ಸುದೀಪ್ ಅಭಿಮಾನಿಗಳಿಗೆ ಕಾದಿದೆ ಮತ್ತೊಂದು ಬಿಗ್ ಸರ್​ಪ್ರೈಸ್…!

Date:

ಅಭಿನಯ ಚಕವ್ರವರ್ತಿ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಈ ವರ್ಷ ಹಬ್ಬವೇ ಬಿಡಿ..! ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲೆಯಾಳಂ ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ..! ಸೆಪ್ಟೆಂಬರ್ 12ಕ್ಕೆ ಪೈಲ್ವಾನ್ ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ.
ಪೈಲ್ವಾನ್ ಸಿನಿಮಾವೂ ಸೆಟ್ಟೇರಿದಲ್ಲಿಂದಲೂ ಸದ್ದು ಮಾಡುತ್ತಿದೆ. ಹೆಬ್ಬುಲಿ ಡೈರೆಕ್ಟರ್ ಕೃಷ್ಣ ಮತ್ತು ಸ್ಯಾಂಡಲ್​ವುಡ್ ಬಾದ್​ ಷಾ ಸುದೀಪ್ ಅಭಿನಯದ ಈ ಸಿನಿಮಾದ ಪೋಸ್ಟರ್, ಟೀಸರ್ ಗಳು ಸೌಂಡು ಮಾಡಿದ್ದು ಮುಗಿದ ಅಧ್ಯಾಯ.. ಈಗ ಟ್ರೈಲರ್ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿ ಬಿಟ್ಟಿದೆ. ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚಿದೆ…! ಪೈಲ್ವಾನ್ ಬಳಿಕ ಕೋಟಿಗೊಬ್ಬ -3 ದರ್ಬಾರು.. ಅದಲ್ಲದೆ ಅಕ್ಟೋಬರ್ 2ಕ್ಕೆ ಸೈರಾ ನರಸಿಂಹ ರೆಡ್ಡಿ ಸಿನಿಮಾ ರಿಲೀಸ್ ಆಗುತ್ತಿದೆ. ಮೆಗಾಸ್ಟಾರ್ ಚಿರಂಜೀವಿ ನಟನೆಯ ಈ ಸಿನಿಮಾದಲ್ಲಿ ಸುದೀಪ್ ಕೂಡ ನಟಿಸಿದ್ದಾರೆ. ಕನ್ನಡದಲ್ಲೂ ಈ ಸಿನಿಮಾ ರಿಲೀಸ್ ಆಗುತ್ತಿದೆ..! ಹೀಗೆ ಕಿಚ್ಚನ ಅಭಿಮಾನಿಗಳು ಸಾಲು ಸಾಲು ಹಬ್ಬದೂಟ ಮಾಡಲು ರೆಡಿಯಾಗಿದ್ದಾರೆ.


