No menu items!
10.2 C
Munich
Saturday, May 16, 2026

ಕೇಂದ್ರ ಬಜೆಟ್ನಲ್ಲಿ ಮೂರು ‘ಸಿ’ಗಳು: ಕಂಟಿನ್ಯೂಯಿಟಿ, ಕ್ರೆಡಿಬಿಲಿಟಿ, ಕಮಿಟ್ಮೆಂಟ್ – ಛಲವಾದಿ ನಾರಾಯಣಸ್ವಾಮಿ

Must read

ಕೇಂದ್ರ ಬಜೆಟ್ನಲ್ಲಿ ಮೂರು ‘ಸಿ’ಗಳು: ಕಂಟಿನ್ಯೂಯಿಟಿ, ಕ್ರೆಡಿಬಿಲಿಟಿ, ಕಮಿಟ್ಮೆಂಟ್ – ಛಲವಾದಿ ನಾರಾಯಣಸ್ವಾಮಿ

ದೊಡ್ಡಬಳ್ಳಾಪುರ: ಈ ಬಾರಿಯ ಕೇಂದ್ರ ಬಜೆಟ್ನಲ್ಲಿ ಮೂರು ‘ಸಿ’ಗಳು ಸ್ಪಷ್ಟವಾಗಿ ಕಾಣಿಸುತ್ತವೆ. ಅವುಗಳಲ್ಲಿ ಮೊದಲನೆಯದು ಕಂಟಿನ್ಯೂಯಿಟಿ (ಮುಂದುವರಿಕೆ). ಇದು ಕಳೆದ ಬಜೆಟ್ನ ಮುಂದುವರಿಕೆಯೇ ಆಗಿದೆ. ಯಾವುದೇ ಬೆಲೆ ಏರಿಕೆಯೂ ಇಲ್ಲ, ತೆರಿಗೆ ಹೆಚ್ಚಳವೂ ಅಥವಾ ಕಡಿತವೂ ಇಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದ್ದಾರೆ.
ಇಂದು ದೊಡ್ಡಬಳ್ಳಾಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ಬಜೆಟ್ನಲ್ಲಿ 12 ಲಕ್ಷ ರೂಪಾಯಿ ಆದಾಯದವರೆಗೆ ತೆರಿಗೆ ವಿನಾಯಿತಿ ನೀಡಲಾಗಿತ್ತು. ಈ ಬಾರಿ ಅದರಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಜನರಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸುವುದಕ್ಕೆ ಬಜೆಟ್ನಲ್ಲಿ ಒತ್ತು ನೀಡಲಾಗಿದೆ ಎಂದು ಹೇಳಿದರು.
ಬಜೆಟ್ನ ಎರಡನೇ ‘ಸಿ’ ಎಂದರೆ ಕ್ರೆಡಿಬಿಲಿಟಿ (ವಿಶ್ವಾಸಾರ್ಹತೆ). ಸರ್ಕಾರ ತನ್ನ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿದೆ. ಮೂರನೇ ‘ಸಿ’ ಕಮಿಟ್ಮೆಂಟ್ (ಬದ್ಧತೆ). ನಾವು ನುಡಿದಂತೆ ನಡೆದುಕೊಂಡಿದ್ದೇವೆ. ಸುಳ್ಳು ಹೇಳಿಲ್ಲ. ನಮ್ಮ ಬದ್ಧತೆಯನ್ನು ಈ ಬಜೆಟ್ ಮೂಲಕ ಪ್ರದರ್ಶಿಸಿದ್ದೇವೆ ಎಂದು ಅವರು ವಿಶ್ಲೇಷಿಸಿದರು.
ಇದೇ ವೇಳೆ ಕಾಂಗ್ರೆಸ್ ಪಕ್ಷದ ಮೇಲೆ ವಾಗ್ದಾಳಿ ನಡೆಸಿದ ಛಲವಾದಿ ನಾರಾಯಣಸ್ವಾಮಿ, ಕಾಂಗ್ರೆಸ್ನ ಮೂರು ‘ಸಿ’ಗಳು ಎಂದರೆ ಕರಪ್ಶನ್ (ಭ್ರಷ್ಟಾಚಾರ). ಭ್ರಷ್ಟಾಚಾರದಲ್ಲಿ ಅವರು ನಿಪುಣರು ಎಂದು ಆರೋಪಿಸಿದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ 12 ವರ್ಷ ಪೂರೈಸಿದ್ದು, ಈ ಅವಧಿಯಲ್ಲಿ ಯಾವುದೇ ಭ್ರಷ್ಟಾಚಾರದ ಆರೋಪಗಳಿಲ್ಲ ಎಂದು ಹೇಳಿದರು.

- Advertisement -spot_img

More articles

- Advertisement -spot_img

Latest article