ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಇಂಗ್ಲೆಂಡ್ನಿಂದ 3ನೇ ವಿಶ್ವಕಪ್ ಗೆದ್ದುಕೊಂಡೇ ಭಾರತಕ್ಕೆ ವಾಪಸ್ ಆಗುತ್ತೆ ಎನ್ನಲಾಗುತ್ತಿತ್ತು. ಅದಕ್ಕೆ ತಕ್ಕಂತೆ ಕೊಹ್ಲಿ ಪಡೆ ಲೀಗ್ ಹಂತದಲ್ಲಿ ಚಾಂಪಿಯನ್ ಆಟವನ್ನೇ ಆಡಿತ್ತು. ಆದರೆ, ಸೆಮಿಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ 18ರನ್ಗಳಿಂದ ಸೋಲನುಭಿಸಿ, ಟೂರ್ನಿಯಿಂದ ಹೊರಬಿದ್ದಿದೆ.
ಇದರ ಬೆನ್ನಲ್ಲೇ ಮಧ್ಯಮ ಕ್ರಮಾಂಕವನ್ನು ಬಲಪಡಿಸಲು ಬಿಸಿಸಿಐ ಚಿಂತನೆ ನಡೆಸಿದೆ. ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳು ಕೈ ಕೊಟ್ಟರೆ ಮಧ್ಯಮ ಕ್ರಮಾಂಕದಲ್ಲಿ ಆಧಾರವಾಗ ನಿಲ್ಲಬಲ್ಲ ಬ್ಯಾಟ್ಸ್ಮನ್ಗಳು ಬೇಕು. ಆರಂಭಿಕ ಆಟಗಾರ ಶಿಖರ್ ಧವನ್ ಗಾಯಗೊಂಡು ಟೂರ್ನಿಯಿಂದ ಹೊರಬಂದಿದ್ದರಿಂದ 4ನೇ ಕ್ರಮಾಂಕದ ಆಧಾರಸ್ತಂಬವಾಗಿದ್ದ ಕನ್ನಡಿಗ ಕೆ.ಎಲ್ ರಾಹುಲ್ ಆರಂಭಿಕರಾಗಿ ಕಣಕ್ಕಿಳಿಯುವ ಜವಬ್ದಾರಿಯನ್ನು ನಿಭಾಯಿಸಿದ್ದರು. 4ನೇ ಕ್ರಮಾಂಕದಲ್ಲಿ ವಿಜಯ್ ಶಂಕರ್ ಆ ಬಳಿಕ ರಿಷಭ್ ಪಂತ್ ಕಣಕ್ಕೆ ಇಳಿದಿದ್ದರು. ಈಗ ಮದ್ಯಮ ಕ್ರಮಾಂಕ್ಕೆ ಶುಭ್ಮನ್ ಗಿಲ್ ಅವರ ಹೆಸರು ಹೇಳಿ ಬಂದಿದೆ.
ಹೌದು, ಶ್ರೀಲಂಕಾ ತಂಡದ ಮಾಜಿ ಕೋಚ್ ಮತ್ತು ಭಾರತದ ಅಂಡರ್ 19 ತಂಡದ ಮಾಜಿ ಕೋಚ್ ಡೇವ್ ವಾಟ್ಮೋರ್, ಟೀಮ್ ಇಂಡಿಯಾದ 4ನೇ ಬ್ಯಾಟಿಂಗ್ ಕ್ರಮಾಂಕಕ್ಕೆ ಯುವ ಬ್ಯಾಟ್ಸ್ಮನ್ ಶುಭ್‌ಮಾನ್ ಗಿಲ್ ಸೂಕ್ತ ಆಟಗಾರ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಕ್ರಮಾಂಕದಲ್ಲಿ ಗಿಲ್‌ಗೆ ಹೆಚ್ಚಿನ ಅವಕಾಶ ನೀಡಬೇಕು ಎಂದಿದ್ದಾರೆ.
ಕಳೆದ ಜನವರಿಯಲ್ಲಿ ಭಾರತ ನ್ಯೂಜಿಲೆಂಡ್ ಪ್ರವಾಸದಲ್ಲಿ ಗಿಲ್ ಒಡಿಐಗೆ ಪದಾರ್ಪಣೆ ಮಾಡಿದ್ದರು. ಅಲ್ಲಿ ಉತ್ತಮ ಪ್ರದರ್ಶನವನ್ನೂ ನೀಡಿದ್ದರು. ಸದ್ಯ ಅವರು ಭಾರತ ಎ ತಂಡದಲ್ಲಿ ಆಡ್ತಿದ್ದಾರೆ.
ಧೋನಿ ನಿವೃತ್ತಿ ಬಗ್ಗೆ ಮಾತಾಡಿದ ಅವರು, ಎಷ್ಟು ಸಮಯ ಆಡಬೇಕು ಅನ್ನೋದನ್ನು ಧೋನಿಯೇ ನಿರ್ಧರಿಸಬೇಕು. ಬೇರಾರು ಏನೂ ಹೇಳಬಾರದು ಅಂತಲೂ ಹೇಳಿದ್ದಾರೆ.