ಈ ಜಗತ್ತಿನಲ್ಲಿ ಪ್ರತಿ ದಿನ, ಪ್ರತಿ ಕ್ಷಣ ಅನೇಕ ಕುತೂಹಲಕಾರಿ ಬೆಳವಣಿಗೆಗಳು, ಅಚ್ಚರಿ ಘಟನೆಗಳು ನಡೆಯುತ್ತಿರುತ್ತವೆ. ಈ ದುನಿಯಾ ಒಂಥರಾ ವಿಚಿತ್ರಗಳನ್ನು ಹೊದ್ದಿರುವ ನಿಗೂಢ..! ಇಂಥಾ ವಿಚಿತ್ರಗಳ ಪಟ್ಟಿಗೆ ಸೇರಿದ ಒಂದು ಮದುವೆ..!
ಹೌದು ಸಾಮಾನ್ಯವಾಗಿ ಈ ಲವ್ ಫೇಲ್ಯೂರ್ ಆದಾಗ ಭಗ್ನ ಪ್ರೇಮಿಗಳು ಒಂದಿಷ್ಟು ದಿನ ಕುಗ್ಗಿ ಹೋಗಿರುತ್ತಾರೆ. ಮಾನಸಿಕ ನೆಮ್ಮದಿ ಕಳ್ಕೊಂಡು ಪ್ರಪಂಚವೇ ಬೇಡ ಅನ್ನೋ ಮಟ್ಟಿಗೆ ಡಿಪ್ರೆಷನ್ಗೆ ಹೋಗಿರ್ತಾರೆ. ಆಮೇಲೆ ಇನ್ಯಾರೋ ಬದುಕಿಗೆ ಎಂಟ್ರಿ ಕೊಡುತ್ತಾರೆ..! ಲವ್ವೋ, ಅರೆಂಜೋ ಒಟ್ನಲ್ಲಿ ಒಂದು ಮದ್ವೆಯಾಗಿ ಹಳೆಯದನ್ನೆಲ್ಲಾ ಮರೆತಂತೆ ಬದುಕುತ್ತಾರೆ..! ಆದರೆ, ಇಲ್ಲೊಬ್ಬಳು ತನ್ನ ಎಂಗೇಜ್ಮೆಂಟ್ ಗಳು ಮುರಿದು ಬಿದ್ದಿದ್ದರಿಂದ ನೊಂದು ತನ್ನ ಸಾಕು ನಾಯಿಯನ್ನೇ ಮದುವೆಯಾಗಿ ಬಿಟ್ಟಿದ್ದಾಳೆ..!
ಈ ಸ್ಟೋರಿ ನಿಮಗೆ ನಂಬಲು ಕಷ್ಟ ಆಗುತ್ತಿದೆ ನಿಜ..! ಆದರೆ ನೀವು ಇದನ್ನು ನಂಬಲೇ ಬೇಕು. ಇಂಗ್ಲೆಂಡ್ನಲ್ಲಿ ಈ ವಿಲಕ್ಷಣ ಮದುವೆ ನಡೆದಿರುವುದು..! ಎಲಿಜಬೆತ್ ಹೋಡ್ ಎಂಬ ಮಹಿಳೆಯ ನಾಲ್ಕು ಎಂಗೇಜ್ಮೆಂಟ್ಗಳು ಮುರಿದು ಬಿದ್ದದ್ದವು. ಇದರಿಂದ ವಿಚಲಿತಳಾದ ಆಕೆ ತನ್ನ ಸಾಕು ನಾಯಿ. ಪ್ರೀತಿಯ ಲೋಗನ್ ಅನ್ನು ಮದುವೆಯಾಗಿದ್ದಾಳೆ..!
ದಿಸ್ ಮಾರ್ನಿಂಗ್ ಎನ್ನುವ ಟಿವಿ ಕಾರ್ಯಕ್ರಮದಲ್ಲಿ ಎಲಿಜಬೆತ್ ಹೋಡ್ ನಾಯಿಯನ್ನು ಮದುವೆಯಾಗಿದ್ದಾಳೆ. ಈ ಮದುವೆ ಕಥೆ ಎಲ್ಲಾ ಕಡೆ ಸದ್ದು ಮಾಡುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್ ಆಗುತ್ತಿದೆ. ಯಾರಿಂದಲೂ ಸಿಗದ ಪ್ರೀತಿ ತನ್ನ ನಾಯಿಯಿಂದ ಸಿಕ್ಕಿತು. ಅದಕ್ಕಾಗಿ ಅದನ್ನೇ ಮದುವೆಯಾದೆ ಎನ್ನುತ್ತಾರೆ ಎಲಿಜಬೆತ್..!
ಸಾಕು ನಾಯಿಯನ್ನೇ ಮದುವೆಯಾದ ಮಹಿಳೆ..!
Date: