ಸಿಂಪಲ್ ಸ್ಟಾರ್ ಸಿನಿ‌ ಜರ್ನಿಗೆ ಹತ್ತು ವರ್ಷ.. ಉಳಿದವರು ಕಂಡಂತೆ ರಕ್ಷಿತ್ ಶೆಟ್ಟಿ ಏಳುಬೀಳಿನ ಹಾದಿ..

Date:

ರಕ್ಷಿತ್ ಶೆಟ್ಟಿ,, ಸ್ಯಾಂಡಲ್ ವುಡ್ ನ ಸಿಂಪಲ್ ಸ್ಟಾರ್. ನಮ್‌ ಏರಿಯಾದಲ್ಲಿ‌ ಒಂದ್ ದಿನ‌‌ ಅಂತಾ ಗಾಂಧಿನಗರಕ್ಕೆ ಎಂಟ್ರಿ ಕೊಟ್ಟ ಅಪ್ಪಟ ಕನ್ನಡ ಪ್ರತಿಭೆ‌ ರಕ್ಷಿತ್ ಎಂದರೆ ತಪ್ಪಾಗಲಾರದು.‌ ಸದ್ಯ‌ ರಕ್ಷಿತ್ ಶೆಟ್ಟಿ‌ ಬಣ್ಣದ ಲೋಕದಲ್ಲಿ ದಶಕ ಪೂರೈಸಿದ‌‌ ಸಂಭ್ರಮದಲ್ಲಿದ್ದಾರೆ.‌ ಇಂದು ದೊಡ್ಡ ನಟನಾಗಿ ಬೆಳೆದು ನಿಂತಿರುವ ರಕ್ಷಿತ್ ಯಶಸ್ಸಿನ ಹಿಂದೆ ದೊಡ್ಡ ಪರಿಶ್ರಮವೂ ಇದೆ. ಸಾಕಷ್ಟು ಏಳು ಬೀಳುಗಳ ನಡುವೆ ರಕ್ಷಿತ್ ಇಂದು ಪ್ಯಾನ್ ಇಂಡಿಯಾ ಹೀರೋ ಆಗಿ ಗುರುತಿಸಿಕೊಂಡಿದ್ದಾರೆ.

ಉಡುಪಿ ಮೂಲದವರಾದ ರಕ್ಷಿತ್ ಓದಿದ್ದು ಉಡುಪಿಯಲ್ಲಿ. ಮಂಗಳೂರಿನಲ್ಲಿ ಇಂಜಿನಿಯರಿಂಗ್ ಮುಗಿಸಿದ ರಕ್ಷಿತ್ ಆ ನಂತರ ಎರಡೂ ವರ್ಷ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡಿದ್ದಾರೆ. ಆದರೆ ಸಿನಿಮಾ ಮೇಲಿನ ಪ್ರೀತಿ, ಕನಸು ರಕ್ಷಿತ್ ಅವರನ್ನು ಚಿತ್ರರಂಗಕ್ಕೆ ಕರೆತಂದಿದೆ. ಇಂದು ರಕ್ಷಿತ್ ಸ್ಟಾರ್ ನಟರ ಸಾಲಿನಲ್ಲಿ ನಿಂತಿದ್ದಾರೆ. ಹೌದು, ನಟ‌ ಮತ್ತು‌ ನಿರ್ದೇಶಕ ರಕ್ಷಿತ್ ಶೆಟ್ಟಿ ತಮ್ಮ ಸಿನಿ ಬದುಕಿಗೆ ಹತ್ತು ವರ್ಷ ತುಂಬಿದ ಸಂಭ್ರಮದಲ್ಲಿದ್ದಾರೆ. 2010 ರಲ್ಲಿ ‘ನಮ್ ಏರಿಯಾದಲ್ ಒಂದ್ ದಿನ’ ಚಿತ್ರದಲ್ಲಿ ನಟರಾಗಿ ಚಿತ್ರರಂಗಕ್ಕೆ ಪರಿಚಯವಾದ ರಕ್ಷಿತ್, ಆರಂಭದಲ್ಲಿ ಸೋಲುಗಳ ಎದುರಿಸಿದ  ಈಗ ವಿಭಿನ್ನ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದು, ಚಿತ್ರರಂಗದ ಭರವಸೆಯ ನಟ-ನಿರ್ದೇಶಕರಲ್ಲಿ ಒಬ್ಬರಾಗಿ ಸ್ಥಾನ ಪಡೆದಿದ್ದಾರೆ.

ತಮ್ಮ ಮೊದಲ ಸಿನಿಮಾ ನಮ್ ಏರಿಯಾಲ್ ಒಂದಿನ ಸಿನಿಮಾದಲ್ಲೇ ಸೋಲು ಕಂಡರು.‌ ಬಳಿಕ ನಟಿಸಿದ ತುಘಲಕ್ ‌ಸಹ‌‌ ರಕ್ಷಿತ್ ಅವರ ‌ಕೈ ಹಿಡಿಯಲಿಲ್ಲ.‌೨೦೧೩ರಲ್ಲಿ‌ ಸುನೀಲ್ ನಿರ್ದೇಶಿದ ಕಾಮಿಡಿ ಮತ್ತು ಲವ್ ಕಥೆಯುಳ್ಳ ಸಿಂಪಲ್ಲಾಗ್ ಒಂದ್ ಲವ್‍ ಸ್ಟೋರಿ ರಕ್ಷಿತ್ ಗೆ ದೊಡ್ಡ ಬ್ರೇಕ್ ಕೊಟ್ಟು, ಅವರ ಸಿನಿ‌ ಬದುಕನ್ನೇ ಬದಲಿಸಿತು.ನಾಯಕರಾಗಿ ಭರವಸೆ ಮೂಡಿಸಿದ ರಕ್ಷಿತ್ ಹೊಸ‌ ಪ್ರಯತ್ನಕ್ಕೆ ಕೈ ಹಾಕಿದರು. ೨೦೧೪ರಲ್ಲಿ ಅವರು ನಿರ್ದೇಶಿಸಿ ನಟಿಸಿದ ಕ್ರೈಂ-ಡ್ರಾಮಾ ಚಿತ್ರ ಉಳಿದವರು ಕಂಡಂತೆ ಸಿನಿಮಾ ವ್ಯಾಪಕ ವಿಮರ್ಶಾತ್ಮಕ ಪ್ರಶಂಸೆ ಪಡೆಯಿತು. ಈ ಚಿತ್ರವು ಅವರಿಗೆ ಅತ್ಯುತ್ತಮ ಚೊಚ್ಚಲ ನಿರ್ದೇಶಕನಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಮತ್ತು ಅತ್ಯುತ್ತಮ ನಿರ್ದೇಶಕನಾಗಿ (ದಕ್ಷಿಣ) ಫಿಲಂಫೇರ್ ಪ್ರಶಸ್ತಿಗಳನ್ನು ತಂದುಕೊಟ್ಟಿತು.ನಂತರ ವಾಸ್ತು ಪ್ರಕಾರ (೨೦೧೫) ಹಾಗೂ ಗೋಧಿ ಬಣ್ಣ ಸಾಧಾರಣ ಮೈಕಟ್ಟು (೨೦೧೬) ಚಿತ್ರಗಳಲ್ಲಿ ನಟಿಸುವ ಮೂಲಕ ತಮ್ಮ ಯಶಸ್ಸಿನ ಓಟವನ್ನು ಮುಂದುವರಿಸಿದರು. ತಾವೇ ಬರೆದು ನಿರ್ಮಿಸಿದ ೨೦೧೬ರ ಹಾಸ್ಯಪ್ರಧಾನ ಚಿತ್ರ ಕಿರಿಕ್ ಪಾರ್ಟಿ ರಕ್ಷಿತ್ ಶೆಟ್ಟಿ ಅವರಿಗೆ ದೊಡ್ಡ ಯಶಸ್ಸು ತಂದುಕೊಟ್ಟಿತು. ಇದಾದ ಬಳಿಕ ಅವನೇ‌ ಶ್ರೀಮನ್ನಾನಾರಾಯಣ ಚಿತ್ರಕ್ಕೂ ಸಹ ಉತ್ತಮ‌‌‌ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಇನ್ನೂ ರಕ್ಷಿತ್ ಶೆಟ್ಟಿ ಅವರ ದಶಕದ ಪಯಣ ಸ್ವತಃ ಅವರಲ್ಲೇ ಬೆರಗು ಮೂಡಿಸಿದ್ಯಂತೆ. ಏಳು ಬೀಳುಗಳ ನಡುವೆಯೇ ಜನರು ಗುರುತಿಸುವ ಮಟ್ಟಿಗೆ ಬೆಳೆದಿದ್ದು, ಅವರ ಮೇಲೆ ನಿರೀಕ್ಷೆಗಳು ಹೆಚ್ಚಿರುವುದು ವಿಶೇಷವೇನಲ್ಲ. ಈ ದಶಕದ ಸಂಭ್ರಮಾಚರಣೆ ಅವರನ್ನು ಭಾವುಕರನ್ನಾಗಿಸಿದೆ. ತಾವು ಬೆಳೆದು ಬಂದ ಹಾದಿಯ ಬಗ್ಗೆ ಅವರು ಸುದೀರ್ಘ ಬರಹ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ‌‌ ಇದರ‌‌ ಜೊತೆಗೆ ಮತ್ತೊಂದು ವಿಭಿನ್ನ ಬಗೆಯ ಪ್ರಯೋಗದ ಸುಳಿವು ನೀಡಿದ್ದಾರೆ. ತಮ್ಮ‌ ಸಿನಿ ಜರ್ನಿಯ ಬಗ್ಗೆ‌ ಟ್ವೀಟ್ ಮಾಡಿರುವ ರಕ್ಷಿತ್, ‘ನಮ್ ಏರಿಯಾದಲ್ ಒಂದಿನ’ ಚಿತ್ರಕ್ಕೆ ಹತ್ತು ವರ್ಷ. ಈ ಸಿನಿಮಾ ನನ್ನ ವೃತ್ತಿ ಹಾಗೂ ಸಿನಿಮಾ ನಿರ್ದೇಶನಕ್ಕೆ ಬುನಾದಿ ಹಾಕಿತ್ತು. ಇಷ್ಟು ಸುದೀರ್ಘ ಸಮಯ ಕಳೆದಿದೆ ಎನ್ನುವುದನ್ನು ನಂಬುವುದು ಕಷ್ಟವಾಗುತ್ತಿದೆ. ನಮ್ಮ ಸಿನಿಮಾ ಬಿಡುಗಡೆ ಮಾಡಲು ನಿನ್ನೆ ಮೊನ್ನೆ ಗಾಂಧಿನಗರದಲ್ಲಿ ಅಡ್ಡಾಡುತ್ತಿರುವಂತೆ ಭಾಸವಾಗುತ್ತಿದೆ ಎಂದು ಹೇಳಿದ್ದಾರೆ. ಸದ್ಯ ಲಾಕ್ ಡೌನ್‌ನ ವಿರಾಮದಲ್ಲಿರುವ ಬರಹದಲ್ಲಿ ‌ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇನ್ನೂ ರಕ್ಷಿತ್ ಶೆಟ್ಟಿ ಅವರ ದಶಕದ ಪಯಣಕ್ಕೆ ಅವರ ಸ್ನೇಹಿತರು ವಿಶ್ ಮಾಡಿದ್ದಾರೆ.

