ಸಾಮಾನ್ಯ ಕುಟುಂಬದಿಂದ ಟಾಪ್ 15 ಶತಕೋಟ್ಯಾಧಿಪತಿಗಳಲ್ಲಿ ಒಬ್ಬರಾಗುವ ತನಕ..!

Date:

ರಾಧಕೃಷ್ಣ ದಮನಿ, ಭಾರತೀಯ ಯಶಸ್ಸಿ ಉದ್ಯಮಿ. 60 ವರ್ಷ ವಯಸ್ಸಿನ ದಮನಿ ಈಗ D-Mart ಕಂಪನಿಯನ್ನು ನಡೆಸುತ್ತಿದ್ದಾರೆ. ಭಾರತದಲ್ಲಿ ಇವರ ಒಡೆತನದ D-Mart, 100ಕ್ಕಿಂತ ಹೆಚ್ಚು ಮಾರ್ಕೆಟ್ ಗಳಿವೆ. ದೇಶದ ಮೂರನೇ ಬಹು ದೊಡ್ಡ ಉದ್ಯಮ ಕೂಡ ಇದಾಗಿದೆ. ಇವರ ಕಂಪನಿಯ ಅಂದಾಜು ಐದುವರೆ ಶತಕೋಟಿ ಮೌಲ್ಯದಾಗಿದೆ.

ಅಷ್ಟೇ ಅಲ್ಲ, ಈಗ ರಾಧಕೃಷ್ಣ ದಮಿನಿಯವರು ಭಾರತೀಯ 15 ಅಗ್ರ ಶತಕೋಟ್ಯಾಧಿಪತಿಗಳಲ್ಲಿ ಒಬ್ಬರಾಗಿದ್ದಾರೆ. ಇವರು ಇಂಡಿಯಾ ಸಿಮೆಂಟ್ ಮತ್ತು ತಂಬಾಕು ಕಂಪನಿ ವಿಸ್ಟಿ ಇಂಸ್ಟ್ರೀಸ್ ಗಳಂತಹ ಅನೇಕ ಸಂಸ್ಥೆಗಳಲ್ಲಿ ಕೂಡ ಪಾಲನ್ನು ಹೊಂದಿದ್ದಾರೆ. ಮಧ್ಯಮ ವರ್ಗದಿಂದ ಬಂದ ದಮನಿಯವರು ತುಂಬಾ ಸರಳವಾದ ವ್ಯಕ್ತಿ. ಫೇಸ್ಟುಕ್, ಟ್ವಿಟಿರ್ ಇಂತಹ ಸಾಮಾಜಿಕ ತಾಣಗಳಿಂದ ದೂರವಿರುವವರು.
ಮೊದಲಿಗೆ ಈ ದಮನಿಯವರು Ball Bearings ನ ವ್ಯಾಪಾರಿಯಾಗಿದ್ದರು. ಮೊದ ಮೊದಲು ಇವರು ಸ್ಟಾಕ್ ಮಾರ್ಕೆಟ್ ಗೆ ಬರುವ ಉದ್ದೇಶವನ್ನೇ ಇಟ್ಟುಕೊಂಡಿರಲಿಲ್ಲ. ಆದರೆ, ಪರಿಸ್ಥಿತಿಯ ಅನಿವಾರ್ಯ ಸ್ಥಿತಿಯಿಂದ ಸ್ಟಾಕ್ ಮಾರ್ಕೆಟ್ ಗೆ ಎಂಟ್ರಿಕೊಟ್ರಂತೆ. ದಮನಿಯವರ ತಂದೆಯ ಮರಣದ ನಂತರ ಅವರು ತಮ್ಮ ಅಣ್ಣನ ಜೊತೆ ಸೇರಿ ಸ್ಟಾಕ್ ಬ್ರೋಕರ್ ವ್ಯಾಪಾರವನ್ನು ಶುರು ಮಾಡಿದ್ರು. ಈಗ ಯಶಸ್ಸಿ ಸ್ಟಾಕ್ ಬ್ರೋಕರ್ ಎಂದೇ ಪ್ರಸಿದ್ಧಿಯಾಗಿದ್ದಾರೆ.


