ಸಿಬ್ಬಂದಿಗಳ ನಿರ್ಲಕ್ಷ್ಯ: ಲಿಫ್ಟ್ ಕಾಮಗಾರಿಗೆ ತೋಡಿದ್ದ ಗುಂಡಿಗೆ ಬಿದ್ದು 5 ವರ್ಷದ ಬಾಲಕ ದುರ್ಮರಣ!

Date:

ಸಿಬ್ಬಂದಿಗಳ ನಿರ್ಲಕ್ಷ್ಯ: ಲಿಫ್ಟ್ ಕಾಮಗಾರಿಗೆ ತೋಡಿದ್ದ ಗುಂಡಿಗೆ ಬಿದ್ದು 5 ವರ್ಷದ ಬಾಲಕ ದುರ್ಮರಣ!

ಬೆಂಗಳೂರು:- ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಲಿಫ್ಟ್ ಕಾಮಗಾರಿಗೆ ತೋಡಿದ್ದ ಗುಂಡಿಗೆ ಬಿದ್ದು 5 ವರ್ಷದ ಬಾಲಕ ದುರ್ಮರಣ ಹೊಂದಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ಜರುಗಿದೆ.

ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕನ್ನಮಂಗಲದಲ್ಲಿ ಅವಘಡ ಸಂಭವಿಸಿದ್ದು, ಮೃತ ಬಾಲಕನನ್ನು 5 ವರ್ಷದ ಸುಹಾಸ್ ಗೌಡ ಎಂದು ಗುರುತಿಸಲಾಗಿದೆ.

ಕನ್ನಮಂಗಲದ ಮಿಲ್ಕ್ ಡೈರಿ ಕಟ್ಟಡ ಕಾಮಗಾರಿ ನಡೆಸಲಾಗುತ್ತಿತ್ತು. ಈ ಹಿನ್ನೆಲೆ ಕಟ್ಟಡದಲ್ಲಿ ಲಿಫ್ಟ್‌ಗೆಂದು 5 ಅಡಿ ಗುಂಡಿ ತೋಡಲಾಗಿತ್ತು. ಭಾರೀ ಮಳೆಯ ಪರಿಣಾಮ ಗುಂಡಿಯಲ್ಲಿ ನೀರು ತುಂಬಿಕೊಂಡಿದ್ದರೂ ಸಿಬ್ಬಂದಿ ಯಾವುದೇ ಮುನ್ನೆಚ್ಚರಿಕೆ ವಹಿಸಿರಲಿಲ್ಲ.

ಸುಹಾಸ್ ಮನೆ ಮುಂಭಾಗ ಆಟವಾಡುವ ವೇಳೆ ಆಯತಪ್ಪಿ ಗುಂಡಿಯಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ. ಪ್ರಕರಣದ ಕುರಿತು ಮಿಲ್ಕ್ ಡೈರಿ ಅಧ್ಯಕ್ಷನ ಮೇಲೆ ಎಫ್‌ಐಆರ್ ದಾಖಲಾಗಿದೆ.

Share post:

Subscribe

spot_imgspot_img

Popular

More like this
Related

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿ

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿಬೆಂಗಳೂರು: ನಗರದ...

ನಟಿ ಕಾರುಣ್ಯ ರಾಮ್ ಗೆ ಶುರುವಾಯ್ತು ಸಾಲಗಾರರ ಕಾಟ: ತಂಗಿ ವಿರುದ್ಧ ಸಿಸಿಬಿಗೆ ದೂರು

ನಟಿ ಕಾರುಣ್ಯ ರಾಮ್ ಗೆ ಶುರುವಾಯ್ತು ಸಾಲಗಾರರ ಕಾಟ: ತಂಗಿ ವಿರುದ್ಧ...

ಇಂದು ಮಕರ ಸಂಕ್ರಾಂತಿ ಸಂಭ್ರಮ: ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ, ವರ್ಷವಿಡೀ ಕಷ್ಟ ತಪ್ಪಿದ್ದಲ್ಲ!

ಇಂದು ಮಕರ ಸಂಕ್ರಾಂತಿ ಸಂಭ್ರಮ: ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ, ವರ್ಷವಿಡೀ...

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..?

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..? ಬೆಂಗಳೂರು:...