ಇವತ್ತು ಹುಟ್ಟಿದ ಮನುಷ್ಯ ಮಂದೊಂದು ದಿನ ಸಾಯಲೇಬೇಕು. ಆದ್ರೆ ಸತ್ತವನನ್ನ ಬದುಕಿಸಲು ಈ ಹಿಂದೆಯೂ ಸಾಕಷ್ಟು ಪ್ರಯತ್ನಗಳು ನಡೆದಿದ್ರೂ ಸಹಿತ ಅವೆಲ್ಲವೂ ಫಲಕಾರಿಯಾಗಿಲ್ಲ. ಹಾಗೇನಾದ್ರು ಸತ್ತವನು ಮತ್ತೆ ಹುಟ್ಟಿ ಬಂದ್ರೆ ಅದನ್ನ ಜನ ಪವಾಡ ಅಂತಾ ಬೆರಗಾಗ್ತಾರೆ.
ಇಂದು ಸತ್ತವನನ್ನ ಮುಂದೊಂದು ದಿನ ಬದುಕಿಸಬಹುದು ಅಂತಹೇಳಿ ಕಂಪೆನಿಯೊಂದು ಆಶ್ವಾಸನೆ ನೀಡಿದೆ. ಸತ್ತವರನ್ನ ಬದುಕಿಸಬಹುದು ಎಂದು ಪ್ರಯೋಗಾಲಯದಲ್ಲಿ ರಹಸ್ಯ ಸಂಶೋಧನೆಯೂ ನಡೀತಿದೆ. ಇದನ್ನ ನಂಬೋಕೆ ಅಸಾಧ್ಯವಾದ್ರು ಕೂಡಾ. ಅಸಾಧ್ಯವಾದುದನ್ನ ಸಾಧಿಸಲು ಈ ಕಂಪನಿ ಹೊರಟಿದೆ. ವೈದ್ಯಕೀಯ ಲೋಕದಲ್ಲಿ ಅನೇಕ ಮಿರಾಕಲ್‌ಗಳನ್ನ ನಾವೆಲ್ಲರೂ ಕೇಳಿರ್ತೇವೆ ನೋಡಿರುತ್ತೇವೆ. ಅದರಲ್ಲೂ ಕೆಲ ಘಟನೆಗಳನ್ನ ಕಂಡು ವೈದ್ಯ ಲೋಕವೇ ಅಚ್ಚರಿ ಪಟ್ಟಿರೋದು ಇದೆ.
ಅಮೆರಿಕಾ ಮೂಲದ ಕಂಪನಿಯೊಂದು ಸತ್ತವರನ್ನ ಮುಂದೊಂದು ದಿನ ಬದುಕಿಸಬಹುದು ಎಂದು ಹೇಳಿದೆ. ಯಸ್ ವಿಶ್ವದ ಅತೀ ದೊಡ್ಡ ಕ್ರಯೋನಿಸ್ ಕಂಪನಿಯಾಗಿರುವ ಆಲ್ನೋರ್ ಲೈಫ್ ಎಕ್ಸ್ ಟೆನ್ಮನ್ ಫೌಂಡೇಶನ್ ಈ ಸಂಶೋಧನೆಗೆ ಹೆಜ್ಜೆ ಇಟ್ಟಿದೆ. 1400ಕ್ಕೂ ಹೆಚ್ಚು ಸದಸ್ಯರನ್ನ ಹೊಂದಿರುವ ಆಲ್ಕೂರ್ ಲೈಫ್ ಎಕ್ಸ್‌ಟೆನ್ಮನ್ ಫೌಂಡೇಶನ್ ಕಂಪೆನಿ, ಸತ್ತವರ ಶವವನ್ನ ಸಂರಕ್ಷಿಸಿ ಇಟ್ಟುಕೊಂಡಿದೆಯಂತೆ.
