ಕಾಂಗ್ರೆಸ್ -ಜೆಡಿಎಸ್ ನೇತೃತ್ವದ ಮೈತ್ರಿ ಸರ್ಕಾರದ ನಾಯಕರು ಹೇಗಾದರೂ ಮಾಡಿ ತಮ್ಮ ಸರ್ಕಾರವನ್ನು ಉಳಿಸಿಕೊಳ್ಳಲೇ ಬೇಕು ಎಂದು ಹರಸಾಹಸ ಪಡುತ್ತಿದ್ದಾರೆ. ಗುರುವಾರ, ಶುಕ್ರವಾರ ಮತ್ತು ನಿನ್ನೆ ಕೂಡ ಪಕ್ಕಾ ಗೇಮ್ ಪ್ಲಾನ್ ಮಾಡ್ಕೊಂಡು ಅದರಲ್ಲಿ ಯಶಸ್ವಿಯಾಗಿದ್ದಾರೆ. ನಿನ್ನೆಯಂತೂ ರಾತ್ರಿ 11.45ರವರೆಗೆ ಸದನದಲ್ಲಿ ಕಾಲಹರಣ ಮಾಡಿ ಇಂದಿಗೆ ವಿಶ್ವಾಸ ಮತಯಾಚನೆ ಮುಂದೂಡಿದ್ದರು..!
ಇಂದು ಸಂಜೆ 6ಗಂಟೆಗೆ ವಿಶ್ವಾಸ ಮತಯಾಚನೆಗೆ ಸ್ಪೀಕರ್ ಡೆಡ್ಲೈನ್ ನೀಡಿದ್ದಾರೆ. ಆದರೆ, ಮೈತ್ರಿ ಇಂದು ಕೂಡ ಕಾಲಹರಣದ ಪ್ಲಾನ್ ಮುಂದುವರೆಸಿದೆ. ಸಿಎಂ ಕುಮಾರಸ್ವಾಮಿ ಸದನಕ್ಕೆ ಹಾಜರಾಗದೇ ತಾಜ್ವೆಸ್ಟೆಂಡ್ನಲ್ಲಿ ಕುಳಿತುಕೊಂಡು ಪ್ಲಾನ್ ಮಾಡ್ತಿದ್ದಾರೆ.
ಸೋಮವಾರವೇ ವಿಶ್ವಾಸ ಮತಯಾಚನೆಗೆ ಕೊನೆಯ ಡೆಡ್ ಲೈನ್ ನೀಡಲಾಗಿದ್ದು, ಸಿದ್ದರಾಮಯ್ಯ ಮತ್ತು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಈ ಹಿಂದಿನ ಕಲಾಪದ ವೇಳೆ ಮಾತು ನೀಡಿದ್ದಾರೆ. ಆದರೆ ಮತಯಾಚನೆ ನಡೆಯುವ ಸಾಧ್ಯತೆ ಕಡಿಮೆ ಇರೋದನ್ನು ಕಂಡ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷರಿಗೆ ನಾನೇ ರಾಜಿನಾಮೆ ಕೊಟ್ಟು ಹೋಗುತ್ತೇನೆ ಎಂದು ತಿಳಿಸಿದ್ದಾರಂತ ವರದಿಯಾಗಿದೆ..!
ಆರ್ ವಿ ದೇಶಪಾಂಡೆ ಅವರು ಕಲಾಪದಲ್ಲಿ ಮಾತನಾಡುತ್ತಿದ್ದಾಗ ದಿನೇಶ್ ಗುಂಡುರಾವ್ ಮತ್ತು ಸಿದ್ದರಾಮಯ್ಯ ನಡುವೆ ಸ್ವಲ್ಪ ಚರ್ಚೆ ಆಯಿತು. ಇದೆಲ್ಲ ನೋಡುತ್ತಿದ್ದರೆ ಮುಗಿಯುವ ಹಂತಕ್ಕೆ ಬರುವುದಿಲ್ಲ. ನಾಳೆಗೆ ಕಲಾಪವನ್ನು ಮುಂದೂಡುವಂತೆ ಸ್ಪೀಕರ್ ಅವರನ್ನು ಕೇಳಿ ಎಂದು ಸಿದ್ದರಾಮಯ್ಯರನ್ನು ದಿನೇಶ್ ಗುಂಡುರಾವ್ ಅವರು ಕೇಳಿದ್ದಾರೆ. ಅವರ ಮಾತಿಗೆ ಸಿದ್ದರಾಮಯ್ಯ ಇದನ್ನೆಲ್ಲಾ ನೋಡಿ ಸಾಕಾಗಿದೆ.ನಾನೇ ರಾಜಿನಾಮೆ ಕೊಟ್ಟು ಬಿಡುತ್ತೇನೆ ಎಂದು ಹೇಳಿದ್ದಾರೆ ಎಂಬ ವರದಿ ಎಲ್ಲೆಡೆ ಹರಿದಾಡುತ್ತಿದೆ. ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡ್ತಾರಾ? ಅಥವಾ ಸಿಎಲ್ಪಿ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರಾ ಎನ್ನುವು ತಿಳಿದು ಬಂದಿಲ್ಲ.