ಸರ್ಕಾರಿ ವೈದ್ಯರಿಗೆ ಕಠಿಣ ಎಚ್ಚರಿಕೆ ನೀಡಿದ ಶ್ರೀರಾಮುಲು l. ಖಾಸಗಿ ಕ್ಲಿನಿಕ್ ನಡೆಸುವ ವೈದ್ಯರ ಅವಶ್ಯಕತೆ ನಮಗಿಲ್ಲ. ಅವರು ಕಡ್ಡಾಯ ನಿವೃತ್ತಿ ಪಡೆದು ಹೋಗಲಿ ಎಂದು ತಿಳಿಸಿದ್ದಾರೆ.
ಸರ್ಕಾರಿ ವೈದ್ಯರು ಕ್ಲಿನಿಕ್ ನಡೆಸುವುದು ದಂಧೆಯಾಗಿದೆ. ಎಂತಹ ತಜ್ಞ ವೈದ್ಯರೇ ಆದರೂ ಅವರ ಅವಶ್ಯಕತೆ ನಮಗಿಲ್ಲ. ಬೇಕಿದ್ದರೆ ಅವರು ಕಡ್ಡಾಯ ನಿವೃತ್ತಿ ಪಡೆಯಬಹುದು. ಅವರ ಮುಲಾಜಿನಲ್ಲಿ ಸರ್ಕಾರಿ ಆಸ್ಪತ್ರೆಗಳನ್ನು ನಡೆಸಲು ಸಾಧ್ಯವಿಲ್ಲ. ಸರ್ಕಾರಿ ವೈದ್ಯರಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡಬಾರದು ಎಂದು ಹೇಳಿದ್ದಾರೆ. ಖಾಸಗಿ ಕ್ಲಿನಿಕ್ ನಡೆಸುವ ವೈದ್ಯರು ಕೆಲಸ ಬಿಟ್ಟು ಹೋಗಲಿ ಎಂದು ಹೇಳಿದ್ದಾರೆ.