ಇನ್ನು ರಾಧಾಕೃಷ್ಣ ದಮನಿ ಅವರನ್ನು ಸ್ಟಾಕ್ ಮಾರ್ಕೆಟ್ ನಲ್ಲಿ White and White ಅಂತ ಕೂಡ ಕರೆಯಲಾಗುತ್ತದೆ. ಸ್ಟಾಕ್ ಬ್ರೋಕರ್ ಜೊತೆಗೆ ಟ್ರೇಡರ್ ಮತ್ತು ಡಿ ಮಾರ್ಟ್ ಉದ್ಯಮವೊಂದರ ಮಾಲೀಕರ ಕೂಡ. ದಮಿನಿಯವರು ಬಿಗ್ ಬುಲ್ ಎಂದೇ ಪ್ರಸಿದ್ಧಿಯಾದ ರಾಕೇಶ್ ಜುಂಜುನ್ಟಾಲ್ ಅವರ ಗುರು ಕೂಡ ಹೌದು. ಇನ್ನೊಂದು ವಿಶೇಷ ಏನೆಂದರೆ ಅವರು ಲಾಂಗ್ ಟರ್ಮ್ಸ್ ಇನ್ವೆಸ್ಟರ್. ಅಂದರೆ ತುಂಬಾ ಕಡಿಮೆ ಬೆಲೆಯಲ್ಲಿ ಷೇರುಗಳನ್ನು ಖರೀದಿ ಮಾಡಿ, 10ರಿಂದ 12 ವರ್ಷಗಳ ವರೆಗೆ ಆ ಷೇರುಗಳನ್ನು ಇಟ್ಟುಕೊಂಡು ಇರುವುದು ಅವರಿಗೆ ಇಷ್ಟ.


ಸಾಮಾನ್ಯವಾಗಿ ನೀವು ನೋಡಿರಬಹುದು. ಈಗಿನ ಕಾಲದಲ್ಲಿ Short Term Investment ನಲ್ಲಿ ಯಶಸ್ವಿಯನ್ನು ಯಾರು ಕಂಡಿಲ್ಲ. ಆದರೆ Long Term Investment ಮಾಡಿದವರು ತಮ್ಮ ವ್ಯಾಪಾರದಲ್ಲಿ ಯಶಸ್ಸನ್ನು ಕಂಡು ಬಿಲೇನಿಯರ್ ಆಗಿದ್ದಾರೆ. ದಮನಿಯವರು ಗುಜರಾತಿಯಾಗಿದ್ದರಿಂದ ಅವರು ತಮ್ಮ ಜೀವನದಲ್ಲಿ ಒಂದು ಸೂತ್ರವನ್ನು ನಂಬುತ್ತಿದ್ದರು. ಅದೇನೆಂದರೆ, ಯಾವಾಗ ಸ್ಟಾಕ್ ವ್ಯಾಲ್ಯೂ ಮೇಲೇರುತ್ತೆ ಆಗ ನೀವು ಅದರ ಮೇಲೆ ಇನ್ವೆಸ್ಟ್ ಮಾಡಿ ಮತ್ತು ಯಾವಾಗ ಸ್ಟಾಕ್ ವ್ಯಾಲ್ಯೂ ಕೆಳಗಡೆ ಇಳಿಯುತ್ತದೆ ಆಗ ನೀವು share ಮಾರಿಬಿಡಬೇಕು ಎಂದರ್ಥ.
ಒಲ್ಲದ ಮನಸ್ಸಿನಿಂದ ಸ್ಟಾಕ್ ಮಾರ್ಕೆಟ್ ಎಂಟ್ರಿ ಕೊಟ್ಟ ರಾಧಕೃಷ್ಣ ದಮನಿಯವರು, ಇದು ಆ ಕ್ಷೇತ್ರದಲ್ಲಿ ಮಹೋನ್ನತ ಸಾಧನೆ ಮಾಡಿದ್ದಾರೆ. ಸ್ಟಾಕ್ ಬ್ರೋಕರ್ ಜೊತೆಗೆ ಈಗ ಬಿಗ್ ಟ್ರೇಡರ್ ಹಾಗೂ ಡಿ ಮಾರ್ಟ್ ಯಶಸ್ಸಿ ಸಾಧಕರೆನಿಸಿ, ಮಧ್ಯಮ ವರ್ಗದ ಪಾಲಿನ ಸ್ಫೂರ್ತಿಯ ಸೆಲೆಯಾಗಿದ್ದಾರೆ.

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...