ಸಿದ್ದರಾಮಯ್ಯ ತಲೆಗೆ ಏನಾಗಿದೆ : ಸಿ.ಟಿ.ರವಿ

Date:

ಭಾರತ ಕೋವಿಡ್‌ ವಿರುದ್ಧ ಹೋರಾಟ ನಡೆಸುತ್ತಿದ್ದರೆ ಪ್ರತಿಪಕ್ಷಗಳು ಬಿಜೆಪಿ ವಿರುದ್ಧ ಹೋರಾಟಕ್ಕೆ ನಿಂತಿವೆ. ರಾಜಕಾರಣ ಮಾಡುವ ಸಂದರ್ಭ ಇದಲ್ಲ. ಎಲ್ಲರೂ ಒಟ್ಟಾಗಿ ರೋಗವನ್ನು ಎದುರಿಸುವ ಸಂದರ್ಭ ಇದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ‍್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸರಕಾರ ಕೈಚೆಲ್ಲಿ ಕೂತಿದ್ದರೆ ಮೊದಲ ಅಲೆಯಲ್ಲಿ ಶೇ.99 ಸೋಂಕು ನಿವಾರಣೆ ಮಾಡಲು ಸಾಧ್ಯವಿತ್ತೇ ಎಂದು ಪ್ರತಿಪಕ್ಷಗಳ ಟೀಕೆಗೆ ತಿರುಗೇಟು ನೀಡಿದರು.

ಕೋವಿಡ್‌ ಆರಂಭವಾದಾಗ ದೇಶದಲ್ಲಿ ಒಂದೇ ಒಂದು ಕೋವಿಡ್‌ ಲ್ಯಾಬ್‌ ಇತ್ತು. ಈಗ 2,470ಕ್ಕೂ ಹೆಚ್ಚು ಲ್ಯಾಬ್‌ಗಳಿವೆ. ಜಿಲ್ಲಾಸ್ಪತ್ರೆಯಲ್ಲಿ ಶಾಶ್ವತ ಆಕ್ಸಿಜನ್‌ ಸೆಂಟರ್‌ ಮಾಡಲಾಗಿದೆ. ಮೊದಲ ಅಲೆಯನ್ನು ಒಂದೂ ಪಿಪಿಇ ಕಿಟ್‌, ಮಾಸ್ಕ್‌ ಇಲ್ಲದೆ ಎದುರಿಸಿದ್ದೇವೆ. ಭಾರತ ಕೋವಿಡ್‌ ವಿರುದ್ಧ ಹೋರಾಡುತ್ತಿದೆ. ಪ್ರತಿಪಕ್ಷಗಳು ಬಿಜೆಪಿ ವಿರುದ್ಧ ಹೋರಾಟ ಮಾಡಬಾರದು. ಕೋವಿಡ್‌ ವಿರುದ್ಧ ಹೋರಾಟಕ್ಕೆ ಸಹಕರಿಸಬೇಕು ಎಂದರು.

ದೇಶದಲ್ಲಿ ಕೋವಿಡ್‌ ವ್ಯಾಕ್ಸಿನ್‌ ಕಂಡು ಹಿಡಿದರೆ ಪ್ರತಿಪಕ್ಷಗಳು ಇದು ಬಿಜೆಪಿ ವ್ಯಾಕ್ಸಿನ್‌ ಎಂದು ಪ್ರಚಾರ ಮಾಡಿದವು. ದೇಶದ ವಿಜ್ಞಾನಿಗಳ ಬಗ್ಗೆ ಅಪನಂಬಿಕೆ ವ್ಯಕ್ತಪಡಿಸಿ ರಾಜಕಾರಣ ಮಾಡಿದ್ದು ಮರ್ಯಾದೆ ಇರುವವರು ಮಾಡುವ ಕೆಲಸವೇ ಎಂದು ಸಿ. ಟಿ. ರವಿ ಪ್ರಶ್ನಿಸಿದರು.

ರಾಜ್ಯಪಾಲರು ಸಭೆ ಕರೆದರೆ ಅವರಿಗೆ ಸಾಂವಿಧಾನಿಕ ಹಕ್ಕಿಲ್ಲ, ಹೇಗೆ ಸಭೆ ಕರೆದರು ಎಂದು ಪ್ರಶ್ನಿಸುತ್ತಾರೆ. ಪ್ರಧಾನಿ ಸಭೆ ಕರೆದರೆ ಅವರೇನು ಹೆಡ್‌ ಮಾಸ್ಟ್ರಾ ಎಂದು ಕೇಳುತ್ತಾರೆ. ಸಿದ್ದರಾಮಯ್ಯ ಅವರ ತಲೆಗೆ ಏನಾಗಿದೆ? ಎಂದು ಸಿಟಿ ರವಿ ಆಕ್ರೋಶ ವ್ಯಕ್ತಪಡಿಸಿದರು.

