ತಮ್ಮ ತಂಟೆಗೆ ಬಂದರೆ ಕಾಂಗ್ರೆಸ್ ನಾಯಕರ ಮುಖವಾಡವನ್ನು ಮತ್ತು ಬಂಡವಾಳವಾದವನ್ನು ಒಂದೊಂದಾಗಿ ಬಯಲು ಮಾಡುತ್ತೇನೆ ಎಂದು ಹೊಸಕೋಟೆಯ ಮಾಜಿ ಶಾಸಕ ಎಂಟಿಬಿ ನಾಗರಾಜ್ ಅವರು ಓಪನ್ ಆಗಿ ಹೇಳಿಕೆ ನೀಡಿದ್ದಾರೆ. ಹೀಗೆ ಹೇಳಿದ ಎಂಟಿಬಿ ನಾಗರಾಜ್ ಅವರು ಕಾಂಗ್ರೆಸ್ನ ಮುಖಂಡರಾದ ಸಿದ್ದರಾಮಯ್ಯನವರ ಪುತ್ರ ರಾಕೇಶ್ ಅವರ ಸಾವಿನ ವಿಚಾರದ ಬಗ್ಗೆ ಮಾತನಾಡಿದ್ದಾರೆ.
ಸಿದ್ದರಾಮಯ್ಯನವರ ಪುತ್ರ ರಾಕೇಶ್ ಸಾವನ್ನಪ್ಪಲು ಕಾರಣ ಬೇರೆ ಯಾರೂ ಅಲ್ಲ ಕಾಂಗ್ರೆಸ್ ಪಕ್ಷದ ಶಾಸಕ ಭೈರತಿ ಸುರೇಶ್ ಎಂದು ಅವರು ನೇರವಾಗಿ ಆರೋಪ ಮಾಡಿದ್ದಾರೆ. ರಾಕೇಶ್ ನಿಗೆ ಪ್ರತಿನಿತ್ಯ ಕುಡಿಸಿ ಕುಡಿಸಿ ಆತನ ಪ್ರಾಣ ಹೋಗುವ ಹಾಗೆ ಶಾಸಕ ಭೈರತಿ ಸುರೇಶ್ ಅವರು ಮಾಡಿದರು ಇದರಿಂದಲೇ ಸಿದ್ದರಾಮಯ್ಯನವರ ಮಗ ರಾಕೇಶ್ ನಿಧನ ಹೊಂದಿದರು ಎಂದು ಎಂಟಿಬಿ ನಾಗರಾಜ್ ಅವರು ಹೊಸ ಬಾಂಬ್ ಸಿಡಿಸಿದ್ದಾರೆ.