ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ ‘ತ್ರಿಕೋನ’ ಚಿತ್ರದ ಮೋಷನ್ ಪೋಸ್ಟರ್..

Date:

ತ್ರಿಕೋನ ಪೊಲೀಸ್ ಪ್ರಕ್ಕಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ರಾಜಶೇಖರ್ ಅವರು ನಿರ್ಮಿಸಿರುವ ‘ತ್ರಿಕೋನ‘ ಚಿತ್ರಕ್ಕೆ ಇದೀಗ ಯುಎ ಸರ್ಟಿಫಿಕೇಟ್ ಸಿಕ್ಕಿದೆ.‌ 

ಚಿತ್ರ ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಅರ್ಹತಾ ಪತ್ರ ನೀಡಿದೆ. ತ್ರಿಕೋನ ಚಿತ್ರಕ್ಕೆ ಯಾವುದೇ ಕಟ್ ನೀಡದೆ, ಸೌಂಡ್ ಮ್ಯೂಟ್ ಸಹ ನೀಡದೆ ಸೆನ್ಸಾರ್ ಮಂಡಳಿ ಯು/ಎ ಅರ್ಹತಾ ಪತ್ರ ಸಿಕ್ಕಿದೆ.

ವರ ಮಹಾಲಕ್ಷ್ಮೀ ಹಬ್ಬದಂದು ತ್ರಿಕೋನಾ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಇನ್ನೂ ಕನ್ನ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದ್ದು, ಮೂರು ಭಾಷೆಗಳಲ್ಲೂ ಮೋಷನ್ ಪೋಸ್ಟರ್ ರಿಲೀಸ್ ಮಾಡಲಾಗಿದೆ.

ತ್ರಿಕೋನ ಚಿತ್ರತಂಡವೂ ಚಿತ್ರದ ಪ್ರಚಾರ ಕಾರ್ಯದ ಭಾಗವಾಗಿ ಮೋಷನ್ ಪೋಸ್ಟರ್‌ನ್ನು ಇತ್ತೀಚೆಗೆ ಕನ್ನಡ ಸೇರಿದಂತೆ, ತ್ರಿಕೋನಂ ಎಂದು ತೆಲುಗಿನಲ್ಲಿ ಹಾಗೂ ಗೋಸುಲೋ ಎಂಬ ಹೆಸರಿನಿಂದ ತಮಿಳಿನಲ್ಲೂ ಬಿಡುಗಡೆ ಮಾಡಿದೆ.

ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ ಕೆಲವೇ ಕ್ಷಣಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸೈ ಎನಿಸಿಕೊಂಡಿದೆ. ಅದ್ಭುತವಾದ ಗ್ರಾಫಿಕ್ಸ್ ಹಾಗೂ ರಿ-ರೇಕಾರ್ಡಿಂಗ್‌ ನಿಂದಾಗಿ ನೋಡುಗರಲ್ಲಿ ಕುತೂಹಲವನ್ನು ಕೆರಳಿಸುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಉತ್ತಮ ರೆಸ್ಪಾನ್ಸ್ ಸಿಗುತ್ತಿದ್ದು, ಚಿತ್ರತಂಡ ಸಂತಸದಲ್ಲಿದೆ. 

ಚಿತ್ರದಲ್ಲಿ ಸುರೇಶ್ ಹೆಬ್ಳೀಕರ್, ಲಕ್ಷ್ಮಿ, ಅಚ್ಯುತ್ ಕುಮಾರ್, ಸುಧಾರಾಣಿ ಹಾಗೂ ಸಾಧುಕೋಕಿಲ‌ ಪ್ರಮುಖ ‌ಪಾತ್ರಗಳಲ್ಲಿ ನಟಿಸಿದ್ದಾರೆ.  ಇನ್ನೂ ಮೋಷನ್ ಪೋಸ್ಟರ್ ನಲ್ಲೇ ತಾರಾಗಣವನ್ನು ಪರಿಚಯಿಸಿದೆ ಚಿತ್ರತಂಡ.‌

ತ್ರಿಕೋನಾ ಚಿತ್ರದ ಮೋಷನ್ ಪೋಸ್ಟರ್ ನಲ್ಲಿ‌ ಮತ್ತೊಂದು ವಿಶೇಷ ಅಂದರೆ ಚಲ್ ಚಲ್ ಚುಲಾ‌ ಪದ ಸಖತ್ ಟ್ರೆಂಡ್ ಆಗಿದೆ.