ಈ ನಡುವೆ ಸುದೀಪ್ ಅಭಿಮಾನಿಗಳಿಗೆ ಮತ್ತೊಂದು ಬಿಗ್ ಸರ್​​ಪ್ರೈಸ್ ಕಾದಿದೆ. ಸೆಪ್ಟೆಂಬರ್ 2ರಂದು ಸುದೀಪ್ ಬರ್ತ್​ಡೇ..ಸುದೀಪ್ ಹುಟ್ಟುಹಬ್ಬದ ಪ್ರಯುಕ್ತ ಮತ್ತೊಂದು ಟ್ರೈಲರ್ ರಿಲೀಸ್ ಆಗುತ್ತಿದೆ..! ಈಗಾಗಲೇ ಬಿಡುಗಡೆ ಆಗಿರುವ ಟ್ರೈಲರೇ ಈ ಪಾಟಿ ಸದ್ದು ಮಾಡುತ್ತಿದ್ದು, ಇನ್ನು ಕಿಚ್ಚನ ಹುಟ್ಟುಹಬಕ್ಕೆ ಬರುತ್ತಿರುವ ಟ್ರೈಲರ್ ಯಾವ ರೇಂಜಿಗಿರಬೇಡ..? ಸೆಪ್ಟೆಂಬರ್ ಎರಡಕ್ಕೆ ಸುದೀಪ್ ಹುಟ್ಟುಹಬ್ಬಕ್ಕೆ ಬರ್ತಿರೋ ಗಿಫ್ಟ್​ಗೆ ಅಭಿಮಾನಿಗಳು ಕಾಯ್ತಿದ್ದಾರೆ.
ಒಟ್ಟಿನಲ್ಲಿ ಕನ್ನಡದಲ್ಲಿ ಒಳ್ಳೊಳ್ಳೆಯ ಸಿನಿಮಾಗಳು ಬರುತ್ತಿದ್ದು, ಸುದೀಪ್ ಅವರಂತೂ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ..! ಸುದೀಪ್ ಬಾಲಿವುಡ್​, ಟಾಲಿವುಡ್ ಅಷ್ಟೇ ಅಲ್ಲದೆ ಹಾಲಿವುಡ್​ನಲ್ಲೂ ಸದ್ದು ಮಾಡುತ್ತಿರುವುದು ಅಭಿಮಾನಿಗಳು ಫುಲ್ ಖುಷಿಯಲ್ಲಿದ್ದಾರೆ.

Share post:

Subscribe

spot_imgspot_img

Popular

More like this
Related

ಮಂಡ್ಯದಲ್ಲಿ ಮನಕಲಕುವ ಘಟನೆ: ಸಾವಿನಲ್ಲೂ ಒಂದಾದ ದಂಪತಿ

ಮಂಡ್ಯದಲ್ಲಿ ಮನಕಲಕುವ ಘಟನೆ: ಸಾವಿನಲ್ಲೂ ಒಂದಾದ ದಂಪತಿ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ...

ಐಷಾರಾಮಿ ಜೀವನಕ್ಕಾಗಿ ಕಳ್ಳತನ ಮಾಡ್ತಿದ್ದ ಇಬ್ಬರು ಅರೆಸ್ಟ್!

ಐಷಾರಾಮಿ ಜೀವನಕ್ಕಾಗಿ ಕಳ್ಳತನ ಮಾಡ್ತಿದ್ದ ಇಬ್ಬರು ಅರೆಸ್ಟ್!ಬೆಂಗಳೂರು: ಐಷಾರಾಮಿ ಜೀವನಕ್ಕಾಗಿ ಕಳ್ಳತನ...

ಯಾವುದೇ ಸರ್ಕಾರ ಬಂದ್ರು ಪೊಲೀಸರು ಆತ್ಮವಿಶ್ವಾಸ, ಕರ್ತವ್ಯ ನಿಷ್ಠೆಯಲ್ಲಿ ರಾಜಿಯಾಗಬೇಡಿ: ಡಿ.ಕೆ. ಶಿವಕುಮಾರ್

ಯಾವುದೇ ಸರ್ಕಾರ ಬಂದ್ರು ಪೊಲೀಸರು ಆತ್ಮವಿಶ್ವಾಸ, ಕರ್ತವ್ಯ ನಿಷ್ಠೆಯಲ್ಲಿ ರಾಜಿಯಾಗಬೇಡಿ: ಡಿ.ಕೆ....

ಡ್ರಗ್ಸ್ ಮುಕ್ತ ಕರ್ನಾಟಕ ನನ್ನ ಗುರಿ. ಇದು ನಿಮ್ಮ ಗುರಿಯೂ ಆಗಲಿ: ಸಾಧಿಸಿ ತೋರಿಸಿ: ಸಿ.ಎಂ ಸಿದ್ದರಾಮಯ್ಯ ಕರೆ

ಡ್ರಗ್ಸ್ ಮುಕ್ತ ಕರ್ನಾಟಕ ನನ್ನ ಗುರಿ. ಇದು ನಿಮ್ಮ ಗುರಿಯೂ ಆಗಲಿ:...