ದೇಶದಲ್ಲಿ ಒಟ್ಟು 7 ಹಂತದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದೆ. ಈಗಾಗಲೇ 2 ಹಂತದ ಚುನಾವಣೆ ಮುಗಿದಿದ್ದು ಏಪ್ರಿಲ್ 23ರಂದು 3ನೇ ಹಂತದ ಚುನಾವಣೆ ನಡೆಯುತ್ತಿದೆ. ಕರ್ನಾಟಕದ ವಿಷಯವನ್ನು ತೆಗೆದುಕೊಂಡರೆ ರಾಜ್ಯದ ಮಟ್ಟಿಗೆ ನಾಡಿದ್ದು ನಡೆಯುತ್ತಿರುವುದು 2ನೇ ಹಂತದ ಚುನಾವಣೆ… ಏಪ್ರಿಲ್ 18ರಂದು ರಾಜ್ಯದ 14 ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಈ 14 ಕ್ಷೇತ್ರಗಳಲ್ಲಿ ಎಲ್ಲರ ಗಮನ ಸೆಳೆದ ಕ್ಷೇತ್ರ ಮಂಡ್ಯ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ , ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮತ್ತು ದಿವಂಗತ ರೆಬಲ್ ಸ್ಟಾರ್ ಅಂಬರೀಶ್ ಅವರ ಪತ್ನಿ, ಪಕ್ಷತೇರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ನಡುವಿನ ಹೋರಾಟಕ್ಕೆ ಸಾಕ್ಷಿಯಾಗಿದ್ದ ಮಂಡ್ಯದ ಫಲಿತಾಂಶದ್ದೇ ಕಾತುರು. ಆದರೆ, ಮೇ 23ರವರೆಗೆ ಕಾಯಬೇಕಾಗಿರುವುದು ಅನಿವಾರ್ಯ.
ಮತದಾನ ಮುಗಿದರು ಅಲ್ಲಿ ಪರಸ್ಪರ ವಾಗ್ದಾಳಿ, ಟಾಂಗ್, ಏಟು-ತಿರುಗೇಟು ನಿಂತಿಲ್ಲ. ಎಲೆಕ್ಷನ್ ಬಳಿಕ ಸುಮಲತಾ ಸಿಂಗಾಪುರಕ್ಕೆ ಹೋಗುತ್ತಾರೆ. ಮಂಡ್ಯದಲ್ಲಿ ಇರಲ್ಲ ಎಂಬ ಎದುರಾಳಿಗಳ ಹೇಳಿಕೆಗೆ ಸುಮಲತಾ ಇಂದು ತಿರುಗೇಟು ನೀಡಿದ್ದಾರೆ. ನಮಗೆ ಮಂಡ್ಯನೇ ಸಿಂಗಾಪುರ ಎಂದಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಸಪೋರ್ಟ್ ಮಾಡಿದ ಎಲ್ಲಾ ಜನರಿಗೆ ಧನ್ಯವಾದ ತಿಳಿಸಿದ ಸುಮಲತಾ ಮಂಡ್ಯವೇ ಸಿಂಗಾಪುರ ..ಎಲ್ಲಿಗೂ ಹೋಗಿಲ್ಲ ಎಂದಿದ್ದಾರೆ.
ಸಿಂಗಾಪುರವೇ ಮಂಡ್ಯ ಎಂದು ಸುಮಲತಾ ಹೇಳಿದ್ದು ಏಕೆ ಗೊತ್ತೇ?
Date: