ಸದನದಲ್ಲಿ ಸಿದ್ದರಾಮಯ್ಯ ಆರ್ಭಟಕ್ಕೆ ಬಿಎಸ್ವೈ ಫುಲ್ ಸೈಲೆಂಟ್

0
45

ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಮಾತನಾಡುತ್ತಿರಬೇಕಾದರೆ, ಇಡೀ ಸದನದಲ್ಲಿ ಸಂಚಲನ ಮೂಡುತ್ತದೆ. ಹೇಳಬೇಕಾಗಿರುವ ವಿಚಾರವನ್ನು ದಾಖಲೆ ಸಮೇತ ಸದನದಲ್ಲಿ ಮುಂದಿಡುವ ಸಿದ್ದರಾಮಯ್ಯನವರು ಬೊಮ್ಮಾಯಿ ಸರಕಾರದ ವಿರುದ್ದ ಒಂದೇ ಸಮನೆ ತಿರುಗಿ ಬೀಳುತ್ತಿದ್ದಾರೆ.

 

ತೈಲ ಬೆಲೆ ಏರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಮಾತನಾಡುತ್ತಿರುವ ಸಿದ್ದರಾಮಯ್ಯನವರು, ಕರ್ನಾಟಕದಿಂದ ಕೇಂದ್ರಕ್ಕೆ ಹೋಗುತ್ತಿರುವ ತೆರಿಗೆ ವಿಚಾರವನ್ನು ಇಂಚಿಂಚಾಗಿ ಹೊರಗಿಡುತ್ತಿದ್ದಾರೆ. ಕೇಂದ್ರ ಸರಕಾರದ ಬಜೆಟ್ ಕಾಪಿಯಿಂದ ನಾನು ಅಂಕಿಅಂಶವನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ ಎಂದು ಹೇಳಿರುವ ಸಿದ್ದರಾಮಯ್ಯನವರು, ಆಡಳಿತ ಪಕ್ಷದ ನಾಯಕರ ಬಾಯಿಯನ್ನು ಮುಚ್ಚಿಸುತ್ತಿದ್ದಾರೆ.

“ಕರ್ನಾಟಕ ಸರಕಾರದ ವಿಚಾರದಲ್ಲಿ ಸಿದ್ದರಾಮಯ್ಯನವರು ಏನು ಬೇಕಾದರೂ ಮಾತನಾಡಿಕೊಳ್ಳಲಿ, ಆ ಹಕ್ಕು ಅವರಿಗಿದೆ. ಕೇಂದ್ರ ಸರಕಾರದ ಬಗ್ಗೆ ಮಾತನಾಡುವ ಯಾವ ಹಕ್ಕೂ ಸಿದ್ದರಾಮಯ್ಯನವರಿಗೆ ಇಲ್ಲ”ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದಾಗ, ಅದಕ್ಕೆ ಖಡಕ್ ಉತ್ತರವನ್ನು ಸಿದ್ದರಾಮಯ್ಯ ನೀಡಿದ್ದಾರೆ.

 

ಸದನದಲ್ಲಿ “ಹೇಳುವ ತಾಕತ್ ನಮಗಿರಬೇಕಾದರೆ, ಕೇಳುವ ತಾಕತ್ ನಿಮಗ್ಯಾಕೆ ಇಲ್ಲ”ಎನ್ನುವ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆಯವರ ಹೇಳಿಕೆಯಿಂದಾಗಿ ಸದನದಲ್ಲಿ ಭಾರೀ ಕೋಲಾಹಲವೇ ಎದ್ದಿದೆ. ಆ ವೇಳೆ, ಸ್ಪೀಕರ್ ಕಾಗೇರಿಯವರು ಲಂಚ್ ಟೈಮ್ ಎಂದು ಸದನವನ್ನು ಮುಂದೂಡಿದರು. ಇಷ್ಟೆಲ್ಲಾ ಆದರೂ, ಮಾಜಿ ಸಿಎಂ ಯಡಿಯೂರಪ್ಪ ಸುಮ್ಮನೆ ಕೂತಿದ್ದರು.

 

 

LEAVE A REPLY

Please enter your comment!
Please enter your name here