಪ್ಪಿಗೆ ಸೂಚಿಸಿರುವುದಾಗಿ ಎನ್ ಸಿಪಿ ಸಂಸದ ನಾಯಕ ಮಜೀದ್ ಮೆನನ್ ತಿಳಿಸಿದ್ದಾರೆ.