ಯಾವುದೇ ಕಂಪನಿಯಾಗಲಿ ಅಥವಾ ಕೆಲಸವಾಗಲೀ ಮಿನಿಮಮ್ 8 ಗಂಟೆಗಳ ಕಾಲ ಕೆಲಸ ಮಾಡೋದು ಕಂಪಲ್ಸರಿ. ಆಫೀಸ್‌ನಲ್ಲಿ ದಿನದ 8 ಗಂಟೆಗಳ ಕಾಲ ಕುಳಿತು ಕೆಲಸ ಮಾಡೋದು ಅನಿವಾರ್ಯ. ಹಾಗಂತ ಕೆಲಸದ ಒತ್ತಡದಲ್ಲಿ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ರೆ ನಮ್ಮ ಆರೋಗ್ಯದ ಗತಿ ಅಧೋಗತಿ.
ಇತ್ತೀಚಿನ ದಿನಗಳಲ್ಲಿ ಓಡಾಡಿ ಕೆಲಸ ಮಾಡೋರಿಗಿಂತ ಆಫೀಸ್‌ನಲ್ಲಿ ಕುಳಿತು ಕೆಲಸ ಮಾಡೋರೆ ಹೆಚ್ಚು. ಆಫೀಸ್‌ನಲ್ಲಿ ಡೆಸ್ಕ್ ವರ್ಕ್ ಮಾಡುವವರಲ್ಲಿ ಅನಾರೋಗ್ಯ ಸಮಸ್ಯೆ ಹೆಚ್ಚು ಗೊತ್ತಾ?. ಡೆಸ್ಕ್ ವರ್ಕ್ ಮಾಡುವವರು ಪ್ರತಿ ದಿನ 15 ನಿಮಿಷ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ್ರೆ ಅಕಾಲಿಕ ಸಾವು ಹಾಗೂ ಹೃದಯ ರಕ್ತನಾಳದ ಸಮಸ್ಯೆಯನ್ನು ತಡೆಗಟ್ಟಬಹುದು ಎಂದು ಅಧ್ಯಯನವೊಂದರಿಂದ ತಿಳಿದು ಬಂದಿದೆ.
ಆಸ್ಟ್ರೇಲಿಯಾದ ಸಿಡ್ನಿ ವಿಶ್ವವಿದ್ಯಾಯಾಲಯದ ವಿಜ್ಞಾನಿಗಳು ಈ ಬಗ್ಗೆ ಅಧ್ಯಯನ ನಡೆಸಿದ್ರು. ಹೆಚ್ಚು ಕಾಲ ಕುಳಿತು ಕೆಲಸ ಮಾಡುವವರು ಹಾಗೂ ದೈಹಿಕ ಚಟುವಟಿಕೆ ಮಾಡುವವರಿಗೆ ಇರುವ ಆರೋಗ್ಯ ಸಮಸ್ಯೆಗಳ ನಡುವಿನ ವ್ಯತ್ಯಾಸ ತಿಳಿಯಲು ಈ ಸಂಶೋಧನೆ ನಡೆಸಲಾಗಿತ್ತು. ಈ ವೇಳೆ ಸಂಶೋಧಕರು ಫಿಸಿಕಲ್ ಆ್ಯಕ್ಟಿವಿಟಿ ಹಾಗೂ ಡೆತ್ ರೆಕಾರ್ಡ್ಸ್ ಕಂಡುಕೊಂಡಿದ್ದಾರೆ. ಈ ಸಂಶೋಧನೆಯಲ್ಲಿ ಸುಮಾರು 45 ವಯಸ್ಸಿನ 15,000 ವ್ಯಕ್ತಿಗಳು ಪಾಲ್ಗೊಂಡಿದ್ರು. ಸ್ಟಡಿ ಪ್ರಕಾರ, ದಿನದಲ್ಲಿ 8 ಗಂಟೆ ಅಥವಾ ಅದಕ್ಕಿಂತ ಹೆಚ್ಚು ಕಾಲ ಆಫೀಸ್‌ನಲ್ಲಿ ಕುಳಿತು ಕೆಲಸ ಮಾಡುವವರು ಅಕಾಲಿಕ ಸಾವು ಹಾಗೂ ಹೃದಯ ರಕ್ತನಾಳದ ಸಮಸ್ಯೆ ಎದುರಿಸುವ ಸಾಧ್ಯತೆ ಹೆಚ್ಚಂತೆ.
ಅಷ್ಟೇ ಅಲ್ಲಾ ಶೇ. 107ರಷ್ಟು ಕಾರ್ಡಿಯೋ ವ್ಯಾಸ್ಕ್ಯೂಲರ್ ಸಮಸ್ಯೆ, ಅಕಾಲಿಕ ಸಾವು ಮುತಾಂದ ಸಮಸ್ಯೆಯನ್ನ ಎದುರಿಸುವ ಸಾಧ್ಯತೆ ಇರುತ್ತಂತೆ. ಹಾಗಾಗಿ ಪ್ರತಿ ದಿನ 15 ನಿಮಿಷ ಇಲ್ಲವೇ 1 ಗಂಟೆಯಾದರೂ ದೈಹಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಅಗತ್ಯ ಎಂದು ಸಂಶೋಧಕರ ಸಲಹೆ