ಮಾಜಿ ನೀಲಿ ತಾರೆ, ಹಾಲಿ ಬಾಲಿವುಡ್ ನಟಿ ಸನ್ನಿಲಿಯೋನ್ ಇತ್ತೀಚೆಗೆ ಸಾಕಷ್ಟು ಸಾಮಾಜಿಕ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಒಂದಲ್ಲ ಒಂದು ರೀತಿಯಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸನ್ನಿಲಿಯೋನ್ ಈಗ ಮತ್ತೊಂದು ಮಹತ್ತರ ಕೆಲಸಕ್ಕೆ ಕೈ ಹಾಕಿದ್ದಾರೆ. ಇದು ಸನ್ನಿಯ ಮತ್ತೊಂದು ಮುಖದ ಅನಾವರಣ.
ಇಂದು ಕೂಡ ಲೆಕ್ಕವಿಲ್ಲದಷ್ಟು ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಿರುವುದು ಸನ್ನಿಲಿಯೋನ್ ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಇದರಿಂದ ಅವರ ನಿದ್ರೆ ಕೂಡ ಕೆಟ್ಟಿದೆ. ನಿದ್ರೆ ಬರ್ತಿಲ್ಲ, ಇದಕ್ಕೇನಾದರೂ ಪರಿಹಾರ ನೀಡಲೇ ಬೇಕು ಎಂದು ಸನ್ನಿ ನಿರ್ಧಾರ ಮಾಡಿದ್ದಾರೆ. ಆಧುನಿಕ ಯುಗದಲ್ಲಿ ಕನಿಷ್ಠ ಪ್ರಾಥಮಿಕ ಶಿಕ್ಷಣ ಎಲ್ಲರಿಗೂ ಸಿಗಬೇಕು ಎಂದು ಸನ್ನಿ ಲಿಯೋನ್ ಅವರು ಒಂದೊಳ್ಳೆ ಕೆಲಸಕ್ಕೆ ಕೈ ಹಾಕಿದ್ದಾರೆ.
ನಮ್ಮ ಉದ್ದೇಶ ಮಕ್ಕಳ ಬೌದ್ಧಿಕ, ಶಾರೀರಿಕ ವಿಕಾಸಕ್ಕೆ ವೇದಿಕೆ ಕಲ್ಪಿಸುವುದಾಗಿದೆ. ಮಕ್ಕಳು ಕೇವಲ ಪುಸ್ತಕದ ಜ್ಞಾನಕ್ಕೆ ಮಾತ್ರ ಸೀಮಿತವಾಗಬಾರದು, ವಿಶ್ವದಲ್ಲಿನ ಹೊಸ ಹೊಸ ವಿಷಯಗಳನ್ನು ಅವರು ಕಲಿತುಕೊಳ್ಳಬೇಕು. ಜೊತೆಗೆ, ಲೈಫನ್ನು ಎಂಜಾಯ್ ಮಾಡಬೇಕು ಎಂಬುದು ನಮ್ಮ ಆಸೆ” ಎಂದಿದ್ದಾರೆ ಸನ್ನಿಲಿಯೋನ್.
ಸನ್ನಿಲಿಯೋನ್ ಬಡ ಮಕ್ಕಳಿಗಾಗಿ ಶಾಲೆಯೊಂದನ್ನು ತೆರೆಯಲು ಹೊರಟಿದ್ದಾರೆ. ಈಗಾಗಲೇ ಅವರು ತಮ್ಮ ಸ್ವಂತ ಶಾಲಾ ಕಟ್ಟಡದ ವಿನ್ಯಾಸ, ಒಳಾಂಗಣ ಹಾಗೂ ವಿವಿಧ ಸೌಲಭ್ಯಗಳ ಕುರಿತು ರೂಪುರೇಷೆ ತಯಾರು ಮಾಡಿದ್ದಾರಂತೆ. ಈ ಶಾಲೆ ಸನ್ನಿ ಹಾಗೂ ಅವರ ಪತಿಯ ಕನಸಿನ ಕೂಸು ಎಂದು ಹೇಳಲಾಗುತ್ತಿದೆ. ಸತಿ-ಪತಿ ಇಬ್ಬರೂ ಒಟ್ಟಿಗೇ ಈ ನಿರ್ಧಾರ ತೆಗೆದುಕೊಂಡಿದ್ದು, ಅದನ್ನು ಕಾರ್ಯರೂಪಕ್ಕೆ ತರಲು ಶ್ರಮಿಸುತ್ತಿದ್ದಾರೆ. ಶಾಲೆಯಲ್ಲಿ ಆಟ ಮತ್ತು ಮಕ್ಕಳ ಸಮ್ಮೇಳನಕ್ಕೂ ಅವಕಾಶ ಇದೆಯಂತೆ.
ನಟನೆ, ಜಾಹಿರಾತು, ಸಿನಿಮಾ ರಂಗಗಳಲ್ಲಿ ಜನಪ್ರಿಯತೆ ಗಳಿಸಿಕೊಂಡಿರುವ ಸನ್ನಿ ಈಗ ಶಿಕ್ಷಣ ರಂಗಕ್ಕೂ ಕಾಲಿಡುತ್ತಿದ್ದಾರೆ.
ಸನ್ನಿಲಿಯೋನ್ ಅವರ ಮತ್ತೊಂದು ಮುಖ ಬಯಲು..!
Date: