ರಾಯಚೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಮಂಡ್ಯ ಲೋಕಸಭೆ ಚುನಾವಣೆ ಬಗ್ಗೆ ಪ್ರತಿಕ್ರಿಯೆ ನೀಡಿದರು. ಬಾಯಿ ತಪ್ಪಿ ಸುಮಲತಾ ಅಂಬರೀಷ್ ಸೋಲು ನಿಶ್ಚಿತವೆಂದು ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ. ಮಂಡ್ಯದಲ್ಲಿ ಅಂಬರೀಷ್ ಅವರಿಗೆ ಅಪಮಾನ ಮಾಡಲಾಗುತ್ತಿದೆ ಎಂದು ಪ್ರತಿಪಕ್ಷಗಳ ವಿರುದ್ಧ ಬಿಎಸ್ವೈ ಕಿಡಿಕಾರಿದ್ದಾರೆ.
ಸಿಎಂ ಹೆಚ್ ಡಿ ಕುಮಾರಸ್ವಾಮಿ ತಮ್ಮ ಮಗನನ್ನು ಗೆಲ್ಲಿಸಲು ಮಂಡ್ಯದಲ್ಲಿ ಕುಳಿತಿದ್ದಾರೆ. ಸುಮಲತಾ ವಿರುದ್ಧ ನಾನಾ ಆರೋಪ ಮಾಡುತ್ತಿದ್ದಾರೆ.ಜನರ ದುಡ್ಡು ಲೂಟಿ ಮಾಡಿ ಮಗನನ್ನು ಗೆಲ್ಲಿಸಲು ಸಿಎಂ ಹೊರಟಿದ್ದಾರೆ,. ಜನರು ಇದಕ್ಕೆ ತಕ್ಕ ಪಾಠ ಕಲಿಸುತ್ತಾರೆ ಎಂದು ಬಿಎಸ್ವೈ ಕಿಡಿಕಾರಿದರು.