ಶುರುವಾಯಿತು ಮಂಗಳೂರು ದಸರಾ

Date:

ಮೈಸೂರು ದಸರಾ ಬಳಿಕ ರಾಜ್ಯದಲ್ಲೇ ಅತೀ ಪ್ರಸಿದ್ಧಿ ಪಡೆದ ಮಂಗಳೂರು ದಸರಾ ಗೆ ಚಾಲನೆ ದೊರೆತಿದೆ..ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುವ ಮಂಗಳೂರು ದಸರಾ ಗೆ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಚಾಲನೆ ನೀಡಿದ್ದಾರೆ…ಶಾರಾದಾ ಮಾತೆಯ ಮೂರ್ತಿ ಪ್ರತಿಷ್ಠಾಪನೆಯೊಂದಿಗೆ ಹತ್ತು ದಿನಗಳ ಕಾಲ ನಡೆಯುವ ಮಂಗಳೂರು ದಸರಾ ಗೆ ಚಾಲನೆ ಸಿಕ್ಕಿದೆ..ಈ ಬಾರಿ ನಮ್ಮ ದಸರಾ- ನಮ್ಮ ಸುರಕ್ಷತೆ ಎಂಬ ಧ್ಯೇಯವಾಕ್ಯದಡಿ ವೈಭವದ ದಸರಾ ನಡೆಯಲಿದೆ..

ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಮಂಟಪದಲ್ಲಿ ಶಾರಾದಾ ಮಾತೆ, ಮಹಾಗಣಪತಿ ಸಹಿತ ನವದುರ್ಗೆಯರ ಪ್ರತಿಷ್ಠಾಪನೆ ಮಾಡಲಾಗಿದೆ..ಆದಿಶಕ್ತಿ, ಶೈಲಪುತ್ರಿ,ಬ್ರಹ್ಮಚಾರಿಣಿ,ಚಂದ್ರಘಂಟಾ,ಕೂಷ್ಮಾಂಡಿನಿ,ಸ್ಕಂದಮಾತಾ,ಕಾತ್ಯಾಯಿನಿ,ಮಹಾಕಾಳಿ,ಮಹಾಗೌರಿ,ಸಿದ್ಧಿಧಾತ್ರಿ ಮೂರ್ತಿ ಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ..

ಅ.16 ರವರೆಗೆ ಮಂಗಳೂರು ದಸರಾ ಉತ್ಸವ ನಡೆಯಲಿದೆ..ಅ.16ರಂದು ಸಂಜೆ ಪೂಜೆ ಸಂಪನ್ನಗೊಂಡ ಬಳಿಕ ರಾತ್ರಿ ಶ್ರೀ ಶಾರದಾ ಮಾತೆ,ಶ್ರೀ ಮಹಾಗಣಪತಿ ದೇವರ ಸಹಿತ ನವದುರ್ಗೆಯವರ ಮೂರ್ತಿಯನ್ನು ದೇವಳಕ್ಕೆ ಒಂದು ಸುತ್ತು ಪ್ರದಕ್ಷಿಣೆ ಮಾಡಿ,ದೇವಳದ ಕಲ್ಯಾಣಿಯಲ್ಲಿ ಜಲಸ್ತಂಭನ ಮಾಡಲಾಗುತ್ತದೆ…

