ಸುದೀಪ್ ಗೆ ಬಿಗ್ ಬಾಸ್ ಸ್ಪರ್ಧಿಗಳ ಪ್ರೀತಿಯ ಪತ್ರ!

Date:

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಸುದೀಪ್‌ಗೆ ವಿಶ್ರಾಂತಿಯ ಅಗತ್ಯವಿರುವ ಕಾರಣ ಈ ವಾರಾಂತ್ಯದ ಸಂಚಿಕೆಯ ಚಿತ್ರೀಕರಣದಲ್ಲಿ ಪಾಲ್ಗೊಂಡಿಲ್ಲ. ‘ಬಿಗ್ ಬಾಸ್ ಕನ್ನಡ’ ಕಾರ್ಯಕ್ರಮದ ಇತಿಹಾಸದಲ್ಲಿ ಸಂಚಿಕೆಯ ಚಿತ್ರೀಕರಣಕ್ಕೆ ಸುದೀಪ್ ಮಿಸ್ ಆಗಿರುವುದು ಇದೇ ಮೊದಲು.

 

ಸುದೀಪ್ ಅನುಪಸ್ಥಿತಿಯಲ್ಲಿ ‘ಬಿಗ್ ಬಾಸ್’ ವೀಕೆಂಡ್ ಎಪಿಸೋಡ್ ಹೇಗೆ ಮೂಡಿಬರಬಹುದು ಎಂಬ ಕುತೂಹಲ ವೀಕ್ಷಕರಿಗೆ ಕಾಡುತ್ತಿತ್ತು. ಆ ಕುತೂಹಲಕ್ಕೆ ನಿನ್ನೆಯ ಸಂಚಿಕೆಯಲ್ಲಿ ಬ್ರೇಕ್ ಬಿದ್ದಿದೆ. ಸುದೀಪ್ ಗೈರಾದ ಕಾರಣ ನಿನ್ನೆಯ ಸಂಚಿಕೆಯಲ್ಲಿ ‘ರಿಯಾಲಿಟಿ’ಗೇ ‘ಬಿಗ್ ಬಾಸ್’ ಪ್ರಾಮುಖ್ಯತೆ ನೀಡಿದ್ದರು.

‘ಬಿಗ್ ಬಾಸ್ ಕನ್ನಡ’ ಕಾರ್ಯಕ್ರಮದಲ್ಲಿ ಭಾನುವಾರ ‘ಸೂಪರ್ ಸಂಡೇ ವಿತ್ ಸುದೀಪ್’ ಸಂಚಿಕೆಗೆ ಮೀಸಲಿರುತ್ತಿತ್ತು. ಆದರೆ, ಈ ಸಂಚಿಕೆಯ ಚಿತ್ರೀಕರಣಕ್ಕೆ ಸುದೀಪ್ ಗೈರಾಗಿರುವುದಿಂದ ಸ್ಪರ್ಧಿಗಳಿಗೆ ‘ಬಿಗ್ ಬಾಸ್’ ವಿಶೇಷ ಚಟುವಟಿಕೆ ನೀಡಿದ್ದಾರೆ.

‘ಬಿಗ್ ಬಾಸ್ ಕನ್ನಡ’ ಕಾರ್ಯಕ್ರಮದಲ್ಲಿ ಭಾನುವಾರ ‘ಸೂಪರ್ ಸಂಡೇ ವಿತ್ ಸುದೀಪ್’ ಸಂಚಿಕೆಗೆ ಮೀಸಲಿರುತ್ತಿತ್ತು. ಆದರೆ, ಈ ಸಂಚಿಕೆಯ ಚಿತ್ರೀಕರಣಕ್ಕೆ ಸುದೀಪ್ ಗೈರಾಗಿರುವುದಿಂದ ಸ್ಪರ್ಧಿಗಳಿಗೆ ‘ಬಿಗ್ ಬಾಸ್’ ವಿಶೇಷ ಚಟುವಟಿಕೆ ನೀಡಿದ್ದಾರೆ.

