ಉಪ ಚುನಾವಣೆಯ ರಂಗು 15 ಕ್ಷೇತ್ರಗಳಲ್ಲಿ ಜೋರಾಗಿದೆ. ಈಗಾಗಲೇ ಎಲ್ಲಾ ಪಕ್ಷಗಳೂ ಪ್ರಚಾರ ಕಾರ್ಯ ಮುಂದುವರೆಸಿವೆ. ಕೆ.ಆರ್. ಪೇಟೆ ಉಪ ಚುನಾವಣಾ ಕಣದಲ್ಲಿ ಬಿಜೆಪಿಯಿಂದ ನಾರಾಯಣಗೌಡ ಸ್ಪರ್ಧೆ ಮಾಡುತ್ತಿದ್ದು, ಇತ್ತ ಕಾಂಗ್ರೆಸ್ ನಿಂದ ಕೆ.ಬಿ. ಚಂದ್ರಶೇಖರ್ ಸ್ಪರ್ಧೆ ಮಾಡುತ್ತಿದ್ದಾರೆ.

ಈಗಾಗಲೇ ಈ ಇಬ್ಬರು ಸ್ಪರ್ಧಿಗಳು ಸುಮಲತಾ ಬೆಂಬಲ ಕೇಳಿದ್ದಾರೆ. ಆದರೆ ಸುಮಲತಾ ಯಾರ ಪರ ಇದ್ದಾರೆ ಎಂಬುದು ತಿಳಿದು ಬಂದಿಲ್ಲ ಅವರು ಯಾರ ಪರವಾಗಿ ಪ್ರಚಾರಕ್ಕೆ ಬರುತ್ತಾರೆ ಎಂಬ ಕುತುಹಲ ಎಲ್ಲರಲ್ಲು ಇದೆ .