ಇದು ಕರ್ತವ್ಯ ನಿರ್ವಹಿಸುವ ಸಂದರ್ಭ. ಅಧಿಕಾರ ಚಲಾಯಿಸುವ ಸಂದರ್ಭ ಅಲ್ಲ. ಭಾರತ ಶಕ್ತಿ ಮೀರಿ ಕೆಲಸ ಮಾಡುತ್ತಿದೆ. ಬೇರೆ ದೇಶಗಳಿಂದ ಆಕ್ಸಿಜನ್‌ ತರಿಸಿಕೊಳ್ಳುತ್ತಿದೆ ಎಂದು ಸಿಟಿ ರವಿ ಹೇಳಿದರು.

ಏಪ್ರಿಲ್‌ ಮೊದಲ ವಾರದಲ್ಲೇ ಸೋಂಕಿನ ಪ್ರಮಾಣ 15 ಪಟ್ಟು ಹೆಚ್ಚಾಗಿದೆ. ರಾಜತಾಂತ್ರಿಕ ಅವಕಾಶ ಬಳಸಿಕೊಂಡು ಪ್ರಧಾನಿ ಬೇರೆ ಬೇರೆ ದೇಶಗಳ ಸಹಾಯ ಪಡೆದು ಎಲ್ಲ ವ್ಯವಸ್ಥೆ ಮಾಡುತ್ತಿದ್ದಾರೆ. ಇದು ಉತ್ತರ ಕೊಡುವ ಸಂದರ್ಭ ಅಲ್ಲ. ಕೊರೊನಾ ಬಳಿಕ ಇದೆಲ್ಲದಕ್ಕೂ ಉತ್ತರ ಕೊಡುತ್ತೇವೆ ಎಂದು ಹೇಳಿದರು.

Share post:

Subscribe

spot_imgspot_img

Popular

More like this
Related

ನ.16ಕ್ಕೆ ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಹೈಕೋರ್ಟ್ ಗ್ರೀನ್‌ ಸಿಗ್ನಲ್!‌ 

ನ.16ಕ್ಕೆ ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಹೈಕೋರ್ಟ್ ಗ್ರೀನ್‌ ಸಿಗ್ನಲ್!‌  ಕಲಬುರಗಿ: ಕಲಬುರಗಿ ಜಿಲ್ಲೆಯ...

ನಾನು ಯಾವ ಬಾವುಟ ಹಿಡಿಬೇಕು ಅಂತ ಮುಂದೆ ತೀರ್ಮಾನ ಮಾಡುತ್ತೇನೆ: ಕೆ.ಎನ್. ರಾಜಣ್ಣ

ನಾನು ಯಾವ ಬಾವುಟ ಹಿಡಿಬೇಕು ಅಂತ ಮುಂದೆ ತೀರ್ಮಾನ ಮಾಡುತ್ತೇನೆ: ಕೆ.ಎನ್....

Gold Price Today: ಮತ್ತೆ ಏರಿಕೆಯತ್ತ ಚಿನ್ನದ ಬೆಲೆ! ಹೀಗಿದೆ ಇಂದಿನ ಗೋಲ್ಡ್ ರೇಟ್

Gold Price Today: ಮತ್ತೆ ಏರಿಕೆಯತ್ತ ಚಿನ್ನದ ಬೆಲೆ! ಹೀಗಿದೆ ಇಂದಿನ...

ಮುಸ್ಲಿಮರ ಪರವಾದ ಮೃದುವಾದ ಧೋರಣೆ ಸರ್ಕಾರಕ್ಕೆ ಒಳ್ಳೆಯದಲ್ಲ: ಆರ್.ಅಶೋಕ್

ಮುಸ್ಲಿಮರ ಪರವಾದ ಮೃದುವಾದ ಧೋರಣೆ ಸರ್ಕಾರಕ್ಕೆ ಒಳ್ಳೆಯದಲ್ಲ: ಆರ್.ಅಶೋಕ್ ಬೆಂಗಳೂರು: ಮುಸ್ಲಿಮರ ಪರವಾದ...