ಕೊರೊನಾ ಕಾರಣದಿಂದ ನವದುರ್ಗೆಯರನ್ನು ದೇವಳಕ್ಕೆ ಪ್ರದಕ್ಷಿಣೆ ನವದುರ್ಗೆಯರ ಮೂರ್ತಿಯನ್ನು ವಿಸರ್ಜನೆ ಮಾಡಲಾಗುತ್ತದೆ..ಈ ಹಿಂದೆ ಇಡೀ ಮಂಗಳೂರು ನಗರದಲ್ಲಿ ಟ್ಯಾಬ್ಲೋ,ನವದುರ್ಗೆಯ ಮೂರ್ತಿಗಳನ್ನು ಮೆರವಣಿಗೆ ಮಾಡಲಾಗುತಿತ್ತು..ರಾತ್ರಿಯಿಂದ ಬೆಳಗ್ಗಿನವರೆಗೆ ಮೆರವಣಿಗೆ ನಡೆದು ಮುಂಜಾನೆ ವೇಳೆಗೆ ಕ್ಷೇತ್ರದ ಕಲ್ಯಾಣಿಯಲ್ಲಿ ಜಲಸ್ತಂಭನ ಮಾಡಲಾಗುತಿತ್ತು..ಈ ಮೆರವಣಿಗೆಯಲ್ಲಿ ಲಕ್ಷಾಂತರ ಜನ ಭಾಗವಹಿಸುತ್ತಿದ್ರು..ಆದರೆ ಕಳೆದೆರಡು ವರ್ಷಗಳಿಂದ ಕೊರೊನಾ ಕಾರಣದಿಂದ ಮೆರವಣಿಗೆಯನ್ನು ಸ್ಥಗಿತಗೊಳಿಸಿ ಸರಳವಾಗಿ ದಸರಾ ಆಚರಣೆ ಮಾಡಲಾಗುತ್ತಿದೆ..

ಮಂಗಳೂರು ದಸರಾ ಹಿನ್ನಲೆಯಲ್ಲಿ ಮಂಗಳೂರಿನ ರಾಜಬೀದಿಗಳು ವಿದ್ಯುತ್ ದೀಪಗಳಿಂದ ಅಲಂಕೃತಗೊಂಡು ಸಿಂಗಾರವಾಗಿದೆ..ಮಂಗಳೂರು ದಸರಾದ ಪ್ರಮುಖ ಆಕರ್ಷಣೆ ವಿದ್ಯುತ್ ದೀಪಾಲಂಕಾರ..ಕಳೆದ ವರ್ಷ ಕೇವಲ ಕುದ್ರೋಳಿ ದೇವಸ್ಥಾನದ ಆವರಣದಲ್ಲಿ ಮಾತ್ರ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು…ಆದರೆ ಈ ಬಾರಿ ಇಡೀ ಮಂಗಳೂರು ನಗರದಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.ಈ ಬಾರಿ ಮಂಗಳೂರು ಮಹಾನಗರ ಪಾಲಿಕೆ 60 ಲಕ್ಷ ರೂಪಾಯಿ ವೆಚ್ಚದಲ್ಲಿ ನಗರಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ..

ಕ್ಷೇತ್ರದ ಶಾರಾದಾಮಾತೆ,ಗಣಪತಿ,ನವದುರ್ಯೆಯರ ಮೂರ್ತಿಯನ್ನು ನೋಡೋಕೆಂದೇ ಜಿಲ್ಲೆ,ರಾಜ್ಯದ ವಿವಿಧ ಭಾಗಗಳಿಂದ,ಭಕ್ತರು ಆಗಮಿಸುತ್ತಾರೆ..ಶಾರದೆಯ ಮಂದಸ್ಮಿತ ಮೂರ್ತಿಯನ್ನು ನೋಡೋಕೆ ಸಾವಿರಾರು ಮಂದಿ ಕಾತುರದಿಂದ ಕಾಯುತ್ತಾರೆ.ಶಿವಮೊಗ್ಗದ ದ11ಮಂದಿ ಕಲಾವಿದರ ತಂಡ ಈ ಮೂರ್ತಿಯನ್ನು ಮಾಡಿದ್ದು,25 ದಿನಗಳ ಕಲಾವಿದರ ಪರಿಶ್ರಮದಿಂದ ನವದುರ್ಗೆಯರ ಸುಂದರ ಮೂರ್ತಿ ವಿರಾಜಮಾನವಾಗಿದೆ..

ಈ ಬಾರಿ ಕ್ಷೇತ್ರದಲ್ಲಿ ಕೊರೊನಾ ಲಸಿಕೆ ಕೌಂಟರ್ ಹಾಕಿ,ಲಸಿಕೆಯಾಗದ ಭಕ್ತರಿಗೆ ಉಪಯೋಗಕಾರಿಯಾಗಲಿದೆ..ದೇವಳದ ಆವರಣದಲ್ಲಿ ಎಲ್ ಈ ಡಿ ಸ್ಕ್ರೀನ್ ಹಾಕಲಾಗಿದ್ದು,ಆ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜನರಿಗೆ ವೀಕ್ಷಣೆ ಮಾಡಲು ಅವಕಾಶ ನೀಡಲಾಗಿದೆ..ಒಟ್ಟಿನ್ನಲ್ಲಿ ಮಾಜಿ ಕೇಂದ್ರ ಬಿ ಜನಾರ್ದನ ಪೂಜಾರಿಯವರ ಪರಿಕಲ್ಪನೆಯ ಮಂಗಳೂರು ದಸರಾ ವಿಶ್ವವಿಖ್ಯಾತಿಯನ್ನು ಪಡೆದಿದ್ದು,ಕೊರೊನಾ ಕಾರಣದಿಂದ ಸರಳಸುಂದರವಾಗಿ ನಡೆಯಲಿದೆ..

Share post:

Subscribe

spot_imgspot_img

Popular

More like this
Related

ರಾಜ್ಯದಲ್ಲಿ ಅಗ್ನಿಶಾಮಕ ವಾಹನಗಳ ಖರೀದಿಗೆ ಕ್ರಮ: ಡಾ.ಜಿ.ಪರಮೇಶ್ವರ

ರಾಜ್ಯದಲ್ಲಿ ಅಗ್ನಿಶಾಮಕ ವಾಹನಗಳ ಖರೀದಿಗೆ ಕ್ರಮ: ಡಾ.ಜಿ.ಪರಮೇಶ್ವರ ಬೆಳಗಾವಿ: ರಾಜ್ಯದ ವಿವಿಧ ಅಗ್ನಿಶಾಮಕ...

ಬೆಂಗಳೂರು ರಸ್ತೆ ರೋಡ್ ರೇಜ್: ಯುವ ನಿರ್ದೇಶಕ ಸೂರ್ಯ ಹೊಸ ಶಾರ್ಟ್ ಫಿಲ್ಮ್

ಬೆಂಗಳೂರು ರಸ್ತೆ ರೋಡ್ ರೇಜ್: ಯುವ ನಿರ್ದೇಶಕ ಸೂರ್ಯ ಹೊಸ ಶಾರ್ಟ್...

ವಸತಿ ರಹಿತ ಮೀನುಗಾರರಿಗೆ 10,000 ವಸತಿ ನೀಡಿದ್ದೇವೆ: ಸಚಿವ ಮಂಕಾಳ ಎಸ್. ವೈದ್ಯ

ವಸತಿ ರಹಿತ ಮೀನುಗಾರರಿಗೆ 10,000 ವಸತಿ ನೀಡಿದ್ದೇವೆ: ಸಚಿವ ಮಂಕಾಳ ಎಸ್....

ನವನಗರದಲ್ಲಿ 200 ಎಕರೆ ಪ್ರದೇಶದಲ್ಲಿನ ವಸತಿ ನಿವೇಶಗಳನ್ನು ವಾಣಿಜ್ಯ ನಿವೇಶನಗಳನ್ನಾಗಿ ಪರಿವರ್ತನೆ ಮಾಡಲು ಪ್ರಸ್ತಾವನೆ: ಡಿ.ಕೆ.ಶಿವಕುಮಾರ್

ನವನಗರದಲ್ಲಿ 200 ಎಕರೆ ಪ್ರದೇಶದಲ್ಲಿನ ವಸತಿ ನಿವೇಶಗಳನ್ನು ವಾಣಿಜ್ಯ ನಿವೇಶನಗಳನ್ನಾಗಿ ಪರಿವರ್ತನೆ...