ಸಾರ್ವಜನಿಕರೇ ಕೇವಲ ಗುಂಡಿಗಳಷ್ಟೇ ಅಲ್ಲ, ಜೀವ ಬಲಿಗಾಗಿ ಕಾದು ಕುಳಿತಿದೆ ಒಣಗಿದ ಮರಗಳು!

Date:

 

ಬೆಂಗಳೂರು:- ಗಾರ್ಡನ್ ಸಿಟಿ, ಸಿಲಿಕಾನ್ ಸಿಟಿ ಎಂಬ ಬಿರುದು ಪಡೆದಿದ್ದ ಬೆಂಗಳೂರಿಗೆ ಇತ್ತೀಚಿನ ದಿನಗಳಲ್ಲಿ ಗುಂಡಿಗಳ ಸಿಟಿ ಎಂದು ನೆಟ್ಟಿಗರು ಕಾಲೆಳೆಯಿತ್ತಿದ್ದಾರೆ.

ರಸ್ತೆಯ ಮಧ್ಯೆ ಇರುವ ಗುಂಡಿಗಳಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ಇನ್ನಿಲ್ಲದ ಸಂಕಷ್ಟ ಅನುಭವಿಸುತ್ಕಿದ್ದಾರೆ. ಇದರ ಮಧ್ಯೆ ಇದೀಗ ಮತ್ತೊಂದು ಸಮಸ್ಯೆ ಉಲ್ಬಣಿಸಿದೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆಗಾಗ ಬಂದು ಹೋಗೊ ಮಳೆ ಹಿನ್ನಲೆ ಸಾಕಷ್ಟು ಅವಾಂತರ ಸೃಷ್ಟಿಯಾಗುತ್ತಿವೆ. ರಸ್ತೆ ಗುಂಡಿಗಳ ಸಮಸ್ಯೆ ಜೊತೆಗೆ ಯಾವಾಗ ಯಾವ ಮರ ಬೀಳುತ್ತೋ ಅಂತ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಓಡಾಡುತ್ತಿದ್ದಾರೆ. ಹೀಗಿರುವಾಗ ಗಾಳಿ ಮಳೆಯಿಂದಾಗಿ ನಗರದಲ್ಲಿ ನೂರಾರು ಮರಗಳು ಧರೆಗುರುವೆ, ಮತ್ತೊಂದೆಡೆ ನಗರದ ಪ್ರಮುಖ ಬೀದಿಗಳಲ್ಲಿ ಒಣಗಿದ ಮರಗಳು ಜನರ ಬಲಿಗಾಗಿ ಕಾದು ನಿಂತಿದ್ರೆ, ಜಯನಗರ 4 ನೇ ಬ್ಲಾಕ್‌ನ ಬಿಬಿಎಂಪಿ ಸಾರ್ವಜನಿಕ ಪಾರ್ಕ್‌ನಲ್ಲಿ15 ಕ್ಕೂ ಅಧಿಕ ಮರಗಳು ಒಣಗಿ ಹೋಗಿದ್ದು ಆಗಲೋ ಈಗಲೋ ಬೀಳುವ ಸ್ಥಿತಿಯಲ್ಲಿದ್ದು, ಬೆಳಿಗ್ಗೆ ಸಾಯಂಕಾಲ ವಾಕಿಂಗ್‌ಗೆ ಬರೋ ಜನರು ವಾಕಿಂಗ್ ಮಾಡಲು ಭಯ ಪಡುವಂತಾಗಿದ್ದು, ವಾಕಿಂಗ್ ಮಾರೋರು ಜೀವಕಳೆದುಕೊಳ್ಳೊಕೆ ಬರ್ತಾರಾ ಹೀಗಾಗಿ ಒಣಗಿದ ಮರಗಳನ್ನ ತೆರವುಗೊಳಿಸುವಂತೆ ಆಗ್ರಹಿಸುತ್ತಿದ್ದಾರೆ.

