No menu items!
17.6 C
Munich
Wednesday, April 29, 2026

ಇಂದು ಅಕ್ಷಯ ತೃತೀಯ.. ನೀವು ಏನೆಲ್ಲಾ ಮಾಡಲೇ ಬೇಕು?

Must read

ವೈಶಾಖ ಮಾಸದ ಮೂರನೇ ದಿನ ಅಕ್ಷಯ ತೃತೀಯ.ಇದು ಕ್ಷಯ ವಿಲ್ಲದ ಶುಭದಿನ ಇಂದು ಬಂಗಾರ ಖರೀದಿ ಮಾಡಿದ್ರೆ ಅದು ಅಕ್ಷಯ ಅಂದರೆ ಹೆಚ್ಚಾಗುತ್ತಲೇ ಹೋಗುತ್ತದೆ. ಹೊಸ ಉದ್ಯೋಗ ಆರಂಭಿಸಲು ಇದು ಸುದಿನ. ಈ ಶುಭದಿನದಂದು ನೀವು ಏನು ಮಾಡಬೇಕು ಎನ್ನುವುದರ ಬಗ್ಗೆ ಇಲ್ಲಿದೆ,
ಇದು ಪುರಾಣ, ಇತಿಹಾಸದಲ್ಲಿಯೂ ಬಹಳ ಮುಖ್ಯವಾದ ದಿನ ಪಾಂಡವರ ಪತ್ನಿ ದ್ರೌಪದಿಗೆ ಸೂರ್ಯದೇವನಿಂದ ಅಕ್ಷಯಪಾತ್ರೆ ದೊರೆತ ಶುಭ ದಿನ ಇಂದು. ಪರಶುರಾಮ ಅವತರಿಸಿದ ಸುದಿನವೂ ಸಹ ಇಂದೇ. ಇದೇ ದಿನ ಮಾಹಾಭಾರತ ಕೂಡ ರಚನೆಯಾಗಿದ್ದು.
ಈ ದಿನ ಏನ್ ಮಾಡಿದರೆ ಒಳ್ಳೆಯದು?
* ಶ್ರೀಕೃಷ್ಣನ ಅವತಾರ ಪರಶುರಾಮರು ಇಂದು ಅವತರಿಸಿದ ದಿನ. ಈ ದಿನ ಪರಶುರಾಮನನ್ನು ನೆನೆದರೆ ಒಳ್ಳೆಯದು. ಹರೇಕೃಷ್ಣ ಮಹಾ ಮಂತ್ರವನ್ನು 108 ಸಲ ಜಪಿಸಿರಿ.
* ಇದೇ ದಿನ ಮಹಾಭಾರತವು ವ್ಯಾಸದೇವರಿಂದ ರಚಿಸಲ್ಪಟ್ಟಿತು. ಮಹಾಭಾರತದಲ್ಲಿರುವ ಭಗವದ್ಗೀತೆ ಇದೆಯಲ್ಲಾ ಅದು ಸಮಸ್ತ ವೇದಗಳ ಸಾರ. ಆದ್ದರಿಂದ ಭಗವದ್ಗೀತೆಯನ್ನು ನಿಯಮಿತವಾಗಿ ಪಾರಾಯಣ ಮಾಡುತ್ತಾರೋ ಅವರ ಪಾಪಗಳೆಲ್ಲವೂ ನಿವಾರಣೆಯಾಗುತ್ತದೆ. ಇಂದಾದರೂ ಪೂರ್ಣ ಭಗವದ್ಗೀತೆಯನ್ನು ಓದಿ. ಅದು ಸಾಧ್ಯವಾಗದೆ ಇದ್ದರೆ ಕನಿಷ್ಠ 18ನೇ ಅದ್ಯಾಯವನ್ನಾದರೂ ಓದಿ.
* ಹಿರಿಯರನ್ನು, ಪೂರ್ವಿಕರನ್ನು ಸ್ಮರಿಸಿ, ಪೂಜಿಸಿ.. ಅಗಲಿದವರಿಗೆ ಇಂದು ತರ್ಪಣ ನೀಡಬಹುದು.
* ಅನ್ನದಾನ ಮಾಡಿ. ಬಡವರಿಗೆ ಕೈಲಾದಷ್ಟು ಸಹಾಯ ಮಾಡಿ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article