ಸಿದ್ದರಾಮಯ್ಯ ಗೆ ಶಾಸಕ ಬೈರತಿ ಸುರೇಶ್ ಗಿಫ್ಟ್ ಕೊಟ್ಟ ಈ ಬೆಂಜ಼್ ಕಾರಿನ ಬೆಲೆ ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ..!!
ಕಳೆದ ಮೂನಾಲ್ಕು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ಸಂಚಲನ ಉಂಟಾಗಿದೆ.. ಅತ್ತಕಡೆ ಬಿಜೆಪಿಯವರ ರೆಸಾರ್ಟ್ ರಾಜಕೀಯ ಅಂತ್ಯವಾಗುತ್ತಿದ್ದ ಹಾಗೆ ಇತ್ತಕಡೆ ಕಾಂಗ್ರೆಸ್ ಶಾಸಕರೆಲ್ಲ ಈಗಲ್ಟನ್ ರೆಸಾರ್ಟ್ ಸೇರಿಕೊಂಡಿದ್ದಾರೆ.. ಪಕ್ಷ ಕೆಡವಲು ಹಾಗೆ ಪಕ್ಷ ಉಳಿಸಲು ರಾಜ್ಯ ರಾಜಕಾರಣದಲ್ಲಿ ಸವಾಲು ನಡೆಯುತ್ತಿದೆ.. ಸದ್ಯ ಈ ಎಲ್ಲ ಸುದ್ದಿಗಳ ನಡುವೆ ಮಾಜಿ ಸಿಎಂ ಹಾಗೆ ಹೆಬ್ಬಾಳದ ಶಾಸಕ ಬೈರತಿ ಸುರೇಶ್ ಬೇರೆ ವಿಚಾರಕ್ಕೆ ಸುದ್ದಿಯಾಗಿದ್ದಾರೆ…
ಹೌದು, ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಬೈರತಿ ಸುರೇಶ್ ಕಪ್ಪು ಬೆಂಜ಼್ ಕಾರೊಂದನ್ನ ಗಿಫ್ಟ್ ಆಗಿ ನೀಡಿದ್ದಾರೆ.. ಶಾಸಕ ಬೈರತಿ ಸುರೇಶ್ ಅವರ ಪತ್ನಿ ಪದ್ಮಾವತಿ ಹೆಸರಿನಲ್ಲಿ ನೊಂದಣಿಯಾಗಿರುವ ಈ ಕಾರ್ ನ ಬೆಲೆ ಬರೋಬ್ಬರಿ ಒಂದುವರೆ ಕೋಟಿ ರೂಪಾಯಿಗಳು..ಸದ್ಯ ಈ ವಿಚಾರ ರಾಜಕೀಯ ವಲಯದಲ್ಲಿ ದೊಡ್ಡ ಸುದ್ದಿಯಾಗಿದ್ದು, ಸಿದ್ದರಾಮಯ್ಯನವರ ವಾಚ್ ನ ಬಳಿಕ ಬೆಲೆ ಬಾಳು ಈ ಕಾರ್ ಕೂಡ ಸುದ್ದಿಯ ಕೇಂದ್ರವಾಗಿದೆ..