ಈಗಾಗಲೇ 233 ಮೇರದೇಹವನ್ನ ಪ್ರಯೋಗಾಲಯದಲ್ಲಿ ಸಂರಕ್ಷಿಸಿ ಇಟ್ಟುಕೊಂಡಿರುವ ಈ ಕಂಪನಿ. ಮುಂದೊಂದು ದಿನ ಈ ಶವಗಳಿಗೆ ಜೀವ ಬರಬಹುದೆಂದು ಸಂಶೋಧನೆಗಳನ್ನ ಮಾಡುತ್ತಿದೆ. ಇನ್ನು ಕ್ರಯೋನಿಸ್ ಅಂದ್ರೆ ಏನು ಅಂತಾ ನೋಡ್ತಾ ಹೋಗೋದಾದ್ರೆ. ಜೀವಂತ ಕೋಶಗಳನ್ನ ಅಂಗಾಂಶಗಳನ್ನ ಮತ್ತು ಜೈವಿಕ ವಸ್ತುಗಳನ್ನ ಕನಿಷ್ಠ ತಾಪಮಾನದಲ್ಲಿ ಸಂಗ್ರಹಿಸಿಟ್ಟುಕೊಳ್ಳುವ ಮತ್ತು ಘನೀಕರಿಸುವ ವಿಧಾನ.
ಪ್ರಯೋಗಾಲಯಗಳಲ್ಲಿ 1% ಡಿಗ್ರಿ ಸೆಲ್ಸಿಯಸ್‌ನಲ್ಲಿ ಇಲ್ಲಿ ಮೃತದೇಹವನ್ನ ಸಂಗ್ರಹ ಮಾಡಲಾಗುತ್ತೆ. ವಯಸ್ಸಾಗಿ ಮತ್ತು ರೋಗವಿಲ್ಲದೇ ಸತ್ತವರನ್ನ ಭವಿಷ್ಯದ ತಂತ್ರಜ್ಞಾನದ ಮೂಲಕ ಮತ್ತೆ ಬದುಕಿಸಬಹುದು ಎಂಬ ವಿಶ್ವಾಸ ಆಲ್ಕರ್ ಕಂಪನಿಯದ್ದಾಗಿದೆ. ಈ ನಿಟ್ಟಿನಲ್ಲಿ ಅನೇಕ ಸಂಶೋಧನೆಗಳೂ ನಡೆಯುತ್ತಿವೆ. ಈ ಕುರಿತಂತೆ 500ಕ್ಕೂ ಹೆಚ್ಚು ಮಂದಿ ಸಂಶೋಧನೆಯನ್ನ ಮಾಡುತ್ತಿದ್ದಾರೆ. ಶ್ರೀಮಂತರಂತೂ ದೇಹಗಳನ್ನ ಇಲ್ಲಿ ಸಂರಕ್ಷಿಸಲು ಮುಗಿ ಬಿದ್ದಿದ್ದಾರೆ.
ಇನ್ನು ಸಂಪೂರ್ಣ ದೇಹದ ಸಂರಕ್ಷಣೆಗೆ 2 ಕೋಟಿ ರೂ. ಕಟ್ಟಬೇಕು. ಮೆದುಳನ್ನ ಸಂಗ್ರಹಿಸುವ ನ್ಯೂರೋ ಕ್ರಯೋ ಪ್ರಿಸರ್ವೇಶನ್‌ಗೆ 66 ಲಕ್ಷ ರೂಪಾಯ ಖರ್ಚಾಗುತ್ತೆ ಅಂತಾ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ. ಒಟ್ಟಾರೆಯಾಗಿ ಸತ್ತ ಜೀವಕ್ಕೆ ಜೀವ ಕೊಡುವ ಸಂಶೋಧನೆಗೆ ಈ ಕಂಪೆನಿ ನಿರಂತರ ಪ್ರಯೋಗಗಳನ್ನ ಮಾಡುತ್ತಿದೆ.