ಪುಟ್ಟ ಗೌರಿ ಮದುವೆ ಧಾರಾವಾಹಿಯಲ್ಲಿ ಬಾಲನಟಿಯಾಗಿ ಗುರುತಿಸಿಕೊಂಡು, ಜನಪ್ರಿಯತೆ ಪಡೆದ ನಟಿ ಸಾನ್ಯಾ ಅಯ್ಯರ್ , ಇತ್ತೀಚೆಗೆ ತಮ್ಮ ಸಿನಿಮಾ ಮತ್ತು ಫೋಟೋ ಶೂಟ್ ಮೂಲಕ ಸುದ್ದಿಯಾಗುತ್ತಿದ್ದಾರೆ.
ಇಂದ್ರಜಿತ್ ಲಂಕೇಶ್ ನಿರ್ದೇಶನದ ಗೌರಿ ಸಿನಿಮಾ ಮೂಲಕ ಸಮರ್ಜೀತ್ ಲಂಕೇಶ್ ಜೊತೆಗೆ ಸ್ಯಾಂಡಲ್‌ವುಡ್‌ಗೆ ಭರ್ಜರಿ ಎಂಟ್ರಿ ಕೊಡಲು ಸಜ್ಜಾಗಿರುವ ನಟಿ ಸಾನ್ಯ ಸದ್ಯಕ್ಕಂತೂ ಸಿನಿಮಾದ ಪ್ರೊಮೋಶನ್‌ನಲ್ಲಿ ಬ್ಯುಸಿಯಾಗಿದ್ದಾರೆ.
ಈಗಾಗಲೇ ಗೌರಿ ಸಿನಿಮಾದ ಹಾಡುಗಳು ಬಿಡುಗಡೆಯಾಗಿ ಸಖತ್ ಸೌಂಡ್ ಮಾಡ್ತಿವೆ, ಇದರ ನಡುವೆ ಸಾನ್ಯಾ ತಮ್ಮ ಬೋಲ್ಡ್ ಫೋಟೋ ಶೂಟ್ ಮೂಲಕ ಇಂಟರ್ನೆಟ್‌ನಲ್ಲಿ ಭರ್ಜರಿ ಸದ್ದು ಮಾಡ್ತಿದ್ದಾರೆ. ಇವರ ಹೊಸ ಹೊಸ ಲುಕ್ ಸಖತ್ ವೈರಲ್ ಆಗ್ತಿದೆ.
ಇದೀಗ ಸಾನ್ಯಾ ಅಯ್ಯರ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಗೌರಿ ಸಿನಿಮಾದ ಟ್ರೈಲರ್ ಬಿಡುಗಡೆ ಸಂದರ್ಭದಲ್ಲಿ ತೆಗೆದಂತಹ ಫೋಟೋಗಳನ್ನು ಶೇರ್ ಮಾಡಿದ್ದು, ಸಾನ್ಯಾ ಬೋಲ್ಡ್‌ನೆಸ್ ನೋಡಿ ನೆಟ್ಟಿಗರು ಸುಸ್ತಾಗಿದ್ದಾರೆ.