Share post:

Subscribe

spot_imgspot_img

Popular

More like this
Related

ಸಮಾಜದಲ್ಲಿ ದ್ವೇಷಪೂರಿತ ಭಾಷಣ ಮಾಡುವವರ ವಿರುದ್ಧ FIR: ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

ಸಮಾಜದಲ್ಲಿ ದ್ವೇಷಪೂರಿತ ಭಾಷಣ ಮಾಡುವವರ ವಿರುದ್ಧ FIR: ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ಮಂಗಳೂರು:...

ನಡು ರಸ್ತೆಯಲ್ಲೇ ಹಲ್ಲೆ; ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಅಳಿಯನ ಮೇಲೆ ದಾಳಿ!

ನಡು ರಸ್ತೆಯಲ್ಲೇ ಹಲ್ಲೆ; ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಅಳಿಯನ ಮೇಲೆ...

ಕರ್ನಾಟಕದಲ್ಲಿ ವರುಣಾರ್ಭಟ: ಉತ್ತರ ಕನ್ನಡ ಜಿಲ್ಲೆಗೆ ಆರೆಂಜ್ ಅಲರ್ಟ್​ ಘೋಷಣೆ

ಕರ್ನಾಟಕದಲ್ಲಿ ವರುಣಾರ್ಭಟ: ಉತ್ತರ ಕನ್ನಡ ಜಿಲ್ಲೆಗೆ ಆರೆಂಜ್ ಅಲರ್ಟ್​ ಘೋಷಣೆ ಬೆಂಗಳೂರು: ರಾಜ್ಯದಾದ್ಯಂತ...

ಪತಿಯ ಕಿರುಕುಳಕ್ಕೆ ಬೇಸತ್ತು ಮಹಿಳೆ 3ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನ!

ಪತಿಯ ಕಿರುಕುಳಕ್ಕೆ ಬೇಸತ್ತು ಮಹಿಳೆ 3ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನ! ಬೆಂಗಳೂರು:...