ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ನಿನ್ನೆ 46ನೇ ಜನ್ಮದಿನವನ್ನು ಸಂಭ್ರಮದಿಂದ ಅಭಿಮಾನಿಗಳ ಜೊತೆ ಆಚರಿಸಿಕೊಂಡರು. ಸುದೀಪ್ ಹುಟ್ಟುಹಬ್ಬ ಅದ್ಧೂರಿಯಾಗಿ ನೆರವೇರಿತು. ಸುದೀಪ್ ಹುಟ್ಟುಹಬ್ಬದ ದಿನವಾದ ನಿನ್ನೆ ಎಲ್ಲೆಡೆ ಒಂದು ಸುದ್ದಿ ಹರಿದಾಡುತ್ತಿದೆ.. ಅದು ದರ್ಶನ್ ಸಿಕ್ಕಿರುವ ಹೊಸ ಬಿರುದಿನ ಬಗ್ಗೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಸುದೀಪ್ ಅವರ ಹುಟ್ಟುಹಬ್ಬದ ದಿನ ಹೊಸದಾದ ಮತ್ತೊಂದು ಬಿರುದು ಬಂದಿದೆ. ಚಾಲೆಂಜಿಂಗ್ ಸ್ಟಾರ್, ಡಿ.ಬಾಸ್ ಎಂಬಿತ್ಯಾದಿ ಹೆಸರುಗಳನ್ನು, ಬಿರುದುಗಳನ್ನು ಹೊಂದಿರುವ ದರ್ಶನ್ ಮತ್ತೊಂದು ಬಿರುದಿಗೆ ಪಾತ್ರರಾಗಿದ್ದಾರೆ. ಡಿಎಫ್ಡಿಎಚ್ ಎಂಬ ಮಹಿಳಾ ಗುಂಪು ದರ್ಶನ್ ಅವರಿಗೆ ಪ್ರೀತಿಯಿಂದ ಹೊಸ ಬಿರುದು ನೀಡಿ ಗೌರವಿಸಿದೆ.
ದರ್ಶನ್ ಅಭಿನಯದ ಕುರುಕ್ಷೇತ್ರ ಸಿನಿಮಾ ಎಲ್ಲಾ ಕಡೆಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ತಾನು ಬಾಕ್ಸ್ ಆಫೀಸ್ ಸುಲ್ತಾನ ಎಂಬುದನ್ನು ದರ್ಶನ್ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ದರ್ಶನ್ ದುರ್ಯೋಧನನ ಅವತಾರದಲ್ಲಿ ಮಿಂಚಿರುವ ಕುರುಕ್ಷೇತ್ರದ ಕಲೆಕ್ಷನ್ ಈಗಾಗಲೇ 100 ಕೋಟಿ ದಾಟಿದೆ. ಈ ಸಂಭ್ರಮದಲ್ಲಿ ಡಿಎಚ್ಡಿಎಫ್ ಮಹಿಳಾ ಗ್ರೂಪ್ನವರು ದರ್ಶನ್ ಗೆ ಹೊಸ ಬಿರುದನ್ನು ನೀಡಿ ಸಲ್ಮಾನಿಸಿದ್ದಾರೆ.
ದರ್ಶನ್ ಅವರಿಗೆ ಶತಕೋಟಿ ಸರದಾರ ಎಂಬ ಬಿರುದನ್ನು ಆ ಗ್ರೂಪ್ ನೀಡಿದೆ. ದರ್ಶನ್ ಇನ್ನು ಮುಂದೆ ಚಾಲೆಂಜಿಂಗ್ ಸ್ಟಾರ್, ಚಕ್ರವರ್ತಿ, ಮಿಸ್ಟರ್ ಐರಾವತ ಮಾತ್ರವಲ್ಲ ಶತಕೋಟಿ ಸರ್ದಾರ..!
ಸುದೀಪ್ ಮತ್ತು ದರ್ಶನ್ ಒಂದು ಕಾಲದ ಆತ್ಮೀಯ ಗೆಳೆಯರು. ಆದರೆ ಇವರ ನಡುವೆ ಈಗ ಏನೇನೂ ಸರಿಯಿಲ್ಲ. ದರ್ಶನ್ ಅಂತೂ ಸುದೀಪ್ ಎಂದರೆ ನಿಗಿ ನಿಗಿ ಎನ್ನುತ್ತಾರೆ. ಇತ್ತೀಚಿನ ದರ್ಶನ್ ಅವರ ಮಾತಿನಿಂದ ಸುದೀಪ್ ದರ್ಶನ್ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡುತ್ತಿಲ್ಲ. ದರ್ಶನ್ ಮತ್ತು ಸುದೀಪ್ ಒಂದಾಗಬೇಕು. ಅವರು ಒಟ್ಟಿಗೆ ಸಿನಿಮಾ ಮಾಡಬೇಕು ಎನ್ನುವುದು ಅಸಂಖ್ಯ ಅಭಿಮಾನಿಗಳ ಆಸೆ.. ದಚ್ಚು-ಕಿಚ್ಚನ ಅಭಿಮಾನಿಗಳ ಆ ಆಸೆ, ಮಹಾ ಕನಸು ಎಂದು ನೆರವೇರುತ್ತದೋ?
ಸುದೀಪ್ ಹುಟ್ಟುಹಬ್ಬದಂದು ದರ್ಶನ್ಗೆ ಸಿಕ್ತು ಹೊಸ ಬಿರುದು..!
Date: