ಹಿರಿಯ ನಟ ಅಶ್ವಥ್ ಅವರ ಪುತ್ರ ಶಂಕರ್ ಅಶ್ವಥ್ ಅವರು ಕಷ್ಟದಿಂದ ಜೀವನ ಸಾಗಿಸಲು ಊಬರ್ ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಹೀಗೆ ಹಿಂದೊಂದು ಬಾರಿ ಶಂಕರ್ ಅವರ ಕಷ್ಟವನ್ನು ನೋಡಲಾಗದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಯಜಮಾನ ಚಿತ್ರದಲ್ಲಿ ಪಾತ್ರವನ್ನು ನೀಡುವುದರ ಮೂಲಕ ಆಸರೆಯಾಗಿದ್ದರು. ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರುವ ದರ್ಶನ್ ಅವರೇ ಶಂಕರ್ ಅಶ್ವತ್ಥ್ ಅವರನ್ನು ಕರೆಸಿ ಪಾತ್ರವನ್ನು ನೀಡಿದರೆ ಇತ್ತೀಚೆಗಷ್ಟೇ ಚಿತ್ರತಂಡವೊಂದು ಶಂಕರ್ ಅಶ್ವತ್ಥ್ ಅವರಿಗೆ ಊಟ ನೀಡದೆ ಅವಮಾನ ಮಾಡಿದೆ.
ಹೌದು ಶಂಕರ್ ಅಶ್ವತ್ಥ್ ಅವರಿಗೆ ಚಿತ್ರೀಕರಣ ಇದೆ ಎಂದು ನೂರಾರು ಕಿಲೋಮೀಟರ್ ಸಂಚರಿಸಿ ಊಟದ ಸಮಯವಾದರೂ ಸಹ ಊಟವನ್ನು ನೀಡದೆ ಕಡೆಗಣಿಸಿದ ವಿಷಯವನ್ನು ಸ್ವತಃ ಶಂಕರ್ ಅಶ್ವತ್ಥ್ ಅವರೇ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ಕಾರು ಚಲಾಯಿಸುವಾಗ ನಾನು ಊಬರ್ ಚಾಲಕ ಚಿತ್ರದಲ್ಲಿ ನಟಿಸುವ ವೇಳೆ ನಾನೊಬ್ಬ ನಟ ಹೀಗೆ ನೂರಾರು ಕಿಲೋಮೀಟರ್ ಚಿತ್ರೀಕರಣಕ್ಕೆಂದು ಕರೆಸಿ , ಊಟವನ್ನು ನೀಡದೆ ಹಸಿವಿನಿಂದ ಇರುವಂತೆ ಮಾಡಿದೆ ಒಂದು ಪ್ರೊಡಕ್ಷನ್ ಬ್ಯಾನರ್ ಎಂದು ಶಂಕರ್ ಅಶ್ವತ್ಥ್ ಅವರು ತಮ್ಮ ಅಳಲು ತೋಡಿಕೊಂಡಿದ್ದಾರೆ.