ಸಿದ್ದಗಂಗ ಮಠಕ್ಕೆ 5 ಲಕ್ಷ ನೀಡಿದ ಪಬ್ಲಿಕ್ ಟಿವಿ…
ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮಿಗಳು ಶಿವೈಕ್ಯರಾದ ಬಳಿಕ ಮಠದಲ್ಲಿ ಹಲವು ಧಾರ್ಮಿಕ ವಿಧಿ ವಿಧಾನಗಳನ್ನ ನಡೆಸಲಾಗುತ್ತಿದೆ.. ಸದ್ಯ ರಾಜ್ಯ ಮಾತ್ರವಲ್ಲದೇ ದೇಶದ ಮೂಲೆ ಮೂಲೆಗಳಿಂದ ಶ್ರೀ ಮಠಕ್ಕೆ ದಾನವನ್ನ ನೀಡುತ್ತಿದ್ದಾರೆ…
ಇನ್ನು ಪಬ್ಲಿಕ್ ಟಿವಿ ವತಿಯಿಂದ ಶ್ರೀ ಮಠಕ್ಕೆ 5 ಲಕ್ಷ ಚೆಕ್ ನೀಡಲಾಗಿದೆ.. ಪಬ್ಲಿಕ್ ಟಿವಿಯ ಮುಖ್ಯಸ್ಥರಾದ ಹಾಗು ಸಂಪಾದಕರಾದ ಹೆಚ್.ಆರ್.ರಂಗನಾಥ್ ಅವರು ಕಿರಿ ಶ್ರೀಗಳ ಸಂದರ್ಶನವನ್ನ ಮಾಡಿದ್ದಾರೆ.. ಮಠದಲ್ಲಿಯೇ ನಡೆದ ಈ ಕಾರ್ಯಕ್ರಮದಲ್ಲಿ ಶ್ರೀ ಶಿವಕುಮಾರ ಸ್ವಾಮಿ ಜೀ ಅವರ ಬಗ್ಗೆ ಮಠದ ಬಗ್ಗೆ ಸ್ವಾರಸ್ಯಕರ ವಿಚಾರಗಳನ್ನ ಕಿರಿಯ ಶ್ರೀಗಳು ಹಂಚಿಕೊಂಡಿದ್ದಾರೆ..
ಇನ್ನು ಇದೇ ಸಂದರ್ಭದಲ್ಲಿ ಮಠಕ್ಕೆ ಪಬ್ಲಿಕ್ ಟಿವಿ ಇಂತಿಯಿಂದ 5 ಲಕ್ಷವನ್ನ ನೀಡಲಾಗಿದೆ.. ಈಗಾಗ್ಲೇ ಬೆಳಕು ಕಾರ್ಯಕ್ರಮದ ಮೂಲಕ ಹಲವರಿಗೆ ಸಹಾಯ ಹಸ್ತ ಚಾಜಿರುವ ಪಬ್ಲಿಕ್ ಟಿವಿ, ಮಠಕ್ಕೆ 5 ಲಕ್ಷ ನೀಡುವ ಮೂಲಕ ಮಠದ ಮೇಲೆ ತಮಗಿರುವ ಕಾಳಜಿಯನ್ನ ಸಾರಿದೆ…CMD ಎಚ್.ಆರ್.ರಂಗನಾಥ್, CEO ಅರುಣ್ ಕುಮಾರ್, ಎಡಿಟರ್ ಅಜ್ಮತ್ ಸೇರಿದಂತೆ COO ಹರೀಶ್ ಕುಮಾರ್ ಸಹ ಉಪಸ್ಥಿತರಿದ್ರು.. ಇನ್ನು ಸಿದ್ದಗಂಗಾ ಮಠಕ್ಕೆ ಮಾತ್ರವಲ್ಲದೇ ಜಯದೇವ ಆಸ್ಪತ್ರೆಗು ವ್ರೈಟ್ ಮನ್ ಮಿಡೀಯಾ ವತಿಯಿಂದ ದನ ಸಹಾಯ ಮಾಡಲಾಗಿದೆ..
ಅಂದಹಾಗೆ ಪಬ್ಲಿಕ್ ಟಿವಿಗೆ ಇದೇ 12 ಕ್ಕೆ 7 ವರ್ಷ ತುಂಬಲಿದೆ.. ಅಂದೇ ಕಿರಿಯ ಶ್ರೀಗಳ ಸಂದರ್ಶನದ ಕಾರ್ಯಕ್ರಮ ಪ್ರಸಾರವಾಗುವ ಸಾಧ್ಯತೆಗಳಿವೆ.. ಇನ್ನು ಶ್ರೀಗಳನ್ನ ಕಳೆದುಕೊಂಡಿರುವುದರಿಂದ ಈ ಬಾರಿ ಪಬ್ಲಿಕ್ ಟಿವಿ ತಮ್ಮ 7 ವರ್ಷದ ಆಚರಣೆಯನ್ನ ಮಾಡಲಿದಿರಲು ತಿರ್ಮಾನಿಸಿದೆ ಎನ್ನಲಾಗಿದೆ.. ಒಟ್ಟಿನಲ್ಲಿ ತ್ರಿವಿಧ ದಾಸೋಹಿಯ ಮಠಕ್ಕೆ ಪಬ್ಲಿಕ್ ಟಿವಿ 5 ಲಕ್ಷ ನೀಡುವ ಮೂಲಕ ಸಾಮಾಜಿಕ ಕಳಕಳಿಯನ್ನ ಮೆರೆದಿದೆ..