ನಗರದಲ್ಲಿ ಹಲವಾರು ಸಂಘ-ಸಂಸ್ಥೆಗಳು ಬಿಬಿಎಂಪಿ ಆಸ್ತಿಯನ್ನು ಕೇವಲ ಒಂದೆರಡು ರೂಪಾಯಿಗೆ ಲೀಜ್ ಪಡೆದು ಕಾನೂನು ಉಲ್ಲಂಘಿಸಿ ಕೋಟ್ಯಂತರ ರೂ. ಹಣ ಸಂಪಾದನೆ ಮಾಡುತ್ತಿದ್ದಾರೆ. ಇದುವರೆಗೂ ಲೀಜ್ ಪಡೆದವರಿಂದ ಭೂಮಿಯನ್ನು ವಾಪಸ್ ಪಡೆಯಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಲೀಜ್ ಭೂಮಿಯಲ್ಲಿ ಕ್ಲಬ್, ಶಾಲಾ ಕಟ್ಟಡ ಸೇರಿದಂತೆ ಹಲವಾರು ಆದಾಯ ಬರುವ ಉದ್ದಿಮೆಗಳನ್ನು ಸ್ಥಾಪಿಸಿ ಕೋಟಿ ಕೋಟಿ ಸಂಪಾದನೆ ಮಾಡುತ್ತಿದ್ದಾರೆ.ಸರ್ಕಾರಿ ಭೂಮಿಯನ್ನು ಕನಿಷ್ಟ ಬೆಲೆಗೆ ಲೀಜ್ ಪಡೆದು ಕೋಟಿ ಕೋಟಿ ದುಡ್ಡು ಮಾಡಲು ಮುಂದಾಗಿರುವ ಸಂಸ್ಥೆಗಳಿಂದ ಭೂಮಿಯನ್ನು ವಾಪಸ್ ಪಡೆಯುವ ಮಹತ್ವದ ತೀರ್ಮಾನವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೈಗೊಂಡಿದ್ದಾರೆ.