ಪಾಲಿಕೆ ವ್ಯಾಪ್ತಿಯಲ್ಲಿರುವ ಯಾವುದೇ ಮರಗಳನ್ನ ಪಾಲಿಕೆ ಅನುಮತಿ ಇಲ್ಲದೇ ತೆರವಿಗೊಳಿಸುವಂತಿಲ್ಲ. ಇನ್ನೂ ಈ ಪಾರ್ಕ್‌ನ್ನ ತುಂಬಾ ಚೆನ್ನಾಗಿ ನಿರ್ವಹಣೆ ಮಾಡಲಾಗುತ್ತಿದೆಯಾದರೆ ಅವರು ಮರಗಳನ್ನ ತೆರವುಗೊಳಿಸುವಂತಿಲ್ಲ. ಇಲ್ಲಿರುವಂತಹ ಮರಗಳ ಒಣಗಿದ ರೆಂಬೆಕೊಂಬೆ ಹಾಗೂ ಸಂಪೂರ್ಣವಾಗಿ ಒಣಗಿದ ಮರಗಳನ್ನ ಪಾಲಿಕೆಯ ಅರಣ್ಯ ವಿಭಾಗದ ಅಧಿಕಾರಿಗಳು ತೆರವುಗೊಳಿಸಬೇಕು. ಆದರೆ ಪಾಲಿಕೆ ಅಧಿಕಾರಿಗಳು ಮಾತ್ರ ಈ ಬಗ್ಗೆ ತಲೆ ಕೆಡಸಿಕೊಳ್ಳದೇ ನಿರ್ಲಕ್ಷ ವಹಿಸುತ್ತಿದ್ದಾರೆ.

ಪರಿಣಾಮ ಪಾರ್ಕ್‌ನಲ್ಲಿ ಕುಳಿತುಕೊಳ್ಳಲು ಓಡಾಡಲು ಭಯ ಪಡುತ್ತಿರೋ ಜನರು ಮತ್ತೊಂದೆಡೆಗೆ ಒಣಗಿದ ಮರಗಳಿಂದ ಪಾರ್ಕ್‌ ಪಕ್ಕದಲ್ಲಿ ವಾಹನಗಳನ್ನ ನಿಲ್ಲಿಸಲು ಕೂಡ ಜನರು ಭಯ ಪಡುವಂತಾಗಿದೆ. ಮಳೆ ಬಂದು ಮರ ಬಿದ್ದಾಗ ತೆರವುಗೊಳಿಸುವ ಬದಲು ಇದೀಗ ಒಣಗಿದ ಮರಗಳನ್ನ ತೆರವುಗೊಳಿಸುವ ಮೂಲಕ ಸಾರ್ವಜನಿಕರ ಓಡಾಟಕ್ಕೆ ಅನಕೂಲ ಮಾಡಿಕೊಡಿ ಎನ್ನುತ್ತಾರೆ ವಾಯುವಿಹಾರಿಗಳು.

Share post:

Subscribe

spot_imgspot_img

Popular

More like this
Related

ಮನರೇಗಾವನ್ನು ಉಳಿಸಲು ಮಂಗಳವಾರ “ಲೋಕಭವನ ಚಲೋ”: ಡಿಸಿಎಂ ಡಿ.ಕೆ. ಶಿವಕುಮಾರ್

ಮನರೇಗಾವನ್ನು ಉಳಿಸಲು ಮಂಗಳವಾರ “ಲೋಕಭವನ ಚಲೋ”: ಡಿಸಿಎಂ ಡಿ.ಕೆ. ಶಿವಕುಮಾರ್ ಬೆಂಗಳೂರು: ಮನರೇಗಾ...

ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಕ್ರಮ ತಡೆಗೆ ಕಠಿಣ ಕ್ರಮ: ಅಲೋಕ್ ಕುಮಾರ್ ನೇತೃತ್ವದಲ್ಲಿ ಸುಧಾರಣೆ

ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಕ್ರಮ ತಡೆಗೆ ಕಠಿಣ ಕ್ರಮ: ಅಲೋಕ್ ಕುಮಾರ್...

ಬಿಜೆಪಿ ರಾಷ್ಟ್ರ ಮುನ್ನಡೆಸಲು ಅಸಮರ್ಥ; ಮನರೇಗಾ ನಾಶಕ್ಕೆ ಹೊರಟಿದ್ದಾರೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕಿಡಿ

ಬಿಜೆಪಿ ರಾಷ್ಟ್ರ ಮುನ್ನಡೆಸಲು ಅಸಮರ್ಥ; ಮನರೇಗಾ ನಾಶಕ್ಕೆ ಹೊರಟಿದ್ದಾರೆ: ಸಚಿವೆ ಲಕ್ಷ್ಮೀ...

77ನೇ ಗಣರಾಜ್ಯೋತ್ಸವ: ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಹುತಾತ್ಮ ಯೋಧರಿಗೆ ಪ್ರಧಾನಿ ಮೋದಿ ನಮನ

77ನೇ ಗಣರಾಜ್ಯೋತ್ಸವ: ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಹುತಾತ್ಮ ಯೋಧರಿಗೆ ಪ್ರಧಾನಿ ಮೋದಿ...