ಸುಜುಕಿ ಜಿಕ್ಸರ್ ವಿಂಟರ್ ರೇಡ್ ಹೇಗಿತ್ತು ಗೊತ್ತಾ? ಮಸ್ತ್ ಮಗಾ..!
ಬೈಕ್ ಸವಾರಿ ಮಜಾನೇ ಬೇರೆ..ಅದೂ ಚಳೀಲಿ ಸಖತ್ತಾಗಿ ಒಂದು ಟ್ರಿಪ್ ಹೊಡೆದ್ರೆ ಸ್ವರ್ಗದ ಸಂಚಾರ! ಇಂದು ಸುಜಿಕ್ ಜಿಕ್ಸರ್ ನಿಂದ ಅಂತಹ್ದೊಂದು ಮಸ್ತ್ ರೇಡ್ ನಡೀತು.
ಹೌದು, ಸುಜಿಕ್ ಜಿಕ್ಸರ್ ನವರು ಬೆಂಗಳೂರಿನ ಬಳ್ಳಾರಿ ರಸ್ತೆಯ , ಗಂಗಾನಗರದ ಮೇಘವತಿ ಸುಜಿಕಿ ಶೂ ರೂಮ್‌ನಿಂದ ಕೆಂಪೇಗೌಡ ಏರ್ಪೋರ್ಟ್ ರಸ್ತೆಯಲ್ಲಿನ Club cabana Amusement park ವರೆಗೆ ವಿಂಟರ್ ರೇಡ್ ಹಮ್ಮಿಕೊಂಡಿತ್ತು. ಬೆಳಗ್ಗೆ 7.45ಕ್ಕೆ ರೇಡ್ ಗೆ ಚಾಲನೆ ನೀಡಲಾಯಿತು. 22 ಕಿ.ಮೀ ದೂರದ ರೇಡ್ ಸುಮಾರು 9.30 ಹೊತ್ತಿಗೆ ರೆಸಾರ್ಟ್ ತಲುಪಿತು. ಅಲ್ಲಿ ಸಣ್ಣದಾದ ಕಾರ್ಯಕ್ರಮ , ಬ್ರೇಕ್ ಫಾಸ್ಟ್ ವ್ಯವಸ್ಥೆ ಇತ್ತು.
ಮೇಘಾವತ್ ಸುಜುಕಿ ಡೈರೆಕ್ಟರ್ ಕಿರಣ್, ದಿ ನ್ಯೂ ಇಂಡಿಯನ್ ಟೈಮ್ಸ್ ಸಿಇಒ ರಘುಭಟ್ ಮತ್ತಿತರರಿದ್ದರು.