ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಫೇಕ್ ಸುದ್ದಿಗಳು ಹರಿದಾಡುವುದು ಹೆಚ್ಚಾಗಿಬಿಟ್ಟಿದೆ. ಅದರಲ್ಲೂ ಕೊರೊನಾವೈರಸ್ ಬಂದ ಮೇಲೆ ಫೇಕ್ ಸುದ್ದಿಗಳ ಹಾವಳಿ ಹೆಚ್ಚಾಗಿದ್ದು ದಿನೇ ದಿನೇ ಸುಳ್ಳು ಸುದ್ದಿ ಹರಡುವವರ ಸಂಖ್ಯೆ ಹೆಚ್ಚಾಗುತ್ತಿದೆ.
ಕನ್ನಡದ ಹಿರಿಯ ಹಾಸ್ಯನಟ ದೊಡ್ಡಣ್ಣ ಅವರಿಗೆ ಇದೀಗ ಈ ಸುಳ್ಳು ಸುದ್ದಿಯ ಕಿರಿಕಿರಿ ಉಂಟಾಗಿದ್ದು ಸುಳ್ಳು ಸುದ್ದಿ ಹರಡುವವರ ಬಗ್ಗೆ ಸ್ವತಃ ಅವರೇ ವಿಡಿಯೋ ಮೂಲಕ ಮಾತನಾಡಿದ್ದಾರೆ. ಕಳೆದೆರಡು ದಿನಗಳಿಂದ ಕೊರೊನಾ ದಿಂದ ದೊಡ್ಡಣ್ಣ ಅವರು ಬಳಲುತ್ತಿದ್ದಾರೆ ಮತ್ತು ಇಂದು ಸಾವನ್ನಪ್ಪಿದ್ದಾರೆ ಎಂಬ ಸುದ್ದಿಯೊಂದು ಗಾಢವಾಗಿ ಹರಿದಾಡುತ್ತಿತ್ತು. ಈ ಸುಳ್ಳು ಸುದ್ದಿ ಎಷ್ಟರ ಮಟ್ಟಿಗೆ ಹರಡಿತ್ತು ಎಂದರೆ ದೊಡ್ಡಣ್ಣ ಅವರಿಗೂ ಸಹ ಈ ಸುಳ್ಳು ಸುದ್ದಿ ಮುಟ್ಟಿತ್ತು.
ಈ ಸುಳ್ಳು ಸುದ್ದಿ ಮುಟ್ಟಿದ ಕೂಡಲೇ ಎಚ್ಚೆತ್ತುಕೊಂಡ ದೊಡ್ಡಣ್ಣ ಅವರು ವಿಡಿಯೋವೊಂದನ್ನು ಮಾಡುವುದರ ಮೂಲಕ ‘ನನಗೇನೂ ಆಗಿಲ್ಲ ಕಣ್ರಯ್ಯ ನಾನು ಚೆನ್ನಾಗಿಯೇ ಇದ್ದೇನೆ ಇದೊಂದು ಸುಳ್ಳು ಸುದ್ದಿ ಅಷ್ಟೆ ಯಾರು ನಂಬಬೇಡಿ ನಾನಿನ್ನೂ ನೆಮ್ಮದಿಯಾಗಿದ್ದೇನೆ, ಈ ಸುಳ್ಳು ಸುದ್ದಿ 1ರೀತಿಯ ಕಂಟಕ ಅಷ್ಟೇ ಬರಬೇಕಿತ್ತು ಬಂದುಹೋಯಿತು ನಾನಿನ್ನೂ ಬದುಕಿದ್ದೇನೆ ನೆಮ್ಮದಿಯಾಗಿದ್ದೇನೆ ನೀವು ಆರಾಮಾಗಿರಿ’ ಎಂದು ದೊಡ್ಡಣ್ಣ ವಿಡಿಯೋ ಮೂಲಕ ತಿಳಿಸಿದ್ದಾರೆ.
ಏನೇ ಆಗಲಿ ಯಾವುದಾದರೊಂದು ಸುದ್ದಿ ಬಂದ ಕೂಡಲೇ ಅದು ನಿಜವೋ ಅಥವಾ ಸುಳ್ಳೋ ಎಂದು ಪರಿಶೀಲಿಸಿ ತದನಂತರ ಅದನ್ನು ಹಂಚಿದರೆ ಉತ್ತಮ. ಅದರಲ್ಲಿಯೂ ಸಾವಿನ ಸುದ್ದಿಯಲ್ಲಂತೂ ಸ್ವಲ್ಪ ಹೆಚ್ಚಾಗಿ ಪರಿಶೀಲಿಸುವುದು ಉತ್ತಮ.