ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ನಟನೆಯ ‘ಭಾರತ್’ ಸಿನಿಮಾ ಇನ್ನೇನು ತೆರೆಗೆ ಬರಲು ಸಿದ್ಧವಾಗ್ತಿದೆ. ಅಭಿಮಾನಿಗಳಲ್ಲಿ ಸಲ್ಮಾನ್ ಪಾತ್ರದ ಕುರಿತು ನಿರೀಕ್ಷೆ ಹೆಚ್ಚಾಗ್ತಿದೆ. ಸಲ್ಮಾನ್ ಖಾನ್ಗೆ ಜೊತೆಯಾಗಿ ಕತ್ರಿನಾ ಕೈಫ್ ನಟಿಸಿದ್ದು ಸದ್ಯ ಚಿತ್ರತಂಡ ಪ್ರಮೋಷನ್ನಲ್ಲಿ ಬ್ಯೂಸಿಯಾಗಿದೆ. ಇದರ ಮಧ್ಯೆ ಸಲ್ಮಾನ್ ಖಾನ್ ಚಿತ್ರದ ಸ್ನೀಕ್ ಪೀಕ್ ವಿಡಿಯೋವೊಂದನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಚಿತ್ರದ ವಿಡಿಯೋದಲ್ಲಿ ಸಲ್ಮಾನ್ ವಿಭಿನ್ನ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ. 20 ಸೆಕೆಂಡ್ಗಳ ಚಿತ್ರದ ತುಣುಕಿನಲ್ಲಿ ಸಲ್ಮಾನ್ 60 ವರ್ಷದ ವೃದ್ಧನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅದರಲ್ಲೂ ಖಡಕ್ ಡೈಲಾಗ್, ರಗಡ್ ಲುಕ್ ಹಾಗೂ ಭರ್ಜರಿ ಫೈಟ್ನಿಂದ ಮಿಂಚಿದ್ದಾರೆ. ‘ಈ ಹುಲಿಗೆ ವಯಸ್ಸಾಗಿದೆ,
ಆದ್ರೆ ಶಿಕಾರಿ ಮಾಡೋದನ್ನ ಮರೆತಿಲ್ಲ’ ಅನ್ನೋ ಡೈಲಾಗ್ ಮೂಲಕ ಚಿತ್ರದಲ್ಲಿ ಆ್ಯಕ್ಷನ್ ಸೀನ್ಗಳು ಭರ್ಜರಿಯಾಗಿವೆ ಅನ್ನೋ ಸೂಚನೆ ನೀಡಿದ್ದಾರೆ. ಇನ್ನೂ ಸಲ್ಮಾನ್ ಹಂಚಿಕೊಂಡಿರುವ ಸ್ನೀಕ್ ಪೀಕ್ ವಿಡೀಯೋ ಇದೀಗ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸಲ್ಮಾನ್ ಸಿನಿಮಾ ರಂಜಾನ್ ಹಬ್ಬದಂದು ತೆರೆ ಕಾಣುತ್ತಿದ್ದು, ಅಭಿಮಾನಿಗಳು ಭಾರತ್ಗಾಗಿ ಕಾತರದಿಂದ ಕಾಯ್ತಿದ್ದಾರೆ.