ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ನಿನ್ನೆ ಬುಧವಾರ ಇಡೀ ದಿನ ಮಾಜಿ ಸಚಿವ ಕಾಂಗ್ರೆಸ್ ನಾಯಕ ಜಮೀರ್ ಅಹ್ಮದ್ ಖಾನ್‍ರನ್ನ ಎಸ್‍ಐಟಿ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ.
ನಿನ್ನೆ ಬೆಳಗ್ಗೆ 11 ರಿಂದ ರಾತ್ರಿ 8.30ರವರೆಗೆ ತನಿಖೆ ವಿಚಾರಣೆ ನಡೆಸಿದ ಎಸ್‍ಐಟಿ ಅಧಿಕಾರಿಗಳು, ಜಮೀರ್ ಅವರಿಂದ ಸಾಕಷ್ಟು ಉತ್ತರ ಪಡೆದುಕೊಂಡಿದ್ದಾರೆ.
ಇಷ್ಟು ದಿನಗಳ ಕಾಲ ತಮ್ಮದೆ ಸರ್ಕಾರ ಇದ್ದ ಕಾರಣ ಜಮೀರ್ ಅವರ ಕಡೆ ಅಧಿಕಾರಿಗಳು ಅಷ್ಟಾಗಿ ಗಮನ ಹರಿಸಿರಲಿಲ್ಲ ಆದ್ರೆ ದೋಸ್ತಿ ಸರ್ಕಾರ ಪತನವಾಗಿ ಸಚಿವ ಸ್ಥಾನ ಕಳೆದುಕೊಂಡ ನಂತರ IMA ಪ್ರಕರಣದಲ್ಲಿ ಜಮೀರ್ ಅವರ ಪಾತ್ರ ಏನು ಎಂಬುದನ್ನು ತಿಳಿದುಕೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ ಜೊತೆಗೆ ವಿಚಾರಣೆಗೆ ಕರೆದ ಸಮಯದಲ್ಲಿ ತಪ್ಪದೆ ಹಾಜರಾಗಬೇಕು ಎಂದು ಸೂಚಿಸಿದ್ದಾರೆ.