ಸರ್ಫರಾಜ್, ಕೊಹ್ಲಿ ಇಬ್ಬರಿಗೂ ವ್ಯತ್ಯಾಸವಿಲ್ಲ!

Date:

ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ನಲ್ಲಿ ಫಾಫ್ ಡು ಪ್ಲೆಸಿಸ್, ಚೆನ್ನೈ ಸೂಪರ್ ಕಿಂಗ್ಸ್‌ನ ಪ್ರಮುಖ ಬ್ಯಾಟ್ಸ್‌ಮನ್ ಅನ್ನೋದರಲ್ಲಿ ಯಾವುದೇ ಅನುಮಾನವಿಲ್ಲ. ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕರಾಗಿರುವ ಡು ಪ್ಲೆಸಿಸ್, 2021ರ ಸೀಸನ್‌ನಲ್ಲಿ 7 ಪಂದ್ಯಗಳಲ್ಲಿ 320 ರನ್ ಗಳಿಸಿದ್ದಾರೆ.

2021ರ ಐಪಿಎಲ್ ಆವೃತ್ತಿ ಕೋವಿಡ್ ಕಾರಣದಿಂದ ನಿಲುಗಡೆಯಾಗುವ ಮೊದಲು ಫಾಫ್ ಡು ಪ್ಲೆಸಿಸ್ ಸಿಎಸ್‌ಕೆ ಪರ ಸತತ 4 ಅರ್ಧ ಶತಕಗಳನ್ನು ಬಾರಿಸಿದ್ದರು. ಸದ್ಯ ಡು ಪ್ಲೆಸಿಸ್ ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ಸ್‌ನಲ್ಲಿ ಬ್ಯಾಟ್ ಬೀಸಲು ಸಜ್ಜಾಗಿದ್ದಾರೆ.

 

ಐಪಿಎಲ್‌ನಲ್ಲಿ ಭಾರತದ ಮಾಜಿ ನಾಯಕ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿ ಆಡುವ ಡು ಪ್ಲೆಸಿಸ್, ಪಿಎಸ್‌ಎಲ್‌ನಲ್ಲಿ ಪಾಕ್ ಮಾಜಿ ನಾಯಕ ಸರ್ಫರಾಜ್ ಅಹ್ಮದ್ ನಾಯಕತ್ವದಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡದಲ್ಲಿ ಆಡುತ್ತಿದ್ದಾರೆ. ವಿರಾಟ್ ಕೊಹ್ಲಿ, ಎಂಎಸ್ ಧೋನಿ ಮತ್ತು ಸರ್ಫರಾಜ್ ಅಹ್ಮದ್ ನಾಯಕತ್ವಕ್ಕೆ ಹೋಲಿಸಿ ಡು ಪ್ಲೆಸಿಸ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.

‘ಧೋನಿ ಮತ್ತು ಸರ್ಫರಾಜ್ ನಾಯಕತ್ವಕ್ಕೆ ಸ್ವಲ್ಪ ಬದಲಾವಣೆಯಿದೆ. ಎಂಎಸ್‌ಡಿ ಶಾಂತವಾಗಿರುತ್ತಾರೆ, ಮೈದಾನದಲ್ಲಿ ಸಹಜವಾಗೇ ಕೆಲಸ ಮಾಡುತ್ತಿರುತ್ತಾರೆ. ಸರ್ಫರಾಜ್ ಇದಕ್ಕೆ ತದ್ವಿರುದ್ದ. ಬಹುತೇಕ ವಿರಾಟ್ ಕೊಹ್ಲಿಯಂತೆ ಇರುತ್ತಾರೆ. ಯಾವಾಗಲೂ ಆಟಗಾರರ ಜೊತೆ, ಬೌಲರ್‌ಗಳ ಜೊತೆ ಮಾತನಾಡುತ್ತಿರುತ್ತಾರೆ. ತಾನು ಹೇಗೆ ನಾಯಕತ್ವ ನಿರ್ವಹಿಸುತ್ತೇನೆ ಎನ್ನುವ ಬಗ್ಗೆ ಅವರು ಉತ್ಸುಕರಾಗಿರುತ್ತಾರೆ’ ಎಂದು ಡು ಪ್ಲೆಸಿಸ್ ಹೇಳಿದ್ದಾರೆ.

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...