ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದ ಶ್ರೀರಾಮುಲು, ಆರೋಗ್ಯ ಖಾತೆ ಜೊತೆಗೆ ಹೆಚ್ಚುವರಿಯಾಗಿ ಮತ್ತೊಂದು ಖಾತೆ ನೀಡಬೇಕೆಂದು ಮನವಿ ಮಾಡಿದ್ದಾರೆ. ನಾನು ಆ ಕೆಲಸವನ್ನು ನಿಷ್ಠೆಯಿಂದ ಮಾಡುತ್ತೇನೆ ಎಂದು ಮನವಿ ಮಾಡಿದ್ದಾರೆ .
ಪಕ್ಷಕ್ಕಾಗಿ ನಾನು ಡಿಸಿಎಂ ಹುದ್ದೆಯನ್ನೇ ಬೇಡವೆಂದು ಹೇಳಿದ್ದೆ. ಹಾಗೆಂದು ಕೊನೆಪಕ್ಷ ನೀವು ದೊಡ್ಡ ಖಾತೆ ಕೊಡುತ್ತೀರಿ ಎಂದು ಭಾವಿಸಿದ್ದೆ. ಆದರೆ, ಹೀಗೆ ಮಾಡಿರುವುದರಿಂದ ನನಗೆ ಬೇಸರವಾಗಿದೆ ಎಂದು ಶ್ರೀರಾಮುಲು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಇನ್ನೊಂದು ಕಡೆ ಶ್ರೀರಾಮುಲು ಅಭಿಮಾನಿಗಳು ಕೂಡ ಯಡಿಯೂರಪ್ಪ ಮೇಲೆ ಕಿಡಿಕಾರಿದ್ದಾರೆ .