ಸಿಎಂ ಬಂದಿರೋದು ಹಣ ಹಂಚಿರೋದು ನನ್ನ ಸೋಲಿಗೆ ಮುಳುವಾಯಿತು: ಬಂಗಾರು ಹನುಮಂತು
ಸಂಡೂರು: ಸಿಎಂ ಬಂದಿರೋದು ಹಣ ಹಂಚಿರೋದು ನನ್ನ ಸೋಲಿಗೆ ಮುಳುವಾಯಿತು ಎಂದು ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಸೋಲು ಒಪ್ಪಿಕೊಂಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ದುಡಿದ ಕಾರ್ಯಕರ್ತರಿಗೆ ಧನ್ಯವಾದ ತಿಳಿಸುತ್ತೇನೆ.
ಸಚಿವ ಶಿವರಾಜ್ ತಂಗಡಗಿ ಬಂದು ಹಣ ಹಂಚಿದ್ದಾರೆ. ಸಿಎಂ ಬಂದಿರೋದು ಹಣ ಹಂಚಿರೋದು ನನ್ನ ಸೋಲಿಗೆ ಮುಳುವಾಯಿತು ಎಂದು ತಿಳಿಸಿದರು. ಈ ಸೋಲನ್ನು ನಾನು ಸವಾಲಾಗಿ ಸ್ವೀಕರಿಸುವೆ. ಮುಂದಿನ ದಿನ ನನಗೆ ಅಥವಾ ದಿವಾಕರ್ ಯಾರಿಗೆ ಟಿಕೆಟ್ ನೀಡಲಿ. ಬಿಜೆಪಿ ಗೆಲವು ನಿಶ್ಚಿತ ಎಂದು ಹೇಳಿದರು.