ಅನಾರೋಗ್ಯಕ್ಕೀಡಾಗಿರುವ ಸುದೀಪ್‌ಗೆ ಪ್ರೀತಿಯ ಪತ್ರ ಬರೆಯುವಂತೆ ಸ್ಪರ್ಧಿಗಳಿಗೆಲ್ಲಾ ‘ಬಿಗ್ ಬಾಸ್’ ತಿಳಿಸಿದ್ದಾರೆ. ಜೊತೆಗೆ ಸುದೀಪ್‌ಗಾಗಿ ಅಡುಗೆ ಮಾಡಿ ಸ್ಪರ್ಧಿಗಳು ಕಳುಹಿಸಿಕೊಟ್ಟಿದ್ದಾರೆ.

‘ಬಿಗ್ ಬಾಸ್’ ಸ್ಪರ್ಧಿಗಳು ಪ್ರೀತಿಯಿಂದ ಕಳುಹಿಸಿರುವ ಪತ್ರಗಳು ಹಾಗೂ ಅಡುಗೆಗಾಗಿ ಸುದೀಪ್ ಪತ್ನಿ ಪ್ರಿಯಾ ಧನ್ಯವಾದ ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಿಯಾ, ”ಪತ್ರಗಳು ಹಾಗೂ ರುಚಿಯಾದ ಆಹಾರ ಕಳುಹಿಸಿದ ಸ್ಪರ್ಧಿಗಳು ಹಾಗೂ ಕಲರ್ಸ್ ಕನ್ನಡಕ್ಕೆ ಧನ್ಯವಾದಗಳು. ಸುದೀಪ್ ಚೇತರಿಸಿಕೊಳ್ಳುತ್ತಿದ್ದಾರೆ. ಶೀಘ್ರದಲ್ಲಿಯೇ ಹಿಂದಿರುಗುತ್ತಾರೆ” ಎಂದಿದ್ದಾರೆ.

ಸುದೀಪ್ ಅನುಪಸ್ಥಿತಿಯಲ್ಲಿ ಈ ವಾರದ ಎಲಿಮಿನೇಷನ್ ಪ್ರಕ್ರಿಯೆ ನಡೆಯಲಿದ್ದು, ಅದಕ್ಕೆ ‘ಬಿಗ್ ಬಾಸ್’ ವಿಶೇಷ ಪ್ಲಾನ್ ಮಾಡಿದ್ದಾರೆ. ಒಂದೊಂದು ಚಟುವಟಿಕೆ ಮೂಲಕ ಒಬ್ಬೊರನ್ನು ‘ಬಿಗ್ ಬಾಸ್’ ಸೇಫ್ ಮಾಡಲಿದ್ದಾರೆ. ಕೊನೆಗೆ ಯಾವ ಸ್ಪರ್ಧಿಯ ಜರ್ನಿ ವಿಡಿಯೋ ಪ್ಲೇ ಆಗುತ್ತದೆಯೋ, ಆ ಸ್ಪರ್ಧಿ ಇಂದು ಎಲಿಮಿನೇಟ್ ಆಗಲಿದ್ದಾರೆ.

Share post:

Subscribe

spot_imgspot_img

Popular

More like this
Related

ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ

ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ...

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು ಮೈಸೂರು:ಸ್ನಾನದ ವೇಳೆ...

ತುಳಸಿ ಗಿಡದಲ್ಲಿನ ಈ ಬದಲಾವಣೆಗಳು ನೀಡುವ ಸೂಚನೆಗಳೇನು..?

ತುಳಸಿ ಗಿಡದಲ್ಲಿನ ಈ ಬದಲಾವಣೆಗಳು ನೀಡುವ ಸೂಚನೆಗಳೇನು..? ಮನೆಯ ಅಂಗಳದಲ್ಲಿ ಬೆಳೆದ ತುಳಸಿ...

ಮುಂಗಾರು ಬೆಳೆಗೆ ಈರುಳ್ಳಿ ಬೆಳೆ ಹಾನಿ; ಪಿಡಿಪಿಎಸ್‌ ಅಡಿ ಖರೀದಿಗೆ ಯತ್ನ: ಶಿವಾನಂದ ಪಾಟೀಲ್

ಮುಂಗಾರು ಬೆಳೆಗೆ ಈರುಳ್ಳಿ ಬೆಳೆ ಹಾನಿ; ಪಿಡಿಪಿಎಸ್‌ ಅಡಿ ಖರೀದಿಗೆ ಯತ್ನ:...