ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ಮುನ್ನ ಸಮಾವೇಶ ಕುರಿತು ಮಾತಾಡುತ್ತಿದ್ದಾಗ ಕಾಶಿಯಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡುತ್ತಿದ್ದ ಪ್ರಧಾನಿ ಮೋದಿ ಕಡೆಗೆ ಚೀಟಿಯೊಂದನ್ನು ತೋರಿಸುತ್ತಾ ಕೈ ಬೀಸುತ್ತಿದ್ದ ಹುಡುಗಿಯನ್ನು ಕಂಡು ಪ್ರಧಾನಿ ತಮ್ಮ ಭದ್ರತಾ ಸಿಬ್ಬಂದಿಗಳಿಗೆ ಆಕೆಯ ಕೈಯಿಂದ ಚೀಟಿ ಪಡೆದು ಕೊಡಿ ಎಂದು ಮನವಿ ಮಾಡಿದರು.
ಅದರಂತೆಯೇ ಚೀಟಿ ಪಡೆದ ಎಸ್ ಪಿಜೆ ಭದ್ರತಾ ಸಿಬ್ಬಂದಿ ಪ್ರಧಾನಿ ಮೋದಿಗೆ ಚೀಟಿ ನೀಡಿದಾಗ ಥ್ಯಾಂಕ್ಯೂ ಬೇಟಾ ಎಂದು ನಗುತ್ತಲೇ ಪ್ರತಿಕ್ರಿಯಿಸಿದರು. ಆದರೆ ಆ ಚೀಟಿಯಲ್ಲಿ ಏನಿತ್ತು ಎಂದು ಬಹಿರಂಗವಾಗಿಲ್ಲ.