ಸಿಎಂ ಎಂದರೆ C – ಕಲೆಕ್ಷನ್ M ಮಾಸ್ಟರ್: ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಪೋಸ್ಟ್

0
45

ಬೆಂಗಳೂರು;- ಸಿಎಂ ವಿರುದ್ಧ ಬೇರೆಯದೆ ವ್ಯಾಖ್ಯಾನ ಬಳಸಿ ರಾಜ್ಯ ಬಿಜೆಪಿಯು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ. ಸಿಎಂ ಎಂದರೆ C – ಕಲೆಕ್ಷನ್ M ಮಾಸ್ಟರ್ ಎಂದು ಬರೆದು ಸಿದ್ದರಾಮಯ್ಯ ಅವರ ಫೋಟೊದೊಂದಿಗೆ ಬಿಜೆಪಿ ಪೋಸ್ಟ್ ಮಾಡಿದೆ.

ಐಟಿ ದಾಳಿ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಹರಿಹಾಯ್ದ ವಿಪಕ್ಷ ಬಿಜೆಪಿಯು ಸಿಎಂ, DCM ರಾಜೀನಾಮೆಗೆ ಆಗ್ರಹಿಸಿದೆ. ಅಲ್ಲದೇ ಸರ್ಕಾರದ ವಿರುದ್ಧ ಇಂದಿನಿಂದ ರಾಜ್ಯವ್ಯಾಪಿ ಪ್ರತಿಭಟನೆಗೆ ಸಿದ್ಧವಾಗಿದೆ.