ಅಂದಹಾಗೆ ಈ ಮೋಷನ್ ಪೋಸ್ಟರ್ ಕನ್ನಡ ಹಾಗೂ ತೆಲುಗಿಗಿಂತಲೂ ತಮಿಳಿನಲ್ಲಿ ಹೆಚ್ಚು ಸದ್ದು ಮಾಡಿದೆ.ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ಮಾಪಕ ರಾಜಶೇಖರ್ ಅವರೇ ಕಥೆ ಬರೆದಿದ್ದು, ೧೪೩ ಚಿತ್ರದ ಖ್ಯಾತಿಯ ಚಂದ್ರಕಾಂತ್ ನಿರ್ದೇಶನ ಮಾಡಿದ್ದಾರೆ. ಕನ್ನಡ, ತೆಲುಗು, ತಮಿಳು ಮೂರು ಭಾಷೆಗಳಲ್ಲಿ ವಿಭಿನ್ನ ಚಿತ್ರಕಥೆಯೊಂದಿಗೆ ನಿರ್ಮಾಣವಾಗಿದೆ. ಮೂರು ಭಾಷೆಗಳಲ್ಲಿ ಮೂರು ಬೇರೆ ಬೇರೆ ಚಿತ್ರಕಥೆಯೊಂದಿಗೆ ನಿರ್ಮಾಣವಾಗಿರುವುದು ವಿಶೇಷ. ನಿರ್ದೇಶಕರ ಹೊರತುಪಡಿಸಿ ಆಯಾ ಭಾಷೆಗಳಲ್ಲಿ ಅಲ್ಲಿನ ನುರಿತ ತಂತ್ರಜ್ಞರು ಕಾರ್ಯ ನಿರ್ವಹಿಸಿದ್ದಾರೆ.

ಸುರೇಂದ್ರನಾಥ್ ಸಂಗೀತ ನಿರ್ದೇಶನ ಮಾಡಿದ್ದರೆ, ಶ್ರೀನಿವಾಸ್ ವೆನಕೋಟ ಛಾಯಾಗ್ರಹಣ ಚಿತ್ರಕ್ಕಿದೆ. 

ಜೀವನ್ ಪ್ರಕಾಶ್ ಸಂಕಲನ, ಹೈಟ್ ಮಂಜು ನೃತ್ಯ ನಿರ್ದೇಶನ ಹಾಗೂ ಜಾನಿ, ಚೇತನ್ ಡಿಸೋಜ ಸಾಹಸ ನಿರ್ದೇಶನವಿದೆ. ಈ ಚಿತ್ರದ ತಾರಾಬಳಗದಲ್ಲಿ ಸುರೇಶ್ ಹೆಬ್ಳೀಕರ್, ಲಕ್ಷ್ಮೀ, ಅಚ್ಯುತ ಕುಮಾರ್, ಸುಧಾರಾಣಿ, ಸಾಧುಕೋಕಿಲ, ಭಜರಂಗಿ ಮಾರುತೇಶ್, ರಾಜವೀರ್, ಅದಿತಿ ರಾಜ್, ಹಾಸಿನಿ ಮುಂತಾದವರು ಕಾಣಿಸಿಕೊಂಡಿದ್ದಾರೆ. ಇನ್ನೇನು ಚಿತ್ರಮಂದಿರಗಳು ತೆರೆಯುತ್ತಿದ್ದಂತೆ ತ್ರಿಕೋನ ಸಿನಿಮಾ ತೆರೆಗೆ ಬರಲು ರೆಡಿಯಾಗಿದೆ.

Share post:

Subscribe

spot_imgspot_img

Popular

More like this
Related

ಡಿಕೆಶಿ ನೀರಿನ ಹೆಜ್ಜೆ ಇನ್ನಾವುದೋ ಪುಸ್ತಕದ ಕಟ್ ಅಂಡ್ ಪೇಸ್ಟ್: ಹೆಚ್.ಡಿ. ಕುಮಾರಸ್ವಾಮಿ ಕಿಡಿ

ಡಿಕೆಶಿ ನೀರಿನ ಹೆಜ್ಜೆ ಇನ್ನಾವುದೋ ಪುಸ್ತಕದ ಕಟ್ ಅಂಡ್ ಪೇಸ್ಟ್: ಹೆಚ್.ಡಿ....

ಸಾಲುಮರದ ತಿಮ್ಮಕ್ಕ, ಎಸ್.ಎಲ್.ಭೈರಪ್ಪ ಸಹಿತ ಅಗಲಿದ ಗಣ್ಯರಿಗೆ ವಿಧಾನ ಪರಿಷತ್‌ನಲ್ಲಿ ಸಂತಾಪ

ಸಾಲುಮರದ ತಿಮ್ಮಕ್ಕ, ಎಸ್.ಎಲ್.ಭೈರಪ್ಪ ಸಹಿತ ಅಗಲಿದ ಗಣ್ಯರಿಗೆ ವಿಧಾನ ಪರಿಷತ್‌ನಲ್ಲಿ ಸಂತಾಪ ಬೆಳಗಾವಿ:...

ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಕೇಂದ್ರ ಸರ್ಕಾರವೇ ಉತ್ತರ ಕೊಡಬೇಕು: ಡಿ.ಕೆ. ಶಿವಕುಮಾರ್

ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಕೇಂದ್ರ ಸರ್ಕಾರವೇ ಉತ್ತರ ಕೊಡಬೇಕು: ಡಿ.ಕೆ. ಶಿವಕುಮಾರ್ ಬೆಂಗಳೂರು:...

ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಕಲಾಪ ಆರಂಭ

ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಕಲಾಪ ಆರಂಭ ಬೆಳಗಾವಿ: ಕರ್ನಾಟಕ ವಿಧಾನಮಂಡಳದ ಚಳಿಗಾಲದ ಅಧಿವೇಶನ...