ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಒಂದು ಟೈಮ್ನಲ್ಲಿ ಆತ್ಮೀಯ ಸ್ನೇಹಿತರು. ಈಗ ಮೊದಲಿನಂತಿಲ್ಲ ಅವರ ಸ್ನೇಹ ಅನ್ನೋದು ಜಗಜ್ಜಾಹಿರ. ಕುರುಕ್ಷೇತ್ರ ಪ್ರೆಸ್ ಮೀಟ್ನಲ್ಲಿ ಸುದೀಪ್ ಬಗ್ಗೆ ಕೇಳಿದ್ದಕ್ಕೆ ದರ್ಶನ್ ಕೆಂಡಾಮಂಡಲರಾಗಿದ್ದರು. ನಂತರ ಪೈಲ್ವಾನ್ ಆಡಿಯೋ ಲಾಂಚ್ ನಲ್ಲಿ ಸುದೀಪ್ ದಚ್ಚುಗೆ ಟಕ್ಕರ್ ಕೊಡುವಂಥಾ ಮಾತಾಡಿದ್ದರು.. ಅದರ ಬೆನ್ನಲ್ಲೇ ದರ್ಶನ್ ಅವರನ್ನು ಸುದೀಪ್ ಟ್ವಿಟರ್ನಲ್ಲಿ ಅನ್ ಫಾಲೋ ಮಾಡಿದ್ದರು. ಇವರಿಬ್ಬರು ಮತ್ತೆ ಒಂದಾಗಬೇಕು ಎನ್ನುವುದು ಎಲ್ಲರ ಆಸೆ.. ಆದರೆ ಇಬ್ಬರ ಹಠ ಹೆಚ್ಚಿದೆ… ಅವರು ಸದ್ಯ ಒಂದಾಗುವ ಲಕ್ಷಣ ಕಾಣುತ್ತಲೇ ಇಲ್ಲ..!
ಸುದೀಪ್ ಮತ್ತು ದರ್ಶನ್ಗೆ ಕಿವಿ ಹಿಂಡುವಂತೆ ನವರಸ ನಾಯಕ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ..! ದರ್ಶನ್ ಮತ್ತು ಕುರುಕ್ಷೇತ್ರ ಉದ್ದೇಶಿಸಿ ಮಾಡಿದ ಟ್ವೀಟ್ನಲ್ಲಿ ಜಗ್ಗೇಶ್, ”ಹೃದಯ ತುಂಬಿ ಬಂತು..ಕನ್ನಡಕ್ಕಾಗಿ ಎತ್ತಿದ ಗದೆ ರಾಯರ ದಯೆಯಿಂದ ನಿನ್ನ ಭುಜದಮೇಲೆ ಶಾಶ್ವತವಾಗಿ ಉಳಿಯಲಿ.. ಸಾಧ್ಯವಾದಷ್ಟು ಕನ್ನಡದ ಹಳೆ ಕಲಾವಿದರಿಗೆ ನಿನ್ನ ಚಿತ್ರದಲ್ಲಿ ಅವಕಾಶ ಕೊಟ್ಟು ಅವರ ಉದರ ತುಂಬಿಸುವ ಕಾರ್ಯಮಾಡು ಎಂದು ವಿನಂತಿ..ಅಮ್ಮನಿಗೆ ನನ್ನ ನಮಸ್ಕಾರ ತಿಳಿಸು..love you..God bless.. ಎಂದಿದ್ದಾರೆ.
ಸುದೀಪ್ ಮತ್ತು ಪೈಲ್ವಾನ್ ಸಿನಿಮಾ ಉದ್ದೇಶಿಸಿ ಜಗ್ಗೇಶ್, ಕಾಯುತ್ತಿದೆ ಕರುನಾಡು ಪೈಲ್ವಾನಗಾಗಿ. ನಿನ್ನ ಯತ್ನ ರಂಜಿಸಲಿ ಕನ್ನಡಿಗರ ಮನವ. ನಿಮ್ಮಗಳ ತಲೆಮಾರಿನಲ್ಲಿ ಶ್ರೀಮಂತವಾಗಲಿ ಕನ್ನಡ ಚಿತ್ರರಂಗ. ಜೊತೆಗೆ ಹಳೆತಲೆಮಾರಿನ ಹಿರಿಯ ಕಲಾವಿದರಿಗು ನಿಮ್ಮ ಜೊತೆ ಹೆಜ್ಜೆಹಾಕಿಸಿ. ಅವರ ಉದರಕ್ಕೆ ಆಸರೆಯಾಗಿ ಎಂದು ವಿನಂತಿ. ಕೂಡಿಬಾಳಿದರೆ ಸ್ವರ್ಗ – ಎಂದು ಟ್ವೀಟ್ ಮಾಡಿದ್ದಾರೆ.
ಈ ಎರಡು ಟ್ವೀಟ್ಗಳಲ್ಲಿ ಇಬ್ಬರಿಗೂ ತಮ್ಮ ಸಿನಿಮಾಗಳಲ್ಲಿ ಹಳೆಯ ಕಲಾವಿದರಿಗೆ ಅವಕಾಶ ಕೊಡಿ ಎಂದು ಹೇಳಿರುವುದು ಮಾತ್ರವಲ್ಲದೆ ಸೂಕ್ಷವಾಗಿ ಕಿವಿ ಹಿಂಡಿರುವುದು ಗೊತ್ತಾಗುತ್ತದೆ. ಸುದೀಪ್ಗೆ ಹೇಳಿದ ಟ್ವೀಟ್ನಲ್ಲಿ ಕೂಡಿ ಬಾಳಿದರೆ ಸ್ವರ್ಗ ಎಂಬ ಮಾತಾಡಿದ್ದು ಹಳೆಯ ಮತ್ತು ಹೊಸ ಕಲಾವಿದರು ಒಟ್ಟಾಗಿ ಸಾಗಬೇಕು ಎನ್ನುವ ಸಂದೇಶದ್ದೇ ಆದರೂ ನೀವಿಬ್ಬರೂ ಒಂದಾಗ್ರಪ್ಪಾ ಎನ್ನುವಂತಿದೆ..!
https://t.co/fDPu15dZmi@KicchaSudeep
ಕಾಯುತ್ತಿದೆ ಕರುನಾಡು ಪೈಲ್ವಾನ ಗಾಗಿ.
ನಿನ್ನ ಯತ್ನ ರಂಜಿಸಲಿ ಕನ್ನಡಿಗರ ಮನವ.
ನಿಮ್ಮಗಳ ತಲೆಮಾರಿನಲ್ಲಿ ಶ್ರೀಮಂತವಾಗಲಿ ಕನ್ನಡ ಚಿತ್ರರಂಗ.
ಜೊತೆಗೆ ಹಳೆತಲೆಮಾರಿನ ಹಿರಿಯ ಕಲಾವಿದರಿಗು ನಿಮ್ಮ ಜೊತೆ ಹೆಜ್ಜೆಹಾಕಿಸಿ
ಅವರ ಉದರಕ್ಕೆ ಆಸರೆಯಾಗಿ ಎಂದು ವಿನಂತಿ..ಕೂಡಿಬಾಳಿದರೆ ಸ್ವರ್ಗ ಕಿವಿಮಾತು!— ನವರಸನಾಯಕ ಜಗ್ಗೇಶ್ (@Jaggesh2) August 26, 2019