ಉಪಚುನಾವಣೆಯ ಪಲಿತಾಂಶ ಬಂದ ಬಳಿಕ ಇದೀಗ ಸಿಎಂ ಯಡಿಯೂರಪ್ಪ ಅವರಿಗೆ ತಲೆನೋವು ಅಗಿದೆ ಎಕೆಂದರೆ ಗೆದ್ದ ಎಲ್ಲ ಅಭ್ಯರ್ಥಿಗಳಿಗು ಮಂತ್ರಿ ಸ್ಥಾನ ಸಿಗೊದು ಪಕ್ಕ ಎಂದು ಅವರು ಹೇಳಿದ್ದರು ಆದರೆ ಇದೀಗ ಉಪ ಚುನಾವಣೆಯಲ್ಲಿ ಸೋತಿರುವ ಎಂಟಿಬಿ ನಾಗರಾಜ್ ಹಾಗೂ ಹೆಚ್. ವಿಶ್ವನಾಥ್ ಅವರುಗಳಿಗೂ ಸಚಿವರನ್ನಾಗಿ ಮಾಡುವಂತೆ ನೂತನ ಶಾಸಕರುಗಳು ಯಡಿಯೂರಪ್ಪನವರ ಮೇಲೆ ಒತ್ತಡ ಹೇರುತ್ತಿದ್ದು, ಇದು ಸಂಪುಟ ವಿಸ್ತರಣೆಯನ್ನು ಕಗ್ಗಂಟನ್ನಾಗಿಸುವ ಸಾಧ್ಯತೆ ಇದೆ.
ಇದರ ಜೊತೆಗೆ ಟಿಕೆಟ್ ನಿರಾಕರಿಸಲ್ಪಟ್ಟಿದ್ದ ಆರ್. ಶಂಕರ್ ಅವರನ್ನೂ ಸಚಿವರನ್ನಾಗಿಸುವ ಅನಿವಾರ್ಯತೆ ಈಗ ಎದುರಾಗಿದೆ. ಇದಕ್ಕೆ ಇನ್ನು ಪ್ರತಿಕ್ರಿಯೆ ನೀಡದ ಯಡಿಯೂರಪ್ಪ ಅವರು ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ಕುತೂಹಲ ರಜಕೀಯ ವಲಯದಲ್ಲಿ ಮೂಡಿಬಂದಿದೆ.