ಉಪಚುನಾವಣೆಯ ಪ್ರಚಾರದ ವೇಳೆ ಒಬ್ಬರನ್ನೊಬ್ಬರು ಮಾತಿನ ಸಮರಮಾಡಿಕೊಳ್ಳುವುದು ಹೊಸದೇನಲ್ಲ ಇದೀಗ ಈಶ್ವರಪ್ಪ ಅವರು ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿ ಆಗುತ್ತೇನೆ ಎನ್ನುವುದು ಹುಚ್ಚುತನದ ಪರಮಾವಧಿ. ಸಿದ್ದರಾಮಯ್ಯ ಓರ್ವ ಹುಚ್ಚ ಎಂದು ಹೇಳಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಎರಡು ಕ್ಷೇತ್ರದಲ್ಲು ಗೆಲ್ಲಲು ಆಗಲ್ಲಾ ಅಂತಿದ್ರು, ಜೆಡಿಎಸ್ ಹಾಗೂ ಕಾಂಗ್ರೆಸ್ ಒಂದೊಂದು ಸ್ಥಾನ ಪಡೆದುಕೊಂಡವು. ರಾಜ್ಯದ ಜನ ಎರಡೂ ಪಕ್ಷಕ್ಕೆ ಸರಿಯಾಗಿ ಬುದ್ದಿ ಕಲಿಸಿದ್ದರು. ಈ ಉಪ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಬರಬಾದೆಂದು ದೇವೇಗೌಡ್ರು, ಸಿದ್ದರಾಮಯ್ಯ ಮಾತನಾಡುತ್ತಿದ್ದಾರೆ. ಯಾವುದೇ ಪಕ್ಷಕ್ಕೆ ಬಹುಮತ ಬರಬಾರದೆಂದು ದೇವೇಗೌಡ್ರು ಕನಸು ಕಾಣ್ತಾ ಇದ್ದಾರೆ. ಅವರು ಬಿಜೆಪಿ ಮತ್ತು ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಮುಂದಾಗುತ್ತಿದ್ದಾರೆ ಎಂದರು.