ಸಚಿನ್ ಪ್ರಕರರಣದಲ್ಲಿ ಪ್ರಿಯಾಂಕ್ ಖರ್ಗೆಯ ಪಾತ್ರವಿಲ್ಲ, ರಾಜೀನಾಮೆ ಸಲ್ಲಿಸುವ ಪ್ರಮೇಯ ಉದ್ಭವಿಸಲ್ಲ: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಬೀದರ್ ಜಿಲ್ಲೆಯ ಯುವ ಗುತ್ತಿಗೆದಾರ ಸಚಿನ್ ಪಂಚಾಳ ಪ್ರಕರಣ ದಿನದಿಂದ ಕಾವೇರುತ್ತಿದ್ದು, ರಾಜಕೀಯ ಕೆಸರರೆಚಾಟಕ್ಕೆ ವೇದಿಕೆ ಆದಂತೆ ಕಾಣುತ್ತಿದೆ. ಇದನ್ನೇ ಅಸ್ತ್ರ ಮಾಡಿಕೊಂಡ ಬಿಜೆಪಿ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಪಟ್ಟು ಹಿಡಿದಿದೆ. ಇನ್ನೂ ಈ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದ್ದಾರೆ. ಸಚಿನ್ ಪಾಂಚಾಳ್ ಸಾವಿನ ಪ್ರಕರರಣದಲ್ಲಿ ಪ್ರಿಯಾಂಕ್ ಖರ್ಗೆಯ ಪಾತ್ರವಿಲ್ಲ,
ಡೆತ್ ನೋಟಲ್ಲಿ ಅವರ ಹೆಸರಿನ ಉಲ್ಲೇಖವಿಲ್ಲ, ಅವರ ವಿರುದ್ಧ ಯಾವುದೇ ಸಾಕ್ಷ್ಯಾಧಾರ ಲಭ್ಯವಾಗಿಲ್ಲ ಮತ್ತು ಅದಕ್ಕೂ ಮಿಗಿಲಾಗಿ ಅವರು ಯಾವುದೇ ತನಿಖೆಗೆ ತಯಾರಾಗಿರುವುದಾಗಿ ಹೇಳಿದ್ದಾರೆ, ಹಾಗಾಗಿ ಅವರು ರಾಜೀನಾಮೆ ಸಲ್ಲಿಸುವ ಪ್ರಮೇಯ ಉದ್ಭವಿಸಲ್ಲ ಎಂದು ಹೇಳಿದರು.
ಇನ್ನೂ ಪ್ರಕರಣವನ್ನ CBIಗೆ ಕೊಡಬೇಕು ಎಂಬ ಬಿಜೆಪಿ ಒತ್ತಾಯ ಬಿಜೆಪಿ ವಿರುದ್ದ ಕಿಡಿಕಾರಿದ ಅವರು, ಯಾಕೆ ಸಿಬಿಐಗೆ ಕೊಡಬೇಕು. ಅವರು ಯಾವಾಗ ಸಿಬಿಐಗೆ ಕೊಟ್ಟಿದ್ರು? ನಮ್ಮ ಪೊಲೀಸರ ಮೇಲೆ ನಂಬಿಕೆ ಇಲ್ಲವಾ ಅವರಿಗೆ. ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಒಂದೇ ಒಂದು ಕೇಸ್ ಸಿಬಿಐಗೆ ಕೊಟ್ಟಿರಲಿಲ್ಲ. ಹೀಗಿರುವಾಗ ಸಿಬಿಐಗೆ ಕೊಡಿ ಅಂತ ಕೇಳೋಕೆ ಬಿಜೆಪಿ ಅವರಿಗೆ ಯಾವ ನೈತಿಕತೆ ಇದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.