ಸುಮಲತಾ ಬರೀ ಗೆಲ್ಲೋದು ಮಾತ್ರ ಅಲ್ಲ..! ಗೆದ್ದು ಕೇಂದ್ರ ಸಚಿವರೂ ಆಗ್ತಾರೆ..?

admin
By admin
1 Min Read

ನಿನ್ನೆ ನಡೆದ ಸುದ್ದಿಗೋಷ್ಠಿಯಲ್ಲಿ ಬಹಿರಂಗವಾಗಿಯೇ ಭವಿಷ್ಯ ನುಡಿದ ಬಸವಕಲ್ಯಾಣದ ಬಸವಧರ್ಮ ಪ್ರಸಾರಕ ಶ್ರೀ ಬಸವಾನಂದಸ್ವಾಮಿ ವಿಭೂತಿಮಠ ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಗೆಲುವು ಸಾಧಿಸುವುದರ ಜತೆಗೆ ಕೇಂದ್ರ ಸಚಿವರಾಗುವುದು ಖಚಿತ ಎಂದು ಹೇಳಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

ಬೀದರ್ ಜಿಲ್ಲೆ ಬಸವಕಲ್ಯಾಣದ ಬಸವಧರ್ಮ ಪ್ರಸಾರಕ ಶ್ರೀ ಬಸವಾನಂದಸ್ವಾಮಿ ವಿಭೂತಿಮಠ ಸುದ್ದಿಗೋಷ್ಠಿಯಲ್ಲಿ
ಮಾತನಾಡುತ್ತಾ ಸುಮಲತಾ ಅಂಬರೀಶ್ ಅವರು ಚುನಾವಣೆಯಲ್ಲಿ ಪ್ರಬುದ್ಧತೆಯಿಂದ ಮಾತಾಡುವುದರ ಜತೆಗೆ ಎಲ್ಲ ಸಮುದಾಯದವರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ ಅಲ್ಲದೆ ಚುನಾವಣೆ ಸಮಯದಲ್ಲಿ ಅವರು ಆಡಿದ ಪ್ರತಿ ಮಾತು ಸುಮಧುರ, ಸುಸಂಸ್ಕೃತವಾಗಿತ್ತು ಎಂದಿದ್ದಾರೆ.

ಕಳೆದ ಚುನಾವಣೆಗೆ ಹೋಲಿಸಿದರೆ ಈ ಬಾರಿ ಹೆಚ್ಚಿನ ಮತದಾನವಾಗಿದೆ ಇದು ಸುಮಲತಾ ಅಂಬರೀಶ್ ಅವರಿಗೆ ಸಹಾಯವಾಗಲಿದೆ ಹಾಗಾಗಿ ಗೆಲುವು ಖಚಿತವಾಗಿದೆ ಅಲ್ಲದೆ ಅವರ ಸಾಮರ್ಥ್ಯಕ್ಕೆ ತಕ್ಕಂತೆ ಸಚಿವ ಸ್ಥಾನವನ್ನು ಸಹ ಕೇಂದ್ರದಲ್ಲಿ ಪಡೆಯಲಿದ್ದಾರೆ ಎಂದು ತಿಳಿಸಿದ್ದಾರೆ.

 

Share This Article