ಸಚಿನ್ ರೆಕಾರ್ಡ್ ಬ್ರೇಕ್ ಮಾಡೋಕೆ ರೋಹಿತ್​ಗೆ ಇನ್ನು ಸಾಧ್ಯವೇ ಇಲ್ವಾ?

Date:

ಟೀಮ್ ಇಂಡಿಯಾದ ಉಪ ನಾಯಕ ರೋಹಿತ್ ಶರ್ಮಾ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಸೆಮಿಫೈನಲ್​ನಲ್ಲಿ ನಿರಾಸೆ ಮೂಡಿಸಿದ್ದಾರೆ. ಕೇವಲ 1ರನ್​ಗೆ ವಿಕೆಟ್ ಒಪ್ಪಿಸಿರುವ ರೋಹಿತ್ ಶರ್ಮಾ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಪುಡಿಗಟ್ಟುವ ಸದಾವಕಾಶವನ್ನು ಮಿಸ್ ಮಾಡಿಕೊಂಡಿದ್ದಾರೆ,
ಮ್ಯಾಂಚೆಸ್ಟರ್​ನ ಎಮಿರೇಟ್ಸ್​ ಓಲ್ಡ್​ ಟ್ರಾಫರ್ಡ್​ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಸೆಮಿಫೈನಲ್​ನಲ್ಲಿ ನಿನ್ನೆ 46.1 ಓವರ್ ಬ್ಯಾಟಿಂಗ್ ಮಾಡಿ 5 ವಿಕೆಟ್ ಕಳೆದು ಕೊಂಡು 211 ರನ್ ಮಾಡಿತ್ತು. ಇಂದು ಆಟ ಮುಂದುವರೆಸಿ 8 ವಿಕೆಟ್ 239ರನ್ ಮಾಡಿದೆ. ಭಾರತ 240ರನ್ ಮಾಡಬೇಕಿದೆ. ರೋಹಿತ್ ಶರ್ಮಾ, ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ ಕೇವಲ 1ರನ್ ಗಳನ್ನು ಮಾಡಿ ಔಟಾಗಿದ್ದಾರೆ. ದಿನೇಶ್ ಕಾರ್ತಿಕ್ ಕೂಡ 6 ರನ್ ಮಾತ್ರ ಮಾಡಿ ಪೆವಿಲಿಯನ್ ಸೇರಿದ್ದಾರೆ.
ಸಚಿನ್ ತೆಂಡೂಲ್ಕರ್ ಅವರು 2003ರ ವಿಶ್ವಕಪ್​ನಲ್ಲಿ ಸಚಿನ್ ತೆಂಡೂಲ್ಕರ್ 673ರನ್ ಮಾಡಿದ್ದರು. ಒಂದೇ ವಿಶ್ವಕಪ್​ನಲ್ಲಿ ಅತೀ ಹೆಚ್ಚು ರನ್ ಗಳಿಸಿರುವ ಖ್ಯಾತಿ ಅವರಿಗಿದೆ. ರೋಹಿತ್ ಶರ್ಮಾ ಈ ಅವಧಿಯಲ್ಲಿ 647ರನ್ ಗಳಿಸಿದ್ದರು. ಸಚಿನ್ ದಾಖಲೆ ಸರಿಗಟ್ಟಲು 26ರನ್ ಬೇಕಿತ್ತು. ಇವತ್ತು 1 ರನ್ ಮಾತ್ರ ಮಾಡಿದ್ದಾರೆ. ಇನ್ನು 25ರನ್ ಬೇಕಿದೆ. ದಾಖಲೆ ಮುರಿಯಲು ಇನ್ನೂ 26ರನ್ ಬೇಕಿದೆ. ಭಾರತ ಫೈನಲ್​ಗೆ ಹೋದರೆ ಮಾತ್ರ ರೋಹಿತ್ ಗೆ ಈ ಅವಕಾಶವಿದೆ. ಕಾದು ನೋಡೋಣ ಏನ್ ಏನಾಗುತ್ತೆ ಅಂತ. ಭಾರತ ಫೈನಲ್​ಗೆ ಹೋಗಿ ರೋಹಿತ್ ಸೆಂಚುರಿ ಮಾಡಿದರೆ ಈ ದಾಖಲೆ ಮಾತ್ರವಲ್ಲದೆ ವಿಶ್ವಕಪ್​ನಲ್ಲಿ ಅತೀ ಹೆಚ್ಚು ಶತಕ ಸಿಡಿಸಿದ ಆಟಗಾರ ಆಗಿ ಹೊರಹೊಮ್ಮುತ್ತಾರೆ. ಸದ್ಯ ಅವರು 6 ಶತಕ (ಈ ಬಾರಿ 5, 2015ರಲ್ಲಿ 1) ಗಳಿಸಿ ಸಚಿನ್ ಸಮದಲ್ಲಿದ್ದಾರೆ.

Share post:

Subscribe

spot_imgspot_img

Popular

More like this
Related

ಮೈಸೂರು ದಸರಾ ಮಹತೋತ್ಸವ’ ಉದ್ಘಾಟಿಸಿದ ಸಾಹಿತಿ ಬಾನು ಮುಷ್ತಾಕ್

ಮೈಸೂರು ದಸರಾ ಮಹತೋತ್ಸವ’ ಉದ್ಘಾಟಿಸಿದ ಸಾಹಿತಿ ಬಾನು ಮುಷ್ತಾಕ್ ಮೈಸೂರು: ನಾಡದೇವತೆ ಚಾಮುಂಡೇಶ್ವರಿ...

ಶೈಲಪುತ್ರಿಯ ಆರಾಧನೆ ಹೇಗೆ ಗೊತ್ತಾ ?

ಶೈಲಪುತ್ರಿ ಪೂಜಾ ವಿಧಾನ ಹೇಗೆ ಗೊತ್ತಾ ? ನವರಾತ್ರಿ ಬಂದೆ ಬಿಡ್ತು, ಮೊದಲನೇ...

ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಸ್ಥಾನದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಉಚ್ಚಾಟನೆ

ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಸ್ಥಾನದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಉಚ್ಚಾಟನೆ ಬಾಗಲಕೋಟೆ: ಕೂಡಲಸಂಗಮ...

ಪ್ರಧಾನಿ ಮೋದಿ ಇಂದು ಸಂಜೆ ರಾಷ್ಟ್ರವನ್ನುದ್ದೇಶಿಸಿ ಭಾಷಣ

ಪ್ರಧಾನಿ ಮೋದಿ ಇಂದು ಸಂಜೆ ರಾಷ್ಟ್ರವನ್ನುದ್ದೇಶಿಸಿ ಭಾಷಣ ನವದೆಹಲಿ: ಪ್ರಧಾನಿ ನರೇಂದ್ರ ಮೋದಿ...