ರಾಜ್ಯಾಧ್ಯಕ್ಷ ಡಿ.ವಿವೇಕಾನಂದ ಸ್ವಾಮಿ, ಭಾರತ ಹಲವಾರು ಧರ್ಮ, ಭಾಷೆ, ಜೀವನ ಪದ್ಧತಿಯನ್ನು ಒಳಗೊಂಡಂತಹ ದೇಶವಾಗಿದ್ದು, ಇಲ್ಲಿನ ನಾಗರಿಕರಿಗೆ ನೋಂದಣಿ ಅತ್ಯವಶ್ಯಕವಾಗಿದೆ. ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ನೇಪಾಳದಿಂದ ಅನಧಿಕೃತ ವಲಸಿಗರು ಭಾರತದಾದ್ಯಂತ ಬಂದು ನೆಲೆಸಿದ್ದಾರೆ. ಇವರಲ್ಲಿ ಅನೇಕರು ಸಮಾಜಘಾತುಕ ಶಕ್ತಿಗಳಾಗಿ ಬೆಳೆಯುತ್ತಿದ್ದಾರೆ. ಇಂತಹ ವ್ಯಕ್ತಿಗಳನ್ನು ದೇಶದ ಆಚೆ ಹಾಕಲು ಸಿಎಎ, ಎನ್‌ಆರ್‌ಸಿ ಅವಶ್ಯಕ ಎಂದು ತಿಳಿಸಿದರು.
ಸಿಎಎ ಮತ್ತು ಎನ್‌ಆರ್‌ಸಿಯನ್ನು ವಿರೋಧಿಸುವ ರಾಜಕಾರಣಿಗಳು, ರಾಜಕೀಯ ಪಕ್ಷಗಳು, ಚಲನಚಿತ್ರ ನಟ, ನಟಿಯರು ಹಾಗೂ ಅಂತರ್‌ರಾಷ್ಟ್ರೀಯ ಬರಹಗಾರ್ತಿ ಅರುಂಧತಿ ರಾಯ್ ಸೇರಿದಂತೆ ಮುಂತಾದವರನ್ನು ಕಾನೂನು ಚೌಕಟ್ಟಿನಲ್ಲಿ ಬಂಧಿಸಿ, ಜೈಲಿಗಟ್ಟಬೇಕು ಇಲ್ಲವೇ ಭಾರತದಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.