ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಗೆ ಆಟಗಾರರಿಂದಲೇ ಬೆದರಿಕೆ!

Date:

ಕಳೆದ ಕೆಲವು ವರ್ಷಗಳಿಂದ ಶ್ರೀಲಂಕಾ ಕ್ರಿಕೆಟ್ ತಂಡ ಎಲ್ಲಾ ಕ್ರಿಕೆಟ್ ಮಾದರಿಗಳಲ್ಲಿ ಪರದಾಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಹೆಚ್ಚಿನ ಸರಣಿಗಳನ್ನು ಲಂಕಾ ಸಾಲು ಸಾಲಾಗಿ ಸೋಲುತ್ತಿದೆ. ಅಲ್ಲದೆ ಕಳೆದ 5 ವರ್ಷಗಳಲ್ಲಿ ಶ್ರೀಲಂಕಾ ಕ್ರಿಕೆಟ್ ಬೋರ್ಡ್ (ಎಸ್‌ಸಿಎಲ್) ಏಕದಿನ ಕ್ರಿಕೆಟ್‌ಗೆ ಸಂಬಂಧಿಸಿ ಒಟ್ಟು 9 ನಾಯಕರನ್ನು ಬದಲಿಸಿದೆ.

ಕುಸಾಲ್ ಪೆರೆರಾ ಸದ್ಯ ಲಂಕಾ ತಂಡದ ಆಟಗಾರರಾಗಿದ್ದಾರೆ. ಈಗ ಶ್ರೀಲಂಕಾ ಕ್ರಿಕೆಟ್‌ಗೆ ಮತ್ತೊಂದು ತಲೆನೋವು ಎದುರಾಗಿದೆ. ಲಂಕಾ ಬೋರ್ಡ್‌ನ ಬಹುತೇಕ ಆಟಗಾರರಿಗೆ ಹೊಸ ಶ್ರೇಣೀಕರಣ ವ್ಯವಸ್ಥೆ ಖುಷಿ ನೀಡಿಲ್ಲ. ಹೀಗಾಗಿ ಕ್ರಿಕೆಟಿಗರೆಲ್ಲ ಸೇರಿ, ತಾವು ಬೇಗನೆ ನಿವೃತ್ತಿ ಘೋಷಿಸುವುದಾಗಿ ಎಸ್‌ಸಿಎಲ್‌ಗೆ ಬೆದರಿಕೆಯೊಡ್ಡುತ್ತಿರುವುದಾಗಿ ವರದಿಯೊಂದು ಹೇಳಿದೆ.

ವರದಿಯ ಪ್ರಕಾರ, ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಆಟಗಾರರಿಗೆ ನೂತನ ಶ್ರೇಣೀಕರಣ (ಗ್ರೇಡಿಂಗ್) ಪರಿಚಯಿಸಿದೆ. ಅದರ ಪ್ರಕಾರ ಫಿಟ್ನೆಸ್, ಶಿಸ್ತು, ಕಳೆದ 5 ವರ್ಷಗಳಲ್ಲಿ ದೇಸಿ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿನ ಪ್ರದರ್ಶನ, ನಾಯಕತ್ವದ ಕೌಶಲ ಮತ್ತು ಒಟ್ಟಾರೆ ಆಟಗಾರನ ಮೌಲ್ಯ ಇವುಗಳನ್ನೆಲ್ಲ ಸೇರಿಸಿ ಒಟ್ಟು 4 ವಿಭಾಗಗಳಲ್ಲಿ ಅಂಕ ನೀಡಿ ಶ್ರೇಣಿ ನೀಡಲಾಗುತ್ತದೆ.

ಆದರೆ ಕ್ರಿಕೆಟ್ ಬೋರ್ಡ್‌ನ ಈ ಶ್ರೇಣೀಕರಣ ವ್ಯವಸ್ಥೆ ಆಟಗಾರರಿಗೆ ಸರಿ ಕಾಣಿಸಿಲ್ಲ. ಅವರು, ಈ ಶ್ರೇಣೀ ವ್ಯವಸ್ಥೆಯಿಂದ ನಮ್ಮ ಸಂಬಳಕ್ಕೆ ದೊಡ್ಡ ಹೊಡೆತ ಬೀಳುತ್ತದೆ. ನಮ್ಮ ಆದಾಯ ಕಡಿಮೆಯಾಗುತ್ತದೆ. ಶ್ರೇಣೀಕರಣದಲ್ಲಿ ಹೆಚ್ಚು ಪಾದರ್ಶಕತೆ ಬೇಕು ಎಂದು ಬೋರ್ಡನ್ನು ಒತ್ತಾಯಿಸುತ್ತಿದ್ದಾರೆ ಎನ್ನಲಾಗಿದೆ.

Share post:

Subscribe

spot_imgspot_img

Popular

More like this
Related

ರಾಜ್ಯ ಸರ್ಕಾರದಿಂದ 2025ನೇ ಸಾಲಿನ ‘ಸಾರ್ವತ್ರಿಕ ರಜಾ’ ದಿನಗಳ ಪಟ್ಟಿ ಬಿಡುಗಡೆ

ರಾಜ್ಯ ಸರ್ಕಾರದಿಂದ 2025ನೇ ಸಾಲಿನ 'ಸಾರ್ವತ್ರಿಕ ರಜಾ' ದಿನಗಳ ಪಟ್ಟಿ ಬಿಡುಗಡೆ ಕರ್ನಾಟಕ...

ಒತ್ತಡದಿಂದ ಮುಕ್ತಿ ಪಡೆಯಲು ಈ ಪಾನೀಯಗಳನ್ನು ಕುಡಿಯಿರಿ

ಒತ್ತಡದಿಂದ ಮುಕ್ತಿ ಪಡೆಯಲು ಈ ಪಾನೀಯಗಳನ್ನು ಕುಡಿಯಿರಿ ಇಂದಿನ ವೇಗದ ಜೀವನದಲ್ಲಿ ಬಹುತೇಕ...

ನ.16ಕ್ಕೆ ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಹೈಕೋರ್ಟ್ ಗ್ರೀನ್‌ ಸಿಗ್ನಲ್!‌ 

ನ.16ಕ್ಕೆ ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಹೈಕೋರ್ಟ್ ಗ್ರೀನ್‌ ಸಿಗ್ನಲ್!‌  ಕಲಬುರಗಿ: ಕಲಬುರಗಿ ಜಿಲ್ಲೆಯ...

ನಾನು ಯಾವ ಬಾವುಟ ಹಿಡಿಬೇಕು ಅಂತ ಮುಂದೆ ತೀರ್ಮಾನ ಮಾಡುತ್ತೇನೆ: ಕೆ.ಎನ್. ರಾಜಣ್ಣ

ನಾನು ಯಾವ ಬಾವುಟ ಹಿಡಿಬೇಕು ಅಂತ ಮುಂದೆ ತೀರ್ಮಾನ ಮಾಡುತ್ತೇನೆ: ಕೆ.ಎನ್....