ಸಿಹಿಸುದ್ದಿ: ಮೈಸೂರು-ಬೆಂಗಳೂರು ರೈಲು ಪುನಾರಂಭ

0
37

ಬೆಂಗಳೂರು, ಜೂನ್ 18; ಬೆಂಗಳೂರು-ಮೈಸೂರು ನಡುವಿನ ಮೆಮು ಎಕ್ಸ್‌ಪ್ರೆಸ್ ರೈಲು ಸೇರಿದಂತೆ ಹಲವು ರೈಲುಗಳ ಸಂಚಾರವನ್ನು ನೈಋತ್ಯ ರೈಲ್ವೆ ಮೈಸೂರು ವಿಭಾಗ ಪುನರಾರಂಭಿಸಿದೆ. ತುಮಕೂರು-ಯಶವಂತಪುರ ನಡುವೆ ಮತ್ತೊಂದು ಡೆಮು ರೈಲು ಸಂಚಾರ ಆರಂಭವಾಗಿದೆ.

ಬೆಂಗಳೂರು-ಮೈಸೂರು ನಡುವೆ ರಾಜ್ಯರಾಣಿ ಎಕ್ಸ್‌ಪ್ರೆಸ್ (06567/ 06568), ಚಾಮುಂಡಿ ಎಕ್ಸ್‌ಪ್ರೆಸ್ (06569/ 06570) ಮತ್ತು ಟಿಪ್ಪು ಎಕ್ಸ್‌ಪ್ರೆಸ್ (06201/ 06202) ರೈಲುಗಳು ಪ್ರತಿದಿನ ಸಂಚಾರ ಆರಂಭಿಸಿವೆ.

 

ಜೂನ್ 20ರಿಂದ ಮೈಸೂರು-ಬಾಗಲಕೋಟೆ ನಡುವಿನ ಬಸವ ಎಕ್ಸ್‌ಪ್ರೆಸ್ (07307/ 07308) ಸಂಚಾರ ನಡೆಸಲಿದೆ. ಜೂನ್ 16ರಿಂದ ಮೈಸೂರು-ಕೊಚ್ಚುವೇಳಿ (06316/ 06315) ಸಂಚಾರ ಪ್ರಾರಂಭವಾಗಿದೆ.

ಮತ್ತೊಂದು ಡೆಮು ರೈಲು; ಬೆಂಗಳೂರಿನ ಯಶವಂತಪುರ ಮತ್ತು ತುಮಕೂರು ನಡುವೆ ಮತ್ತೊಂದುದ ಡೆಮು ರೈಲು ಸೇವೆ ಆರಂಭವಾಗಿದೆ. ಯಶವಂತಪುರದಿಂದ ಬೆಳಗ್ಗೆ 5.30ಕ್ಕೆ ತುಮಕೂರಿನಿಂದ 8ಕ್ಕೆ ಹೊರಡಲಿದೆ. ಯಶವಂತಪುರದಿಂದ ಬೆಳಗ್ಗೆ 9.30ಕ್ಕೆ. ತುಮಕೂರಿನಿಂದ ಸಂಜೆ 4.20ಕ್ಕೆ ಹೊರಡಲಿದೆ. ಯಶವಂತಪುರದಿಂದ ಸಂಜೆ 6ಕ್ಕೆ ಮತ್ತು ತುಮಕೂರಿನಿಂದ ರಾತ್ರಿ 7.40ಕ್ಕೆ ಹೊರಡಲಿದೆ.

LEAVE A REPLY

Please enter your comment!
Please enter your name here