ಇಂದು ಸಿಎಂ ಕುಮಾರಸ್ವಾಮಿ ಉಡುಪಿಯಿಂದ ಚಿಕ್ಕಮಗಳೂರಿಗೆ ಆಗಮಿಸಲಿದ್ದು, ಸಂಜೆ ಕೊಪ್ಪಾದ ಕಮ್ಮರಡಿ ಬಳಿಯ ಕುಡ್ನಳ್ಳಿದಲ್ಲಿರುವ ಉಮಾಮಹೇಶ್ವರಿ ದೇವಾಲಯದಲ್ಲಿ ನಡೆಯಲಿರೋ ಹೋಮ-ಹವನ, ಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಶತ್ರು ಸಂಹಾರ, ಯಶಸ್ಸು ಹಾಗೂ ಶ್ರೇಯಸ್ಸಿಗಾಗಿ ಸಿಎಂ ಈ ಪೂಜೆ ಮಾಡುತ್ತಿದ್ದಾರೆ.
ಸಿಎಂ ಹೆಚ್.ಡಿ ಕುಮಾರಸ್ವಾಮಿ ಈ ದಿನ ಸಂಪೂರ್ಣವಾಗಿ ಹೋಮ-ಹವನದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಮಾವಾಸ್ಯೆ ದಿನದಂದೇ ಕುಮಾರಸ್ವಾಮಿ ವಿಶೇಷ ಪೂಜೆ ನಡೆಸಲಿದ್ದಾರೆ.
ಸಿಎಂ ಕುಟುಂಬ ರುದ್ರಹೋಮ ಹಾಗೂ ಗಣಪತಿ ಹೋಮ ನಡೆಸಲಿದ್ದಾರೆ. ನಂತರ ನಾಳೆ ಬೆಳಗ್ಗೆ ಹೋಮದ ಪೂರ್ಣಾಹುತಿಯಲ್ಲಿ ಭಾಗಿಯಾಗಲಿದ್ದಾರೆ. ಕುಮಾರಸ್ವಾಮಿಗೆ ತಂದೆ ಹೆಚ್.ಡಿ ದೇವೇಗೌಡ ಕೂಡಾ ಸಾಥ್ ನೀಡಿಲಿದ್ದಾರೆ. ಕೊಪ್ಪಾ ತಾಲೂಕಿನ ತಲವಾನೆ ಎಸ್ಟೇಟ್‍ನಲ್ಲಿ ಇಂದು ಸಿಎಂ ವಾಸ್ತವ್ಯ ಹೂಡಲಿದ್ದಾರೆ. ಜೆಡಿಎಸ್ ಕಾರ್ಯಕರ್ತ ರಂಗನಾಥ್ ಎಂಬುವವರ ಎಸ್ಟೇಟ್‌ನಲ್ಲಿ ತಂಗಲಿದ್ದಾರೆ ಎಂಬ ಮಾಹಿತಿ ದೊರಕಿದೆ.